(www.vknews.in) ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ತಲಪಾಡಿ ಗ್ರಾಮ ಸಮಿತಿ ವತಿಯಿಂದ ಕಾರ್ಯಕರ್ತರ ಸಭೆಯು ತಲಪಾಡಿ ಗೆಸ್ಟ್ ಹೌಸ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ತನ್ಸೀರ್ ಅಹಮದ್ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ದಿಕ್ಸೂಚಿ ಭಾಷಣವನ್ನು ನಡೆಸಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
ಇನ್ನೋರ್ವ ಅತಿಥಿ ಕರ್ನಾಟಕ ರಾಜ್ಯ ಸಮಿತಿ ಸದಸ್ಯರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿಯೂ ಆದ ಅತಾವುಲ್ಲಾ ಜೋಕಟ್ಟೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಲಾಂ ವಿದ್ಯಾನಗರ SDPI ತಲಪಾಡಿ ಗ್ರಾಮ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಘೋಷಣೆ ಮಾಡಿದರು, ಅಧ್ಯಕ್ಷರಾಗಿ ಶಕೀಲ್ ಕೆ.ಸಿ ರೋಡ್ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ರಿಜ್ವಾನ್ ಸಜಿಪ,ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಇಸ್ಮಾಯಿಲ್ ಟಿ,ಇಸ್ಮಾಯಿಲ್ ಶಾಫಿ,ಅಬ್ದುಲ್ ರೆಹಮಾನ್(ಅಂದು),ಮೊಯಿದಿನ್ ಜಾಹಿರ್, SDPI ತಲಪಾಡಿ ನಾಯಕರಾದ ಆಸಿಫ್ ಕೆ.ಸಿ ರೋಡ್, ಇಮ್ರಾನ್ ಪೂಮಣ್ಣು, ಸಿದ್ದೀಕ್ ಎಸ್.ಕೆ, ಫಯಾಜ್ ಕೆ.ಸಿ ರೋಡ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇಸ್ಮಾಯಿಲ್ ತಲಪಾಡಿ ಸ್ವಾಗತಿಸಿ ಮೊಯಿದಿನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.