ಚಿತ್ರದುರ್ಗ(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ಧಣಿವರಿಯದೆ ಕಾರ್ಯಾಚರಿಸುತ್ತಿರುವ “ಇಹ್ಸಾನ್ ಕರ್ನಾಟಕ” ಇಹ್ಸಾನ್ ನಾಯಕರ, ದಾಯಿಗಳ, KCF ಕಾರ್ಯಕರ್ತರ ಸತತ ಪರಿಶ್ರಮದ ಫಲವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಉತ್ತರ ಕರ್ನಾಟಕದಾದ್ಯಂತ SSF ನ ಮೂಲಕ ಪರಿಚಯಿಸಲ್ಪಟ್ಟ ಇಹ್ಸಾನ್ ಇಂದು ಕೂಡಾ ಅದೇ SSF ಸಂಘಟನೆ ಹೆಸರಲ್ಲೇ ಪ್ರಸಿದ್ಧಿಯನ್ನು ಪಡೆದಿದೆ. “ಸಂಘಟನೆಯಲ್ಲಿ ದುಡಿದ ಹಿರಿಯ ನಾಯಕರ ದೊಡ್ಡ ಕನಸಾಗಿತ್ತು ಇಹ್ಸಾನ್.” ದಅವಾ ರಂಗದಲ್ಲಿ ಹೊಸ ಸಾಧನೆಯ ಮೈಲುಗಳನ್ನೇ ಇಹ್ಸಾನ್ ದಾಟಿದೆ. ಅಕ್ಷರ ಕ್ರಾಂತಿಗಿಂತ ಮಿಗಿಲಾದ ಬದಲಾವಣೆಯ ಕ್ರಾಂತಿ ಬೇರೆ ಇಲ್ಲ.ಮೊದಲ ಭಾಗವಾಗಿ ಕೇವಲ ಕೆಲವು ಹಳ್ಳಿ ದಅವಕ್ಕೆ ಮಾತ್ರ ಸೀಮಿತ ವಾಗಿದ್ದ ಇಹ್ಸಾನ್ ನ ಕಾರ್ಯಾಚಟುವಟಿಕೆ ಕ್ರಮೇಣವಾಗಿ ಸ್ವತಃ ಸಂಸ್ಥೆ ಗಳನ್ನು ನಿರ್ಮಿಸುವತ್ತ ಗಮನ ಹರಿಸಿತು. ಹಿರಿಯ ಸಂಘಟನಾ ನಾಯಕರ ಕನಸೊಂದು ಉತ್ತರದಲ್ಲಿ ನನಸಾಗಿದೆ. ಸುನ್ನೀ ಸಂಘಟನೆಗಳಿಗೆ ಒಂದಿಂಚು ಸ್ವಂತ ಭೂಮಿ ಇಲ್ಲದ ಸಂದರ್ಭದಲ್ಲಿ ಆಗಿತ್ತು ಇಹ್ಸಾನಿಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹತ್ತಾರು ಎಕರೆ ಭೂಮಿ ಉಚಿತವಾಗಿ ಲಭಿಸಿದ್ದು, ಇನ್ನೂ ಲಭಿಸುತ್ತಲೇ ಇರುವುದು. ಇದಕ್ಕೆ ಕಾರಣ ಸುಲ್ತಾನುಲ್ ಉಲಮಾ ಶೈಖುನಾ A. P. ಉಸ್ತಾದರ ಕರ್ನಾಟಕ ಯಾತ್ರೆ. ಅದೊಂದು ಸ್ಫೂರ್ತಿಯ, ಆವೇಶದ, ಬದಲಾವಣೆ ಯ ಯಾತ್ರೆ ಯಾಗಿತ್ತು, ಇಡೀ ಜಗತ್ತು ಅಂಗೀಕರಿಸುವ ನಾಯಕನಿಗೆ ಸಿಕ್ಕ ಗೌರವ ಕೂಡಾ ಅದಾಗಿತ್ತು. ಕರ್ನಾಟಕ ಯಾತ್ರೆಯೊಂದಿಗೆ “ಇಹ್ಸಾನ್ ಕರ್ನಾಟಕ”ದ ಜೈತ್ರ ಯಾತ್ರೆ ಮುಂದುವರಿಯಿತು. *”ಹಿರಿಯ ನಾಯಕರಾದ SP ಹಂಝ ಸಖಾಫಿ, ಅಬ್ದುರ್ರಶೀದ್ ಝೈನಿ ” ಯವರಂತ ಸಂಘಟನಾ ನಾಯಕರು ಮೊದಲ ಭಾಗದಲ್ಲಿ ಕಟ್ಟಿ ಬೆಳೆಸಿದ ಇಹ್ಸಾನ್ ನಂತರ ಮೌಲಾನಾ ಶಾಫಿ ಸಅದಿ ಬೆಂಗಳೂರು ರವರ ನಾಯಕತ್ವದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಮಾಡಿತು.
