ಕುವೈತ್ (ವಿಶ್ವ ಕನ್ನಡಿಗ ನ್ಯೂಸ್) : ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ಯುವಕ ಮೃತಪಟ್ಟಿದ್ದಾರೆ. ಕುವೈತ್ ಕೆಎಂಸಿಸಿ ಕುಂದಮಂಗಲಂ ಕ್ಷೇತ್ರದ ಸದಸ್ಯ ಮುಹಮ್ಮದ್ ಕುಟ್ಟಿ ಪಿಲಸ್ಸೆರಿ (ಫೈಸಲ್-44) ಮೃತರು. ಬಹಳ ದಿನಗಳಿಂದ ಅನಾರೋಗ್ಯದಿಂದ ಜಹ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರು ದಿವಂಗತ ಅಬ್ದುಲ್ಲಕುಟ್ಟಿ ಕುಂಡ್ತಿಲ್ ಮತ್ತು ಮರ್ಯ ದಂಪತಿಗಳ ಪುತ್ರ. ಪತ್ನಿ: ಫೌಜಿಯಾ. ಮಕ್ಕಳು ಫಾತ್ವಿಮಾ ಫಿದಾ, ಮುಹಮ್ಮದ್ ತಸ್ನೀಮ್ ಮತ್ತು ಮುಹಮ್ಮದ್ ಯಾಸೀನ್. ಕೆಎಂಸಿಸಿ ನೇತೃತ್ವದಲ್ಲಿ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಕ್ರಮಕೈಗೊಳ್ಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.