ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದಲ್ಲಿ ಪೊಲೀಸ್ ಎಂದು ಹೇಳಿ ಮಹಿಳೆಯನ್ನು ಬೆದರಿಸಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರು ಈಶ್ವರನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.
ಶಿವರಾಜ್ ತಾನು ಪೊಲೀಸ್ ಎಂಬುದಾಗಿ ಸವಿತಾ (45) ಎಂಬವರಿಗೆ ತಿಳಿಸಿ, ನೀವು ಮಸಾಜ್ ಪಾರ್ಲರ್ ನಡೆಸುವುದಕ್ಕೆ ಹಾಗೂ ಹೆಚ್ಚು ಬಂಗಾರ ಮತ್ತು ಹಣವನ್ನು ಇಟ್ಟುಕೊಂಡಿರುವ ಬಗ್ಗೆ ದೂರು ಬಂದಿದ್ದು ಪ್ರಕರಣ ಮುಚ್ಚಿ ಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ದಾಳಿ ಮಾಡುತ್ತೇವೆ ಎಂದು ಬೆದರಿಸಿ 38,000 ರೂ. ಪಡೆದುಕೊಂಡಿದ್ದಾನೆ.
ಬಂಧಿತ ಈ ಹಿಂದೆ ಗೃಹರಕ್ಷಕ ದಳದಲ್ಲಿದ್ದ. ಹಾಗಾಗಿ ಯೂನಿಫಾರಂ ಹಾಕಿಕೊಂಡು ಮಹಿಳೆಯನ್ನು ಹೆದರಿಸಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.