ದುಬೈ (www.vknews.in) : ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ವಿದ್ಯಾ ಸಂಸ್ಥೆಯ ಅಧೀನ ಸಂಘಟನೆ ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಎಪ್ರಿಲ್ 2 ರಂದು ದುಬೈಯಲ್ಲಿ ಬೃಹತ್ ಇಫ್ತಾರ್ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಪ್ರಾಂಶುಪಾಲ ಅಡ್ವೋಕೇಟ್ ಹನೀಫ್ ಹುದವಿ ಅವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು, ಕೋಶಾಧಿಕಾರಿ ಜನಾಬ್ ಅಶ್ರಫ್ ನೆಕ್ಕರೆ, ದುಬೈ ಸಮಿತಿ ಧಾರ್ಮಿಕ ಸಲಹೆಗಾರರು ಅಬ್ದುಲ್ಲಾ ನಯೀಮಿ, ಕೋಶಾಧಿಕಾರಿ ಜನಾಬ್ ಹೈದರ್ ಅಲಿ ಈಶ್ವರಮಂಗಲ, ದಾವತ್ ಇ ಇಫ್ತಾರ್ ಕಾರ್ಯಕ್ರಮದ ಚಯರ್ ಮೇನ್ ಜನಾಬ್ ನವಾಝ್ ಬಿಸಿ ರೋಡ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸೋಂಪಾಡಿ, ಮರ್ಝೂಖ್ ಯಾಕೂತ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.