(www.vknews.in) ; ಭಾರತದ ಪ್ರಥಮ ಟ್ರಾನ್ಸ್ಜೆಂಡರ್ ಪ್ರಗ್ನೆನ್ಸಿ ಎಂದು ಸುದ್ದಿ ಮಾಡುತ್ತಿರುವ ಹಲವಾರು ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ಗಳು ಗಮನದಲ್ಲಿ ಬಂತು.ಮೇಲೆ ಚಿತ್ರದಲ್ಲಿರುವುದು ಜೈವಿಕವಾಗಿ ಹೆಣ್ಣಿನ ಲಕ್ಷಣಗಳನ್ನು ಹೊಂದಿದ ವ್ಯಕ್ತಿ ಗರ್ಭಿಣಿಯಾದದ್ದು ಮಾತ್ರ, ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ನೈಸರ್ಗಿಕವಾಗಿ ಬಸುರಿಯಾಗುವ ಪ್ರಕ್ರಿಯೆ, ಇದರಲ್ಲಿನ ಆವಿಷ್ಕಾರಕ್ಕೆ ವಿಜ್ಞಾನದ ಯಾವುದೇ ಸಾಧನೆಗಳು ಕಂಡುಬರುವುದಿಲ್ಲ.
ಇದರಲ್ಲಿರುವ ಒಂದೇ ಒಂದು ವ್ಯತ್ಯಾಸ ಸ್ತ್ರೀ ಲಕ್ಷಣ ಹಾಗೂ ಹಾರ್ಮೋನ್ ಇರುವ ಮಹಿಳೆ ತನ್ನ ಸ್ತನವನ್ನು ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ತಾನು ಪುರುಷ ಎಂದು ಸ್ವತಃ ಹೇಳುವ ಅವೈಜ್ಞಾನಿಕ ನಿಲುವುಗಳು ಮಾತ್ರ. ಸ್ತ್ರೀ ಶರೀರವನ್ನು ಹೊಂದಿ ಹಾರ್ಮೋನ್ ಚಿಕಿತ್ಸೆ ನಡೆಸುವುದರ ಮೂಲಕ, ತನ್ನ ಸ್ತನವನ್ನು ಛೇದಿಸಿ ಸ್ವತಃ ತಾನು ಹುಡುಗ ಎಂದು ಹೇಳುವ ಒಬ್ಬ ಟ್ರಾನ್ಸ್ಮ್ಯಾನ್ ಅಥವಾ ಹುಡುಗಿಯಿಂದ ಪರಿವರ್ತನೆಯಾದ ಗಂಡಸಿನ ರೀತಿಯ ಸ್ತ್ರೀ.
ಎಷ್ಟು ವೇಷ ವಿಧಾನವನ್ನು ಬದಲಿಸಿದರೂ ಸ್ತ್ರೀಯು ಪುರುಷನಾಗಬಲ್ಲಳು,ಅದೇ ರೀತಿ ಸ್ತ್ರೀ ಬೀಜವನ್ನು ಸ್ವೀಕರಿಸಿ ಪುರುಷನೊಬ್ಬ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆ ಕೂಡ ಅವೈಜ್ಞಾನಿಕವಾದ ಮಾತು. ಈ ಕಾರಣದಿಂದಲೇ ಜಗತ್ತಿನ ಪ್ರತಿ ಸ್ತ್ರೀಯು ಪುರುಷನ ವೀರ್ಯವನ್ನು ಸ್ವೀಕರಿಸಿ ಬಸುರಿಯಾಗುವುದು.
ಮೇಲಿನ ಫೋಟೋದಲ್ಲಿ ಕಾಣುವ ಸ್ತ್ರೀಯಿಂದ ಪುರುಷನಾಗಿ ಸ್ವತಃ ಪರಿವರ್ತನೆಯಾದವಳ ಬಳಿ ನಿಂತಿರುವುದು ಅವಳ ದಂಪತಿ ಟ್ರಾನ್ಸ್ ವಿಮನ್. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಪುರುಷನಾಗಿ ಜನ್ಮತಾಳಿ ಪುರುಷನ ಹಾರ್ಮೋನ್ಗಳು ಹಾಗೂ ಸಂಪೂರ್ಣ ಪುರುಷ ಲಕ್ಷಣ ಹೊಂದಿದ ಜಗತ್ತಿನ ಇತರ ಪುರುಷದ ಹಾಗೆ ನೈಸರ್ಗಿಕವಾದ ಎಲ್ಲಾ ಜೈವಿಕ ಪ್ರಕ್ರಿಯೆಯನ್ನು ಮಾಡಬಲ್ಲ ಒಬ್ಬ ಪುರುಷ, ಸ್ತ್ರೀಯ ವೇಷ ವಿಧಾನವನ್ನು ಸ್ವೀಕರಿಸಿದ್ದಾನೆ ಎಂಬುದು ಮಾತ್ರ ಇಲ್ಲಿನ ವಿಶೇಷ. ಒಬ್ಬ ಪುರುಷ ಸೀರೆಯನ್ನು ತೊಟ್ಟು ತಾನು ಮಹಿಳೆ ಎಂದು ಸ್ವತಃ ಅವಕಾಶವಾದವನ್ನು ಸಲ್ಲಿಸಿದರೆ ಒಪ್ಪಿಕೊಳ್ಳಲು ಸಾಧ್ಯವೇ?