KCF ಬಹರೈನ್ ಪ್ರಾಯೋಜಕತ್ವದ ಚಿತ್ರದುರ್ಗದ ಸೀಬಾರ್ ಸೆಂಟರ್ , KCF ಸೌದಿ ಅರೇಬಿಯಾ ಪ್ರಾಯೋಜಕತ್ವದ ಹುಬ್ಬಳ್ಳಿ ಯ ಸೋನಿಯಾಗಾಂಧಿ ನಗರ ಸೆಂಟರ್ , KCF ಸೌದಿ ಅಲ್ ಗಸೀಮ್ ಪ್ರಾಯೋಜಕತ್ವ ದ ಕೊಪ್ಪಳದ ಕಾರಟಗಿ ಸೆಂಟರ್ , KCF ಒಮಾನ್ ಪ್ರಾಯೋಜಕತ್ವದ ದಾವಣಗೆರೆ ಗೆರೆಯ ಜಗಳೂರು ಸೆಂಟರ್ , ಶಿವಮೊಗ್ಗ ಸೆಂಟರ್ ಗಳು ಇಹ್ಸಾನಿನ ಸ್ವಂತ ಹೆಸರಲ್ಲಿ ನೋಂದಣಿ ಗೊಂಡಿದೆ.
ಈಗಾಗಲೇ ಇಲ್ಲಿ ಸ್ವಂತ ಸಂಸ್ಥೆ ಗಳನ್ನು ಹೊಂದಿದ್ದು. ನೂರಾರು ಮಕ್ಕಳು ಇಲ್ಲಿ ಧಾರ್ಮಿಕ ಲೌಕಿಕ ವಿದ್ಯಾಭ್ಯಾಸ ವನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. *ಜೊತೆಗೆ ದಾವಣಗೆರೆ ಜಿಲ್ಲೆಯ ಹರಿಹರ ದಲ್ಲಿ ಸ್ವಂತ ಕಟ್ಟಡ ಇಲ್ಲದಿದ್ದರೂ ಇಹ್ಸಾನ್ ನಾಯಕರ ಹಾಗೂ ದಾಯೀಗಳ ಕಠಿಣ ಪರಿಶ್ರಮ ದಿಂದಾಗಿ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿಯೂ ಅಲ್ಲದೆಯೂ ಕಲಿಯುತ್ತಿದ್ದಾರೆ. ಇಹ್ಸಾನ್ ನಾಲೆಡ್ಜ್ ವಿಲೇಜ್ ಸೀಬಾರ್ ನ ಹಾಸ್ಟೆಲ್ ನಲ್ಲಿ ನೂರರಷ್ಟು ವಿದ್ಯಾರ್ಥಿಗಳು , ಜಗಳೂರಿನ ಮಾಝಿನ್ ಹೆರಿಟೇಜ್ ನಲ್ಲಿ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದು ಕಲಿಯುತ್ತಿದ್ದಾರೆ.ಸುಮಾರು 30 ರಷ್ಟು ಶಾಫಿ 30 ರಷ್ಟು ಹನಫಿ ದಾಯಿಗಳ ಸಹಕಾರದೊಂದಿಗೆ ಸಾವಿರಾರು ಮಕ್ಕಳು ಮಾದರಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆ ಮೂಲಕ ಸಾವಿರಾರು ಹನಫಿ ಉಲಮಾ ಉಮಾರಾ ನಾಯಕರು ಇಹ್ಸಾನ್ ನತ್ತ ಆಕರ್ಷಿತ ರಾಗುತ್ತಿದ್ದಾರೆ. *ಅದರಲ್ಲೂ ಮೌಲಾನಾ ಶಾಫಿ ಸಅದಿ ಯವರು ರಾಜ್ಯ ವಕ್ಫ್ ಮಂಡಳಿ ಯ ಅಧ್ಯಕ್ಷರಾದ ಬಳಿಕ ಇಹ್ಸಾನ್ ಗೆ ಮತ್ತಷ್ಟು ಜನ ಮನ್ನಣೆ ಸಿಗುತ್ತಿದೆ. ಇದೆಲ್ಲದರ ಹಿಂದೆ “ಇಹ್ಸಾನ್ ಕರ್ನಾಟಕ”ದ ಬೆನ್ನೆಲುಬಾಗಿ ನಿಂತಿರುವುದು ಅನಿವಾಸಿ ಕನ್ನಡಿಗರ ವಿದೇಶಿ ಸಂಘಟನೆಯಾದ “ಕರ್ನಾಟಕ ಕಲ್ಚರಲ್ ಫೌಂಡೇಶನ್ KCF” ವಿದೇಶದಲ್ಲಿ ದುಡಿದು ತನ್ನ ಕುಟುಂಬವನ್ನು ಸಾಕಿಸಲಹುವ ದೊಡ್ಡ ಜವಾಬ್ದಾರಿ ಹೊತ್ತ ಅನಿವಾಸಿಗಳು ತನ್ನ ಸ್ವಂತಕ್ಕಿಂತಲೂ ಮಿಗಿಲಾಗಿ ಇಹ್ಸಾನ್ ಸಂಘಟನೆ ಯನ್ನು ಪೋಶಿಸುತ್ತಿರುವುದು ಇಹ್ಸಾನ್ ಕಾರ್ಯಾಚರಣೆ ಗೆ ಹೈ ವೋಲ್ಟೇಜ್ ನೀಡಿದಂತಾಗಿದೆ.
