(www.vknews.in) ; ದಕ್ಷಿಣ ಕನ್ನಡ ಜಿಲ್ಲಾ ಎಸ್ಡಿಎಂಸಿ ಸಮಾವೇಶದ ಪ್ರಯುಕ್ತ ಇಂದು ಪುತ್ತೂರಿನ ಸಣ್ಣ ಕೈಗಾರಿಕಾ ನಿಗಮದ ಸಭಾ ಭವನದಲ್ಲಿ ೫ನೆಯ ಪೂರ್ವ ಭಾವಿ ಸಭೆಯು ನಡೆಯಿತು. ಜಿಲ್ಲೆಯ ಎಲ್ಲಾ ತಾಲೂಕಿನ ಪ್ರತಿನಿಧಿಗಳು ಪಾಲ್ಗೊಂಡಿದ್ದು ಕಾರ್ಯಕ್ರಮದ ಯಶಸ್ಸಿಗೆ ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಯಶಸ್ಸಿಗಾಗಿ ಸಂಚಾಲಕರಾಗಿ ಚಂದ್ರಶೇಖರ್ ಕೊಂಕನಾಜೆ ಹಾಗೂ ತಾಲೂಕುವಾರು ಸಹ ಸಂಚಾಲಕರನ್ನೂ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಪ್ರಯುಕ್ತ ಆರ್ಥಿಕ ಕ್ರೋಢೀಕರಣ ಕ್ಕಾಗಿ ದಾನಿಗಳ ಪಟ್ಟಿ ಮಾಡಿ ಅವರನ್ನು ಭೇಟಿ ಮಾಡಲು ಹಾಗೂ ಅದಕ್ಕಾಗಿ ಆರ್ಥಿಕ ಸಮಿತಿಯನ್ನು ನೇಮಿಸಲಾಯಿತು.
ಅದೇ ರೀತಿ ಇಲಾಖೆಯು ಕೊಟ್ಟಂತಹ ಒಳ್ಲೆಯ ಶಾಲೆ ಹಾಗೂ ಎಸ್ಡಿಎಂಸಿ ಗಳನ್ನು ಆದಷ್ಟು ಬೇಗ ಭೇಟಿ ಮಾಡಿ ವಸ್ತು ನಿಷ್ಠ ವರದಿಯನ್ನು ತಂದು ಪರಿಶೀಲಿಸಲು ಹಾಗೂ ಅಂತಿಮ ಹಂತಕ್ಕೆ ಬಂದ ಶಾಲೆಗಳ ಪಟ್ಟಿ ಮಾಡಲು ತೀರ್ಮಾನಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.