ಬೋಳಿಯಾರ್ (www.vknews.in) : ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶವು ಸಮಿತಿ ಅಧ್ಯಕ್ಷರಾದ ಅಶ್ರಫ್ ಮೋನು ಬೋಳಿಯಾರ್ ರವರ ನೇತೃತ್ವದಲ್ಲಿ ಪಕ್ಷದ ಕಚೇರಿ ರಂತಡ್ಕದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಜನಾಬ್! ರಿಯಾಝ್ ಫರಂಗಿಪೇಟೆ ಯವರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಳ್ಳುವುದರ ಮೂಲಕ ನಿರೀಕ್ಷೆಗು ಮೀರಿ ಫಲಿತಾಂಶ ಬರಲು ಶಕ್ತಿ ಮೀರಿ ಪ್ರಯತ್ನ ಪಡಬೇಕೆಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಮಾಧ್ಯಮ ವಕ್ತಾರರಾದ ರಿಝ್ವಾನ್ ಸಜೀಪರವರು ಮಾತನಾಡಿ ಕಾರ್ಯಕರ್ತರು ಪಕ್ಷದ ಬೆನ್ನೆಲುಬು ನಿರಂತರವಾದ ಪರಿಶ್ರಮದಿಂದ ವಿಜಯದ ಗುರಿ ಮುಟ್ಟಲು ಸಾಧ್ಯ ಎಂಬುವುದನ್ನು ವಿವರಿಸಿದರು. ಅದೇ ರೀತಿ ಗ್ರಾಮಸಮಿತಿ ಅಧ್ಯಕ್ಷರಾದ ಅಶ್ರಫ್ ಮೋನು ಬೋಳಿಯಾರ್ ರವರು ರಾಜಕೀಯವು ಒಂದು ಚದುರಂಗದ ಆಟವಾಗಿದೆ ಹಲವಾರು ರಾಜ್ಯಗಳ ಉದಾಹರಣೆ ನೀಡುವುದರ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿ ರಾಜಕೀಯ ನಾಯಕರಾಗಿ ಮುಂದೆಬರಲು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಉಬೈದ್ ಅಮ್ಮೆಂಬಳ, ಮಂಗಳೂರು ವಿಧಾನ ಸಭಾ ಸದಸ್ಯರು ಆರೀಫ್ ಬೋಳಿಯಾರ್, ಕೋಣಾಜೆ ಬ್ಲಾಕ್ ಉಪಾಧ್ಯಕ್ಷರು. ಶರೀಫ್ ರಂತಡ್ಕ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.