(www.vknews.in) ; ಹಾಲಕ್ಕಿ ನುಡಿತೈತೆ’ ಎನ್ನುವ ಕವನ ಸಂಕಲನ ಭಾವನೆಗಳ ಜೊತೆ ಜೊತೆಗೆ ಅನುಭವವನ್ನು ತಿಳಿದುಕೊಂಡು ತೀರಿ ಹೋದ ಅಪ್ಪನ ನೆನಪಿನಲ್ಲಿ ರಚಿತವಾಗಿರುವ ಕವನ ಸಂಕಲನವಿದು. ಕವಿಯಾದವನು ತನ್ನ ಭಾವನೆಗಳನ್ನ ಅಕ್ಷರಗಳ ಮೂಲಕ ತನಗೆ ತಾನೆ ಸಾಣೆ ಹಿಡಿಯುವ ಪ್ರಯತ್ನದಲ್ಲಿ ಸಫಲನಾಗಿದ್ದಾನೆ.ಕವಿತ್ವದ ಆಳವನ್ನು ಚೆನ್ನಾಗಿ ಗ್ರಹಿಸಿಕೊಂಡಿರುವ
ಸಿ.ಎಚ್.ನಾಗೇಂದ್ರಪ್ಪ ಅವರು ಪ್ರಾಥಮಿಕ ಶಾಲೆಯ ಶಿಕ್ಷಕರೂ ಆಗಿದ್ದರಿಂದ ಕಾವ್ಯದಲ್ಲಿ ಎಲ್ಲೆಲ್ಲಿ ಹೊಸ ಪದಗಳ ಪ್ರಯೋಗ ಮಾಡಬೇಕು.ಮತ್ತು ಎಲ್ಲೆಲ್ಲಿ ಹಳೆಪದಗಳಿಗೆ ಸಾಣಿಹೊಡೆಯಬೇಕು ಎನ್ನುವ ಕಲ್ಪನೆಯನ್ನ ಬಹು ಅಪ್ತವಾಗಿ ಗ್ರಹಿಸಿಕೊಂಡಿರುವಂತೆ ಕಾಣಿಸುತ್ತದೆ.ಕವನ ಸಂಕಲನದ ಇಡೀ ಭಾಗಗಳನ್ನ ಗ್ರಹಿಸಿಕೊಂಡಾಗ ಕವನ ಸಂಕಲನದಲ್ಲಿ ಪ್ರೀತಿ ಇದೆ, ಪ್ರೇಮವಿದೆ ,ರೈತನನ್ನು ಪ್ರೀತಿಸುವ ಬಹುದೊಡ್ಡ ಪ್ರಮಾಣವಿದೆ. ಎನ್ನವ ಗ್ರಹಿಕೆ ಮೂಡುತ್ತದೆ. ಕವಿತ್ವ ಎನ್ನುವುದೇ ಹಾಗೆ ಒಂದೇ ಗುಕ್ಕಿನಲ್ಲಿ ಎಲ್ಲರನ್ನ ಸೆಳೆದೆ ಬಿಡುವ ಬಹು ದೊಡ್ಡ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ.
ಸಿ.ಎಚ್.ನಾಗೇಂದ್ರಪ್ಪ ಅವರ ಕವಿತೆಯು ಸಹಿತ ಭಿನ್ನವಾಗಿಲ್ಲ.ಮೊದಲ ಓದಿನಲ್ಲಿಯೇ ಆವರಿಸಿಕೊಂಡು ಬಿಡುವ ಬಹು ದೊಡ್ಡ ಶಕ್ತಿಯನ್ನ ತನ್ನಲ್ಲಿ ಅಡಗಿಸಿಕೊಂಡಿವೆ.ಎನ್ನುವುದನ್ನು ಸ್ಮರಿಸಬೇಕಾಗುತ್ತದೆ. 63 ಕವನಗಳನ್ನು ಹೊಂದಿರುವ ಹಾಲಕ್ಕಿ ನುಡಿತೈತೆ ಕವನ ಸಂಕಲನ ಡಾ.ನೆಲ್ಲಿಕಟ್ಟೆ ಎಸ್.ನೆಲ್ಲಿಕಟ್ಟೆ ಸಿದ್ದೇಶ್ ಅವರ ಮುನ್ನುಡಿ ಯೊಂದಿಗೆ ಪ್ರಾರಂಬವಾಗಿ ಒಂದೇ ಓದಿನಲ್ಲಿ ಸಹ ಹೃದಯನ ಅಂತರ್ಶಕ್ತಿ ಮತ್ತು ಆಂತರಿಕತೆಯ ಮೌಲ್ಯಗಳನ್ನು ವೃದ್ಧಿಸುವ ಸಾಹಸಮಯ ಕೆಲಸಕ್ಕೆ ಅಣಿಯಾಗುತ್ತದೆ.
