(ವಿಶ್ವ ಕನ್ನಡಿಗ ನ್ಯೂಸ್) : ಬಂಟ್ವಾಳದಲ್ಲಿ ಬಿಜೆಪಿ ಶಾಸಕ ರಾಜೇಶ್ ನಾಯಕ್ ಅವರ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ನವರಿಗೆ ಹತ್ತು ಸಾವಿರ ಕೋಟಿ ಲೂಟಿ ಮಾಡುವ ಎಟಿಎಂ ಬೇಕು. ಲೋಕಸಭಾ ಚುನಾವಣೆಗೆ ಇಲ್ಲಿನ ಹಣ ಬೇಕು, ಅದಕ್ಕಾಗಿ ಏನಾದರೂ ಸುಳ್ಳು ಹೇಳಿ ಗೆಲ್ಲಬೇಕು ಎಂದಿದ್ದಾರೆ.
ಬಂಟ್ವಾಳ ಕ್ಷೇತ್ರಕ್ಕೆ ಎರಡು ಇತಿಹಾಸ ಇದೆ. ಮೊದಲ ಇತಿಹಾಸದಲ್ಲಿ ಬಂಟ್ವಾಳವನ್ನು ಕೋಮುಗಲಭೆ ಅಧಿಕ ಇರೋ ಜಾಗ ಅಂತಾರೆ. ಒಂದು ಕೊಲೆಗೆ 48 ಗಂಟೆಯಲ್ಲಿ ರಿವೆಂಜ್ ಮರ್ಡರ್ ಆಗುತ್ತೆ. ಪೊಲೀಸರು ಬರ್ತಾರೆ, ಪೊಲಿಟಿಷಿಯನ್ ಬಂದು ಭಾಷಣ ಮಾಡಿ ಮತ್ತೆ ತುಪ್ಪ ಸುರೀತಾರೆ. ಇದರ ಮಧ್ಯೆ ಆಟೋ ಚಾಲಕರು, ವ್ಯಾಪಾರಿಗಳು ಸೇರಿ ಹಲವರು ಕೋಮು ಗಲಭೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಟ್ವಾಳದಲ್ಲಿ ಇನ್ನೊಂದು ಇತಿಹಾಸ ಈ ಐದು ವರ್ಷದಲ್ಲಿ ಸೃಷ್ಟಿಯಾಗಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಹೇಳಿದ ಸುಳ್ಳುಗಳನ್ನೇ ಇಲ್ಲಿ ಕಾಂಗ್ರೆಸ್ ಹೇಳ್ತಿದೆ. ತಮಿಳುನಾಡಿನಲ್ಲಿ ಹೆಣ್ಮಗಳಿಗೆ ಒಂದು ಸಾವಿರ ಕೊಡ್ತೇವೆ ಅಂತ ಹೇಳಿತ್ತು. ಆದರೆ 21 ತಿಂಗಳಾದರೂ ಒಬ್ಬಳೇ ಹೆಣ್ಮಗಳಿಗೆ ಹಣ ಬಂದಿಲ್ಲ. ಅದೇ ಭರವಸೆಯನ್ನ ಪ್ರಿಯಾಂಕಾ ಗಾಂಧಿ ಇಲ್ಲಿ ಹೆಣ್ಮಗಳಿಗೆ ಎರಡು ಸಾವಿರ ಕೊಡ್ತೀವಿ ಅಂತಿದಾರೆ. ಎರಡು ಸಾವಿರ ಹಣ ಕೊಡಲು ಸಾಧ್ಯವೇ ಇಲ್ಲ. ಮಾತನಾಡೋದು, ಘೋಷಣೆ ಮಾಡೋದು ದೊಡ್ಡ ವಿಷಯವೇ ಅಲ್ಲ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.