ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದುಬೈನಲ್ಲಿ ಕೇರಳದ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಕೋಝಿಕ್ಕೋಡ್ನ ಕೊಡಂಚೇರಿಯ ಚೆಂಬುಕಡವ್ ಪನ್ನಿವೆತುಮ್ಚಾಲ್ನಲ್ಲಿ ಅಬ್ದುಲ್ ಸಲೀಂ ಮತ್ತು ಸುಹಾರಾ ದಂಪತಿಯ ಪುತ್ರ ಫವಾಜ್ (23) ಮೃತರು.
ತಡರಾತ್ರಿಯಾದರೂ ಫವಾಜ್ ರೂಮಿಗೆ ಬಾರದ ಹಿನ್ನೆಲೆಯಲ್ಲಿ ಆತನ ಜೊತೆಯಲ್ಲಿದ್ದ ಸ್ನೇಹಿತರು ದೂರು ನೀಡಿದ್ದಾರೆ. ನಂತರದ ತನಿಖೆಯಲ್ಲಿ, ದುಬೈ ಇನ್ವೆಸ್ಟ್ಮೆಂಟ್ ಪಾರ್ಕ್ ಬಳಿಯ ರಸ್ತೆಯಲ್ಲಿ ವಾಹನದ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ದುಬೈ ಪೊಲೀಸ್ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.