ಗಂಗೊಳ್ಳಿ (ವಿಶ್ವ ಕನ್ನಡಿಗ ನ್ಯೂಸ್) : ಸುಣ್ಣದ ಬದಲು ಇಲಿ ವಿಷ ಬೆರೆಸಿ ಸೇವಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಗಂಗೋಳಿ ನಿವಾಸಿ ಸಾಧು ಪೂಜಾರಿ (71) ಎಂದು ಗುರುತಿಸಲಾಗಿದೆ.
ಫೆ.6ರಂದು ಬೆಳಗ್ಗೆ ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ ತಿಂದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಗಂಗೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.