ತ್ಯಾಗಮಯಿ ಅಣ್ಣ,ಕಲಿಯಬೇಕಿದೆ ನಾವು, ಸಿದ್ದಲಿಂಗಯ್ಯ ಸಮಾನತೆ, ಭಾವೈಕ್ಯತೆ,ಮಾತೃ ವಾತ್ಸಲ್ಯ, ಮೊದಲ ಒಲವು ಹೀಗೆ ಸಾಲು ಸಾಲು ಪದ್ಯಗಳಿಂದ ಕೂಡಿರುವ ಈ ಕವನ ಸಂಕಲನ,ಜಗಕ್ಕೆ ಸಮಾನತೆಯನ್ನು ಸರ್ವ ಭಾತೃತ್ವತೆಯನ್ನು ಬಿತ್ತುವ ಸರ್ವರಿಗೂ ಸಮಪಾಲು-ಸರ್ವರಿಗೂ ಸಮ ಬಾಳು ಸರ್ವ ಶಿಕ್ಷಣ ಅಭಿಯಾನ ದಂತಹ ಮಂತ್ರಗಳನ್ನ ಜಪಿಸುತ್ತಾ ಮುಂದೆ ಸಾಗುತ್ತದೆ.
ಮಲೆನಾಡಿನ ಸೊಬಗನ್ನ ಮೆಲ್ಲುತ್ತಾ ಬಂದಿರುವ ಕವಿ ಅದನ್ನ ಹೊರತುಪಡಿಸಿ ಯಾವ ಕಾವ್ಯಗಳನ್ನು ಬರೆಯುವ ಪ್ರಯತ್ನ ಮಾಡಿಲ್ಲ ಎಂದೆನಿಸುತ್ತದೆ ಅವರ ಕಾವ್ಯಗಳಲ್ಲಿ ಮಲೆನಾಡಿನ ವಿವಿಧಾಯಾಮಗಳ ಪರಿಚಯಗಳ ಜೊತೆ ಜೊತೆಗೆ ಸರ್ವ ಸಮಾನತೆಯ ಹುಟ್ಟು ಹಾಕಬೇಕು ಎನ್ನುವ ಮೂಲ ಕಲ್ಪನೆಯಲ್ಲಿ ತಮ್ಮ ಕಾವ್ಯಗಳನ್ನ ಅಲ್ಲಲ್ಲಿ ಅಲ್ಪಮಟ್ಟಿನ ಹೊಸೋದಯ ಬೆಳಕಿಗೆ ತರಲು ತಮ್ಮ ಮೂಲ ಜ್ಞಾನವನ್ನು ಬಳಸಿಕೊಂಡಿದ್ದಾರೆ ಅಂತಹ ಕಾವ್ಯಗಳಲ್ಲಿ ಕೆಲವನ್ನು ಇಲ್ಲಿ ನಮೂದಿಸುವ ಅಗತ್ಯವಿದೆ ಎಂದು ಎನಿಸುತ್ತದೆ.
ಸರ್ವರನ್ನು-ಸರ್ವ ಜನಾಂಗದ ಶಾಂತಿಯ ತೋಟವನ್ನು ಮತ್ತೆ ಮತ್ತೆ ನೆನಪಿಸಿರುವ ಕವಿ ಅಕ್ಷರ ಕಲಿಸಿದ ಗುರು ಗುರುವಿನಿಂದ ಕಲಿಕೆ ಶುರು ಗುರುಗಳು ತುಂಬಿದ ಜ್ಞಾನ ಬಂಡಾರ ಗುರುಗಳ ಕಂಡೆ ಸಡಗರ ! ಇಂತಹ ಗುರುವಿನ ಕರುಣೆಯ ದೊರೆಯಬೇಕಾದರೆ ಬಿಡಬೇಕಣ್ಣ ಹಮ್ಮು ಎನ್ನುವ ಜನಪದ ಶೈಲಿಯ ಕವಿಗಳನ್ನ ನೆನೆಸುವಂತಹ ಕವಿತೆ ಒಂದೇ ಆದರೆ ರೈತನ ಕರ್ತವ್ಯವನ್ನ ದೇಶದ ಸೈನಿಕರ ಕರ್ತವ್ಯವನ್ನು ದೇಶ ನೈತಿಕ ತಳಹದಿಯ ಮೇಲೆ ನಿಲ್ಲಲು ಶಿಕ್ಷಕನ ಮಹತ್ವದ ಜವಾಬ್ದಾರಿಯನ್ನ ವಿವರಿಸುವ ಕೆಲವು ಕವಿತೆಗಳು ಸಹಿತ ಇಲ್ಲಿ ಬರೆದಿದ್ದಾರೆ ಕವಿ. ಈ ಕವಿತ್ವದ ಭಾವಗಳೇ ಹೀಗೆ ಉದಯಿಸುವಾಗ ಚಿಕ್ಕ ಚಿಕ್ಕದಾಗಿ ಚೊಕ್ಕದಾಗಿ ಬೆಳೆಯುತ್ತಾ ಬೆಳೆಯುತ್ತಾ ಬ್ರಹ್ಮರವಾಗುವುದನ್ನು ನಾವು ಗಮನಿಸಿದ್ದೇವೆ.
