ಮಂಗಳೂರು (www.vknews.in) : ಫೈವ್ ಸ್ಟಾರ್ ಯಂಗ್ ಬಾಯ್ಸ್ (ರಿ) ಅಡ್ಡೂರು ಮತ್ತು M.G.M ತಾಲೀಮ್ ಸ್ಪೋರ್ಟ್ಸ್ (ರಿ) ಗುರುಪುರ ಇದರ ಜಂಟಿ ಆಶ್ರಯದಲ್ಲಿ ಬೃಹತ್ ತಾಲೀಮ್ ಜಲ್ಸ್ ಶನಿವಾರ ಮಗ್ರಿಬ್ ನಮಾಜಿನ ಬಳಿಕ ಅಳಕೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮನ್ನು ಬಹುಭಾಷಾ ಕವಿ ಮೊಹಮ್ಮದ್ ಬಡ್ಡೂರ್ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಹಬೀಬ್ ಕಟ್ಟಪುನಿ ವಹಿಸಿದರು.
ವೇದಿಕೆಯಲ್ಲಿ ಸ್ಥಳೀಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಬಾವ ಅಂಗಡಿ ಮನೆ, ಉದ್ಯಮಿ ಅಬ್ದುಲ್ ರಜಾಕ್ ನಂದ್ಯ, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ U.P ಇಬ್ರಾಹಿಂ,ಮಾಜಿ ಶಾಸಕರಾದ ಮೊಯಿದಿನ್ ಬಾವ,SDPI ಇದರ ರಾಷ್ಟ್ರೀಯ ಕಾರ್ಯದರ್ಶಿಯಾದ ರಿಯಾಝ್ ಫರಂಗಿಪೇಟೆ, ಕೆಪಿಸಿಸಿ ಇದರ ಜನರಲ್ ಸೆಕ್ರೆಟರಿಯಾದ ಇನಾಯತ್ ಅಲಿ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶವಂತ್ ಶೆಟ್ಟಿ, D.R ಸಿದ್ದೀಕ್, ಗುರುಪುರ ಗ್ರಾಮ ಪಂಚಾಯತ್ ಇದರ ಉಪಾಧ್ಯಕ್ಷರಾದ ದಿಲ್ಶಾದ್, ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಇದರ ಅಧ್ಯಕ್ಷರಾದ ಹಾಜಿ M.H ಮಯ್ಯದ್ದಿ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ A.K ರಿಯಾಝ್, ಅಶ್ರಫ್, ಮನ್ಸೂರ್, ಶಾಹಿಕ್, A.K ಅಶ್ರಫ್, ಅಬ್ದುಲ್ ಅಝೀಝ್ ಗುರುಪುರ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಾಸೀರ್ ಕನ್ಯಾನ ನಿರೂಪಿಸಿದರು, ಕಾರ್ಯಕ್ರಮದ ಕೊನೆಯಲ್ಲಿ ಹಸನ್ ಅಳಕೆ ಧನ್ಯವಾದ ಸಮರ್ಪಿಸಿದರು…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.