(www.vknews.in) ; ಮಂಗಳೂರು ದಕ್ಷಿಣ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಜನತಾದಳ ಜಾತ್ಯಾತೀತ ಪಕ್ಷವು ಪ್ರಬಲವಾಗಿ ಬೇರೂರಲು ಕಾರಣ ಕರ್ತರಾಗಿರುವುದು ಡಾ. ಸುಮತಿ ಎಸ್ ಹೆಗ್ಡೆ. ಹೇಳಿ ಕೇಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಜನತಾದಳದ ಪ್ರಾಭಲ್ಯ ಅಷ್ಟೇನೋ ಉತ್ತಮವಲ್ಲದಿದ್ದರೂ ಇದಕ್ಕೆಲ್ಲ ವಿರಾಮ ಹಾಕಿದವರೇ ಜನಸೇವಕಿ , ಬಡವರ ಬಂದು ಡಾ. ಸುಮತಿ ಎಸ್ ಹೆಗ್ಡೆ. ಸುಮಾರು 4 ವರುಷಗಳಿಂದ ಕ್ಷೇತ್ರದ ಉದ್ದಗಳ ಸಂಚರಿಸಿ ಸದ್ದಿಲ್ಲದೆ ಸುದ್ಧಿ ಮಾಡಿದ್ದಾರೆ. ಮಾತ್ರವಲ್ಲ ಪಕ್ಷಕ್ಕೆ ಜೀವ ತುಂಬಿದ್ದಾರೆ ಕೂಡಾ.
ಬಿಜೆಪಿಯಿಂದ ಆಯ್ಕೆಯಾಗಿರುವ ವೇದವ್ಯಾಸ ಕಾಮತ್, ಕಾಂಗ್ರೆಸ್ ನಿಂದ ಜೆ.ಆರ್ ಲೋಬೋ ಸ್ಪರ್ಧಿಸುವುದೂ ಬಹುತೇಕ ಖಚಿತವಾಗಿದ್ದು , ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಂತೆ ಕಂಡು ಬಂದರೂ ಅಂತಿಮ ಹಣಾಹಣಿ ಮಾತ್ರ ಬಿಜೆಪಿ – ಜೆಡಿಎಸ್ ಮಧ್ಯೆಯಾಗಲಿದೆ ಎಂದು ಬಹುತೇಕರ ಅಭಿಪ್ರಾಯ. ಅಂದು ಜನತಾದಳ ನಾಯಕ ವಸಂತ ಬಂಗೇರ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಸಂಧರ್ಭ ಇವರನ್ನು ಕೊನೆಯ ಕ್ಷಣದಲ್ಲಿ ಬೆಳ್ತಂಗಡಿಯಲ್ಲಿ ಸ್ಪರ್ಧಿಸಲು ಕುಮಾರಣ್ಣ ಅವಕಾಶ ನೀಡಿದರು .ಅಂದು ಅಂತಿಮ ಕ್ಷಣ (ಕೇವಲ ಒಂದು ವಾರ ) ಮಾತ್ರ ಪ್ರಚಾರಕ್ಕೆ ಇಳಿದ ಡಾ. ಸುಮತಿ ಎಸ್ ಹೆಗ್ಡೆಯವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಮಾಧಾನಕರ ವೋಟು ಸಿಕ್ಕಿರುವುದು ವಿಶೇಷ ಹಾಗೂ ಸಂತಸದ ವಿಚಾರ.
ಮಂಗಳೂರು ದಕ್ಣಿಣ ಕ್ಷೇತ್ರದ ಸಮರ್ಥ ಅಭ್ಯರ್ಥಿ ಸರ್ವ ಜನಾಂಗದ ನಾಯಕಿ ಡಾ.ಸುಮತಿ ಎಸ್ ಹೆಗ್ಡೆ ಯವರು ಕೇವಲ ಒಂದು ಕ್ಷೇತ್ರದ ನಾಯಕಿಯಲ್ಲ. ಅವರು ಜಿಲ್ಲಾ ನಾಯಕಿಯಾಗಿ ಕೆಳಸಮಾಡಿದ್ದು ಬಹಳಷ್ಟು ಜನರ ಕಣ್ಣೀರನ್ನು ಒರೆಸಿದ್ದಾರೆ. ಇವರು ಗೆದ್ದು ಬಂದರೆ ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಚಿತ್ರಣವನ್ನು ಬದಲಾಯಿಸುವುದು ಮಾತ್ರವಲ್ಲ. ದ.ಕ.ಜಿಲ್ಲೆಯಲ್ಲಿ ಓರ್ವ ಉತ್ತಮ ರಾಜಕಾರಣಿಯಾಗಿ ಬೆಳೆದು ಬರುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.