(www.vknews.in) ; ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಖತರ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 17-02-2023ರ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ತುಮಾಮದ ICBF ಹಾಲಿನಲ್ಲಿ ಖತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಸುಲೈಮಾನ್ ಮುಂಡ್ಕೂರು ಇವರ ಘನ ಅದ್ಯಕ್ಷತೆಯಲ್ಲಿ ಜರಗಿತು.
KCF INC ಕಾರ್ಯಕಾರಿ ಸದಸ್ಯರಾದ ಯೂಸುಫ್ ಸಖಾಫಿ (ಅಯ್ಯಂಗೇರಿ) ಯವರ ದುಆದೊಂದಿಗೆ ಶುಭಾರಂಭಗೊಂಡ ಸಭೆಯಲ್ಲಿ ಖತರ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ನಿಝಾಮಿ ಅಲ್ ಹಿಕಮಿ (ಕೊಡ್ಲಿಪೇಟೆ) ಇವರು ನೆರೆದ ಸಭಿಕರು ಹಾಗೂ ಅತಿಥಿಗಳನ್ನು ಅದರಪೂರ್ವಕ ಸ್ವಾಗತಿಸಿದರು. ಅಸ್ಸಯ್ಯಿದ್ ಸಿದ್ದೀಖ್ ಸಖಾಫಿ (ಮಾಣಿಮೂಲ) ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಪ್ರಭಾಷಣಗಾರರಾಗಿ ಊರಿಂದ ಆಗಮಿಸಿದ ಸಂಸ್ಥೆಯ ವ್ಯವಸ್ಥಾಪಕರಾದ ಮೌಲಾನಾ ಮುಸ್ತಫಾ ಸಅದಿ, ಮುಖ್ಯ ಅತಿಥಿಗಳಾಗಿ ಸೌದಿ ಅರೇಬಿಯಾದಿಂದ ಆಗಮಿಸಿದ ಕೇಂದ್ರ ಸಮಿತಿಯ ಕೋಶಾಧಿಕಾರಿ ಜನಾಬ್ ದಾವೂದ್ ಕಜಮಾರ್, ಕೇಂದ್ರ ಸಮಿತಿಯ ಸಂಚಾಲಕ ಹಾತಿಂ ಹಾಜಿ ಕೂಳೂರು, ಕೇಂದ್ರ ಸಮಿತಿಯ ಉಪಾಧ್ಯಕ್ಷ KH ಮುಹಮ್ಮದ್ ರಫೀಕ್ ಸೂರಿಂಜೆ, ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಜನಾಬ್ ಅಬೂಬಕ್ಕರ್ ಬರ್ವ ಮತ್ತು ಅಬ್ದುಲ್ ಗಫೂರ್ ಸಜೀಪ, ಡಿ.ಕೆ.ಎಸ್.ಸಿ. ದಾಯಿ ಇಸ್ಮಾಯಿಲ್ ಉಸ್ತಾದ್ ಉಡುಪಿ ಹಾಗೂ KCF ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಸಭೆಯಲ್ಲಿ ಉಪಸ್ಥಿತರಿದ್ದರು.
ಡಿ.ಕೆ.ಎಸ್.ಸಿ. ಖತರ್ ರಾಷ್ಟ್ರೀಯ ಸಮಿತಿಯ ಉಸ್ತುವಾರಿ ಹಾತಿಂ ಹಾಜಿ ಕೂಳೂರು ಹಾಗೂ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜನಾಬ್ ಮುಹಮ್ಮದ್ ರಫೀಕ್ KH ರವರು ಸಭೆಯಲ್ಲಿ ಮಾತನಾಡಿ, ಡಿ.ಕೆ.ಎಸ್.ಸಿ.ಯ ಕಾರ್ಯವೈಖರಿಯ ಬಗ್ಗೆ ವಿವರಿಸುತ್ತಾ ಅದಕ್ಕಾಗಿ ಕಾರ್ಯಾಚರಿಸುವ ಅವಶ್ಯಕತೆಯ ಬಗ್ಗೆ ಸಭಿಕರಿಗೆ ಮನದಟ್ಟುಮಾಡಿದರು.
ಡಿ.ಕೆ.ಎಸ್.ಸಿ. ಅಧೀನ ಸಂಸ್ಥೆ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ವ್ಯವಸ್ಥಾಪಕರಾದ ಮೌಲಾನಾ ಅಲ್ ಹಾಜ್ ಮುಸ್ತಾಫಾ ಸಅದಿಯವರು ತನ್ನ ಮುಖ್ಯ ಪ್ರಭಾಷಣದಲ್ಲಿ ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಸ್ಥಾಪನೆಗಳ ಬಗ್ಗೆ ಸವಿವರವಾಗಿ ವಿವರಿಸುತ್ತಾ ಡಿ.ಕೆ.ಎಸ್.ಸಿ. ಸಂಘಟನೆಯ ಪವಾಡಗಳ ಬಗ್ಗೆ ನೆನಪಿಸುತ್ತಾ ಪ್ರತಿಯೊಬ್ಬರೂ ಈ ಸಂಘಟನೆಗಾಗಿ ಕಾರ್ಯಾಚರಿಸುವ ಅವಶ್ಯಕತೆಯನ್ನು ಒತ್ತಿಹೇಳಿದರು.
ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಕೋಶಾಧಿಕಾರಿ ದಾವೂದ್ ಕಜಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಡಿ.ಕೆ.ಎಸ್.ಸಿ. ಸ್ಥಾಪಿತಗೊಂಡ ಉತೃಷ್ಟ ಉದ್ದೇಶ ಹಾಗೂ ಅದು ಬೆಳೆದುಬಂದ ದಾರಿಯನ್ನು ವಿಸ್ತಾರವಾಗಿ ವಿವರಿಸಿದರು. ಹಾಗೂ ಅವರ ನೇತೃತ್ವದಲ್ಲಿ 2023-2024ರ ಸಾಲಿಗೆ ಈ ಕೆಳಗಿನಂತೆ ಸುಭದ್ರ ಹಾಗೂ ಸುದೃಢವಾದ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರು : ಇಸ್ಹಾಕ್ ನಿಝಾಮಿ ಕೊಡ್ಲಿಪೇಟೆ ಅಧ್ಯಕ್ಷರು : ಸುಲೈಮಾನ್ ಮುಂಡ್ಕೂರು ಕಾರ್ಯದರ್ಶಿ : ಆದಂ ಫೈಝಲ್ ಬರ್ವ ಕೋಶಾಧಿಕಾರಿ : ತಲ್ಹತ್ ಅಸ್ಲಮಿ ಪೆರ್ನೆ ಉಪಾಧ್ಯಕ್ಷರು : ಅಂದುಮಾಯಿನ್ ನಾವುಂದ ಉಪಾಧ್ಯಕ್ಷರು : ಅಬ್ದುಲ್ಲಾ ಉಂಞಿ ಉಚ್ಚಿಲ ಕಾರ್ಯದರ್ಶಿ : ಸಯ್ಯದ್ ಅಬ್ದುಲ್ ರಝಾಕ್ ಮುಂಡ್ಕೂರು ಕಾರ್ಯದರ್ಶಿ : ನಿಹಾಲ್ ಇಬ್ರಾಹಿಂ ಕಾಪು ಸಂಘಟನಾ ಕಾರ್ಯದರ್ಶಿ : ಅಬ್ದುಲ್ ರಹ್ಮಾನ್ ಶಿರ್ವ ಸಂಚಾಲಕರು : ಅನ್ವರ್ ಹಳೆಯಂಗಡಿ
ಕಾರ್ಯಕಾರಿ ಸಮಿತಿ ಸದಸ್ಯರು : 1. ಶಾಹಿದ್ ಮಣಿಪುರ ಕಟ್ಪಾಡಿ 2. ಶಂಸುದ್ದೀನ್ ಕಾಟಿಪಳ್ಳ 3. ಸದಕಾತ್ ಕೂಳೂರು 4. ಅಶ್ರಫ್ ಕಾವಲ್ಕಟ್ಟೆ 5. ಫೈಝಲ್ ಕಣ್ಣಂಗಾರ್ 6. ಶರೀಫ್ ಮಾಡೂರು 7. ಸೂಫಿ ಇಬ್ರಾಹಿಂ ನೇಜಾರು 8. ಇಲ್ಯಾಸ್ ಕರಾಯ 9. ಸಮೀರ್ ಉಪ್ಪಿನಂಗಡಿ 10. ಖಲೀಲ್ ಕಟ್ಟೆಮಾರು 11. ಹಕೀಮ್ ಪಾತೂರು 12. ಅಯ್ಯೂಬ್ ಹೊನ್ನಾವರ 13. ಅಲ್ಫಾಝ್ ಅಬ್ದುಲ್ಲಾ ಉಚ್ಚಿಲ 14. ಫಹದ್ ಅಬ್ದುಲ್ಲಾ ಉಚ್ಚಿಲ 15. ಹಸನ್ ಪುಂಜಾಲಕಟ್ಟೆ 16. ಕಬೀರ್ ದೇರಳಕಟ್ಟೆ 17. ಕಬೀರ್ ಮಡಿಕೇರಿ 18. ರಿಶಾದ್ ಮದುವನ 19. ಅಶ್ರಫ್ ವಳಚ್ಚಿಲ್ 20. ಅಬ್ದುಲ್ ರಹ್ಮಾನ್ ಪಾಣೆಮಂಗಳೂರು 21. ಇಮ್ತಿಯಾಝ್ ಕಾರ್ನಾಡ್ ಮುಲ್ಕಿ
ಹನೀಫ್ ಪಾತೂರ್ (ಅಧ್ಯಕ್ಷರು, KCF ಖತರ್ ರಾಷ್ಟ್ರೀಯ ಸಮಿತಿ) ಹಾಗೂ ಯೂಸುಫ್ ಸಖಾಫಿ (KCF INC ಕಾರ್ಯಕಾರಿ ಸದಸ್ಯರು) ಇವರು ನೂತನ ಸಮಿತಿಗೆ ಶುಭಹಾರೈಸಿದರು. ಇಸ್ಮಾಯಿಲ್ ಉಸ್ತಾದ್ ಉಡುಪಿ ಸಭಿಕರಿಗೆ ಧನ್ಯವಾದಗೈದರು. ಇಸ್ಹಾಕ್ ನಿಝಾಮಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಕಫ್ಫಾರತ್ ಮಜ್ಲಿಸ್ ಮೂಲಕ ಮೂರು ಸಲಾತ್ ನೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.