ವಾಷಿಂಗ್ಟನ್ (ವಿಶ್ವ ಕನ್ನಡಿಗ ನ್ಯೂಸ್) : ಯುಎಸ್ ವಾಯುಪ್ರದೇಶದಲ್ಲಿ ಪತ್ತೆಯಾದ ಚೀನಾದ ಗೂಢಚರ್ಯೆ ಬಲೂನ್ ಅನ್ನು ಹೊಡೆದುರುಳಿಸಲಾಗಿದೆ. ಬಲೂನ್ ಅನ್ನು ದಕ್ಷಿಣ ಕೆರೊಲಿನಾ ಕರಾವಳಿಯಲ್ಲಿ ಹೊಡೆದುರುಳಿಸಲಾಗಿದೆ. ಬಲೂನ್ ಅಟ್ಲಾಂಟಿಕ್ ಸಾಗರದಲ್ಲಿ ಇಳಿಯಿತು. ಅಧ್ಯಕ್ಷ ಜೋ ಬೈಡನ್ ಅವರ ಅನುಮೋದನೆಯೊಂದಿಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಮೂರು ವಿಮಾನ ನಿಲ್ದಾಣಗಳನ್ನು ಮುಚ್ಚಿದ ನಂತರ ಮಿಲಿಟರಿ ಕ್ರಮ ತೆಗೆದುಕೊಳ್ಳಲಾಗಿದೆ. ಬಲೂನ್ ಅವಶೇಷಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಲೂನನ್ನು ಹೊಡೆದುರುಳಿಸಿದ ಸೈನಿಕರನ್ನು ಜೋ ಬೈಡನ್ ಅಭಿನಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.