ಬೆಳ್ತಂಗಡಿ (www.vknews.in) : ಇತಿಹಾಸ ಪ್ರಸಿದ್ದ ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವು ಪೆಬ್ರವರಿ 13 ರಿಂದ ಪೆಬ್ರವರಿ 22 ರ ತನಕ ವೈಭವದಿಂದ ಜರಗಿತು.
ಪ್ರಶ್ನಾಚಿಂತನ, ಗೊನೆ ಮುಹೂರ್ತ, ನವಕಕಲಶ,ಪ್ರಸನ್ನ ಪೂಜೆ,ಸಾಮೂಹಿಕ ನವಗ್ರಹಶಾಂತಿ,ನಾಗ ತನುತರ್ಪಣ,ಸಾಮೂಹಿಕ ಶನಿಪೂಜೆ, ವಸಂತಕಟ್ಟೆ ಪೂಜೆ, ಮಹಾರಂಗ ಪೂಜೆ, ಗಣಹೋಮ, ಶತರುದ್ರಾಭಿಷೇಕ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ,ಅಶ್ವಥಕಟ್ಟೆ ಪೂಜೆ, ಶ್ರೀ ಮನ್ಮಹಾರಥೋತ್ಸವ , ಶ್ರೀ ದೇವರ ಬೀದಿ ಸವಾರಿ, ಕಟ್ಟೆ ಪೂಜೆ, ಅವಭೃತ ಸ್ನಾನ , ಧರ್ಮದೈವಗಳ ನೇಮೋತ್ಸವ, ಸಹಿತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು 10 ದಿನಗಳ ಕಾಲ ವೈಭವದಿಂದ ನಡೆಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರಾದ ಕೆಲ್ಲಗುತ್ತು ಸಬ್ರಬೈಲು ಜಯವರ್ಮರಾಜ ಬಳ್ಳಾಲ್ ಹಾಗೂ ಸಹೋದರ, ಸಹೋದರಿಯರು ಮತ್ತು ಕುಟುಂಬಸ್ಥರು, ಊರ ಹಾಗೂ ಪರ ಊರಿನ ಭಕ್ತವೃಂದವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.