(www.vknews.in) ; ಹಾಯ್ ಪುತ್ತೂರು ಪತ್ರಿಕೆ ಉಲಮಾ ಸಾದಾತ್ ನಿಂದನೆಯಿಂದ ತನ್ನತನ ಕಳೆದುಕೊಳ್ಳುತ್ತಿದೆ ಎಂದು ಹತ್ತು ಹನ್ನೆರಡು ವರ್ಷಗಳ ಹಿಂದೆ ನಾನು ಹೇಳಿದಾಗ ಮರ್ಹೂಂ ಮಿತ್ತೂರು ಹಮೀದ್ ಖಂದಕ್ ರವರು ಉಸ್ತಾದ್ ನೀವು ಸಮಾಜಕ್ಕೆ ಉಪಕಾರವೆನಿಸುವ ಬರಹ ಬರೆದು ಕೊಡಿ ಎಂದರು.
ನಂತರ ನಾನು ಹಲವಾರು ಬರಹಗಳನ್ನು ಅವರಿಗೆ ಬರೆದು ಕೊಟ್ಟಿದ್ದೆ. ಉಲಮಾ ಸಾದಾತ್ ಗಳ ಮಹತ್ವ, ಸಾಮಾಜಿಕ, ಶೈಕ್ಷಣಿಕ ಹೀಗೆ ವಿವಿಧ ಬರಹಗಳನ್ನು ಬರೆದು ಕೊಡುತ್ತಿದ್ದೆ. ನಾನು ದರ್ಸ್ ನಲ್ಲಿ ಮುತಅಲ್ಲಿಂ ಆಗಿದ್ದಾಗಲೇ ಹಾಯ್ ಪುತ್ತೂರು ಪತ್ರಿಕೆಗೆ ಕವನ, ಲೇಖನ, ವರದಿಗಳನ್ನು ನೀಡುತ್ತಿದ್ದೆ. ಇತ್ತೀಚಿನ ಕೆಲವು ವರ್ಷಗಳಿಂದ ನಾನು ಹಾಯ್ ಪುತ್ತೂರು ಪತ್ರಿಕೆಗೆ ಬರೆದಿರಲಿಲ್ಲ. ಅಪರೂಪಕ್ಕೆ ಅವರೊಂದಿಗೆ ಮಾತನಾಡಿದ್ದೆ.
ಮೊನ್ನೆ 12 ನೇ ತಾರೀಖಿನಂದು ಪುತ್ತೂರು ಕರ್ನಾಟಕ ಮುಸ್ಲಿಂ ಜಮಾಅತ್ ಸಭಾಂಗಣದಲ್ಲಿ ನಡೆದ ಕವಿಗೋಷ್ಠಿ ಮತ್ತು ಕರ್ನಾಟಕ ಭಾವೈಕ್ಯತಾ ಪರಿಷತ್ ಸಂಘಟನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಅವರಿಗೆ ಮೆಸೇಜ್ ಮಾಡಿದ್ದೆ. ಕರೆ ಮಾಡಲು ಮರೆತು ಹೋಗಿತ್ತು. ಅವರು ಮೆಸೇಜ್ ಗೆ ಉತ್ತರಿಸಿಯೂ ಇರಲಿಲ್ಲ. ನಿನ್ನೆ ಅವರ ಮರಣದ ವಾರ್ತೆ ಕೇಳಿ ತುಂಬಾ ದುಃಖವಾಯಿತು.
ನನ್ನ ಆತ್ಮೀಯ ಸ್ನೇಹಿತ ರಲ್ಲಿ ಹಾಯ್ ಪುತ್ತೂರು ಪತ್ರಿಕೆ ಸಂಪಾದಕ ಮಿತ್ತೂರು ಹಮೀದ್ ಖಂದಕ್ ಕೂಡ ಒಬ್ಬರಾಗಿದ್ದರು. ಅವರ ಪರಲೋಕ ಜೀವನ ಅಲ್ಲಾಹು ಸ್ವರ್ಗ ಸುಖದ ತಾಣವಾಗಿಸಲಿ.
✍️ ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.