ಜಗತ್ತಿನಲ್ಲಿ ಇತರ ಪುರುಷರು ನಡೆಸುವ ಸಂತಾನೋತ್ಪತ್ತಿಯನ್ನು ಟ್ರಾನ್ಸ್ ವಿಮೆನಾಗಿ ಪರಿವರ್ತನೆಯಾದ ವ್ಯಕ್ತಿಗೆ ಕೂಡ ನಡೆಸಲು ಸಾಧ್ಯ. ಟ್ರಾನ್ಸ್ ವಿಮನ್ ತನ್ನ ಪುರುಷ ವೀರ್ಯದಿಂದ ನೈಸರ್ಗಿಕವಾದ ಜೈವಿಕ ಪ್ರಕ್ರಿಯೆಯಿಂದ ಪುರುಷರ ರೀತಿಯಲ್ಲೇ ಜನ್ಮವನ್ನು ನೀಡಬಹುದು.ಒಬ್ಬ ಪುರುಷ ಸೀರೆ ಧರಿಸುವುದರಿಂದ ಮಾತ್ರ ಆತ ಮಹಿಳೆಯಾಗಿ ಪರಿವರ್ತನೆಯಾಗಬಲ್ಲನು. ಸಂಕ್ಷಿಪ್ತವಾಗಿ ಹೇಳಿದರೆ ಪ್ರಸ್ತುತ ಸುದ್ದಿಯಾದ ಸಂತಾನೋತ್ಪತ್ತಿಯು ಜಗತ್ತಿನಲ್ಲಿ ಸ್ತ್ರೀ ಪುರುಷನು ನಡೆಸುವ ನೈಸರ್ಗಿಕವಾದ ಸ್ಟ್ರೈಟ್ ಫಾರ್ವರ್ಡ್ ಪ್ರೆಗ್ನೆನ್ಸಿ ಮಾತ್ರವಾಗಿದೆ.ಅದಲ್ಲದೆ ಶಾಸ್ತ್ರದ ಯಾವುದೇ ರೀತಿಯ ಸಾಧನೆಗಳು ಕಂಡುಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಂದಂತಹ ವೈದ್ಯಕೀಯ ರಿಸರ್ಚ್ಗಳನ್ನು ಗಮನಿಸುವುದಾದರೆ ಈ ರೀತಿಯಾಗಿ ಜನ್ಮ ನೀಡಿ ಪಡೆದಂತಹ ಸಂತಾನವು ಮಾನಸಿಕವಾಗಿ ಅಥವಾ ಶಾರೀರಿಕವಾಗಿ ವೈಕಲ್ಯವನ್ನು ಹೊಂದುವ ಸಂಭವನೀಯತೆ ಹೆಚ್ಚು. ಕಾರಣ ಮಗುವಿಗೆ ಜನ್ಮ ನೀಡುವ ತಾಯಿಯು ಮಗು ಜನಿಸುವುದಕ್ಕಿಂತ ಮುಂಚಿತವಾಗಿ ತನ್ನ ಸ್ತನ ಕತ್ತರಿಸಿಬಿಟ್ಟಳು. ತಾಯಿಗೆ ಮಗುವಿಗೆ ಬೇಕಾಗಿ ಎದೆ ಹಾಲನ್ನುಣಿಸಲು ಸಾಧ್ಯವಾಗುವುದಿಲ್ಲ. ಸ್ತ್ರೀಯ ಪವಿತ್ರವಾದ ಎದೆಹಾಲಿನಲ್ಲಿ ಮಗುವಿಗೆ ಬೇಕಾದ ಪೋಷಕಾಂಶಗಳು ಹಾಗೂ ರೋಗ ಪ್ರತಿರೋಧ ಶಕ್ತಿಯು ಎತೇಚ್ಛವಾಗಿದೆ. ಇತರ ಮಗುವನ್ನು ಹೋಲಿಸಿದರೆ ಈ ರೀತಿಯಾಗಿ ಜನಿಸಿದ ಮಗುವಿಗೆ ಎದೆ ಹಾಲಿನಲ್ಲಿರುವ ಪೋಷಕಾಂಶಗಳ ಕೊರತೆಯಿಂದ ಬೆಳವಣಿಗೆಯಲ್ಲಿ ಏರುಪೇರು ಹಾಗೂ ಬುದ್ಧಿಶಕ್ತಿ (IQ) ಕಡಿಮೆ ಪ್ರಮಾಣದಲ್ಲಿರುತ್ತದೆ.
✍🏻ಸಹದ್ ಕರ್ನೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.