ಕಾಪು (ವಿಶ್ವ ಕನ್ನಡಿಗ ನ್ಯೂಸ್) : ಫೆಬ್ರವರಿ 5 ರಂದು ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಳಾಯಿ ನಿವಾಸಿಯಾದ ದಿವೇಶ್ ಶೆಟ್ಟಿ (20), ಲಿಖಿತ್ ಕುಲಾಲ್ (21), ಮಂಗಳೂರು ನಿವಾಸಿ ಆಕಾಶ್(25), ಪಣಂಬೂರು ನಿವಾಸಿ ಪ್ರಸನ್ನ ಶೆಟ್ಟಿ(40) ಬಂಧಿತ ಆರೋಪಿಗಳು.
ಪಾಂಗಳ ದೇವಸ್ಥಾನದ ಬಳಿ ಫೆಬ್ರವರಿ 5 ರಂದು ಸಂಜೆ ಐದು ಗಂಟೆಯ ಸುಮಾರಿಗೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರ ದಿಂದ ಕಡಿದು ಶರತ್ ಶೆಟ್ಟಿಯನ್ನು ಕೊಲೆಗೈದು ಪರಾರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗಾಗಿ ಕೆಲವು ತಂಡವನ್ನು ರಚನೆ ಮಾಡಲಾಗಿತ್ತು, ಅಲ್ಲದೆ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ತೆರಳಿರುವ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಗಳು ಕೇರಳಕ್ಕೆ ತೆರಳುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.