“KCF” ಘಟಕ ಗಳ ವತಿಯಿಂದ ಈಗಾಗಲೇ ಹತ್ತಾರು ಶೆಡ್ ಮದ್ರಸ ಗಳು ನಿರ್ಮಾಣಕ್ಕಾಗಿ ಸಜ್ಜಾಗಿ ನಿಂತಿದ್ದು, ವಿವಿಧ KCF ಝೋನ್ ಗಳು ಉತ್ತರದ ಜಿಲ್ಲೆಗಳಲ್ಲಿ ಸಂಸ್ಥೆ ಗಳ ನಿರ್ಮಾಣಕ್ಕೆ ಹಾತೊರೆಯುತ್ತಿದೆ.ಅಲ್ಲಾಹು ಅವರನ್ನು ಅನುಗ್ರಹಿಸಲಿ ಆಮೀನ್. ಇದೀಗ ಇಹ್ಸಾನ್ ತನ್ನ ಕರ್ಮ ರಂಗದ, ದಅವಾ ಕ್ಷೇತ್ರದ ಹತ್ತು ಸಂವತ್ಸರ ದಾಟುವ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ “KCF” ಘಟಕಗಳು ಇದರ ಸಂಭ್ರಮಾಚಾರಣೆ ಯಲ್ಲಿರುವಾಗ “ಇಹ್ಸಾನ್ ನಾಯಕರ ಹಾಗೂ KCF ನಾಯಕರ” ಅಭಿಲಾಷೆ ಯಂತೆ ಇಹ್ಸಾನ್ ಅಧೀನದ ಮದ್ರಸ ವಿದ್ಯಾರ್ಥಿ ಗಳ ಒಂದು ಸಂಗಮ ವನ್ನು ಗ್ರ್ಯಾಂಡ್ ಅಸೆಂಬ್ಲಿಯ ಹೆಸರಿನಲ್ಲಿ ನಡೆಸಲು ತೀರ್ಮಾನಿಸಿದ್ದು ಇದೇ ಬರುವ ಫೆಬ್ರವರಿ 05 ಭಾನುವಾರ *ಸಯ್ಯಿದ್ ಕುಟುಂಬದ ಕಣ್ಮಣಿ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಕೂರತ್ ತಂಙಳ್ ರವರ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ಚಿತ್ರದುರ್ಗ ದ ಸೀಬಾರ್ ಇಹ್ಸಾನ್ ಸೆಂಟರ್ ನ ಪ್ರಕೃತಿ ರಮಣೀಯ ಪರಿಸರದಲ್ಲಿ ನಡೆಯುವಾಗ ಇದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿರುವ KCF ನ ಪ್ರತೀ ಘಟಕಗಳ ಕಾರ್ಯಕರ್ತರು ಇಹ್ಸಾನ್ ನ ಹಿತೈಷಿ ಗಳು ಸಂಭ್ರಮ ಪಡುವ ಕ್ಷಣ.
ನಾಡಿನ, ವಿದೇಶಗಳ ಸಂಘಟನಾ ನಾಯಕರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಸಾಕ್ಷಿ ಯಾಗುವ ಈ ಸಂಭ್ರಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಇಹ್ಸಾನ್ ಕರ್ನಾಟಕ ಟ್ರಸ್ಟ್ ನವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.