(www.vknews.in) ; 14-02-2023 ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ದೇಶಕ್ಕಾಗಿ ಮಡಿದ ಸೈನಿಕರಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುಅವರು ಮಾತನಾಡಿ 2019ನೇ ಫೆಬ್ರವರಿ 14 ರಂದು ಭಾರತದ ಇತಿಹಾಸದಲ್ಲಿ ಕರಾಳವಾದ ದಿನ, ಈ ದಿನ ಭಯೋತ್ಪಾದಕರ ಸಂಘಟನೆಗಳು ನಮ್ಮ ಭಾರತವನ್ನು ಹಿಮ್ಮೆಟ್ಟಿಸಬೇಕೆಂದು ಜಮ್ಮು ಕಾಶ್ಮೀರದ ಅವಂತೀಪುರದಲ್ಲಿ ಅರೆ ಸೇನಾಪಡೆಯ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆಗಳ ಮೇಲೆ ಆತ್ಮ ಹತ್ಯಾ ಬಾಂಬ್ ದಾಳಿಗಳನ್ನು ಮಾಡಿದರು. ನಮ್ಮ ದೇಶದ ಸುಮಾರು 40 ಜನ ವೀರ ಯೋಧರು ದೇಶಕ್ಕಾಗಿ ಜೀವ ಬಲಿದಾನಗೈದರು ಅವರ ತ್ಯಾಗ ಬಲಿದಾನಗಳನ್ನು ನಾವು ಪ್ರತಿದಿನ ನೆನೆಯಬೇಕು, ನೆನಪಿಸಿಕೊಳ್ಳಬೇಕು.
ಇವತ್ತಿನ ದಿನ ನಾವು ನೆಮ್ಮದಿಯಿಂದ ಸುಖವಾಗಿ ನಿದ್ದೆಮಾಡುತ್ತಿದ್ದೇವೆಂದರೆ ಇದಕ್ಕೆಲ್ಲ ನಮ್ಮ ದೇಶದ ಗಡಿಯನ್ನು ಕಾಯುವ ಸೈನಿಕರೇ ಕಾರಣ. ಅಂತಹ ವೀರ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ನಾವು ಕೂಡ ನಮ್ಮಿಂದಾಗುವಷ್ಟು ದೇಶಕ್ಕಾಗಿ ಸೇವೆಮಾಡೋಣ ಎಂದು ನುಡಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಮೀನಾಕ್ಷಿ, ಮಂಗಳೂರು ಘಟಕದ ಗೃಹರಕ್ಷಕರಾದ ಪುರುಷೋತ್ತಮ್, ದಿವಾಕರ್, ಸಬಿತಾ, ಸರಸ್ವತಿ, ಸುರೇಂದ್ರ, ಸುಲೋಚನಾ, ಜಯಲಕ್ಷ್ಮಿ, ವಾಣಿಶ್ರೀ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.