ಅಂತಹ ಸರಳವಾದ ವಿಚಾರವನ್ನ ಗ್ರಹಿಸಿಕೊಂಡ ಕವಿ ತನ್ನ ಕವಿತ್ವದ ಮೂಲಕ ಭಾವಗಳಿಗೆ ಹೊಸ ದಕ್ಕಿಸುವ ಪ್ರಯತ್ನ ಮಾಡಿದ್ದಾರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಕವಿ ತಾನು ಕಂಡಿದ್ದನ್ನು ಅನುಭವಿಸಿದ್ದನ್ನ ಸಾನಿ ನೀಡುವ ಮೂಲಕ ಸಮಾಜದಲ್ಲಿ ಗತಿಸಿರುವ ಘಟನೆಗಳಿಗೆ ತನ್ನದೇ ಆದ ವಿಶೇಷ ಸಂಸತ್ತು ಒದಗಿಸಿ ಭಾವ ತೀವ್ರತೆಗೆ ಗಬಕ್ನೆ ಸಮಾಜ ವರ್ತಿಸುವ ರೀತಿ ಗಳನ್ನು ಕಾವ್ಯದ ಮೂಲಕ ಸೆರೆಹಿಡುವ ಪ್ರಯತ್ನ ಮಾಡಿದ್ದಾರೆ. ಮಳೆಯಿಂದ ಚಾಲುವಾಗುವ ಸಾಲು ಮಲೆನಾಡ ಸಿರಿ ನಮಗೆಲ್ಲಾ ಹೆಮ್ಮೆಯ ಗರಿ,ನೋಡು ಬಾ ಈ ಅಂದ ಸವಿಯಿರೆ ಚೆಂದ,ಕವಿ ಭಾವ ಮನಸ್ಸಿದ್ದರೆ ಮಾರ್ಗ ಎನ್ನುವ ನೈಜಭಾವ ವ್ಯಕ್ತಪಡಿಸಿದ್ದಾರೆ.
ಕವಿಯ ಆಂತರ್ಯ ಆಸ್ವಾದನೆಯ ಗುಣ ಇದ್ದಾಗ ಮಾತ್ರ ಮಲೆನಾಡು ಸಿರಿ ಆಸ್ವಾದನೆ ಮಾಡಲು ಸಾಧ್ಯ ಎನ್ನುವ ಈ ಕವಿತೆ ಹುಟ್ಟು ಹಾಕಿದ್ದಾರೆ. ಈ ಪದ್ಯದೊಂದಿಗೆ ಕೆ.ಎಸ್.ಎನ್ ಅವರ ನಿತೋತ್ಸವ ಕವಿತೆಯ ಸಾಲುಗಳು ಪ್ರೇರಕ ಶಕ್ತಿಗಳಾಗಿ ನಿಂತು ಕೊಂಡಿವೆ ಎನಿಸುತ್ತವೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ.ಹೀಗೆ ಕವಿಯನ್ನ ಆವರಿಸಿಕೊಂಡಿರುವ ಹಿಂದಿನ ಕವಿಗಳ ಸಾಲುಗಳು ಮುಂದಿನ ಕಾವ್ಯಗಳಿಗೆ ಪ್ರೇರಕಗಳಾಗಿವೆ ಅವುಗಳನ್ನ ಬಳಸುವ ಮತ್ತು ಸವೆಸುವ ಎರಡು ಕೆಲಸ ಕವಿ-ಸಹೃದಯ ಮಾಡಬಹುದು ಎನ್ನುವುದಕ್ಕೆ ನಾಗೇಂದ್ರಪ್ಪ ಅವರ ಕವಿತೆ ಉದಾಹರಣೆಯಾಗಿ ನಿಲ್ಲುತ್ತದೆ.ಕೇವಲ ಆಚರಣೆಗೆ ಸೀಮಿತವಾಗಿರುವ ರಾಷ್ಟ್ರೀಯ ಹಬ್ಬಗಳು ಎನಿಸಿಕೊಂಡಿರುವ ಗಣರಾಜ್ಯೋತ್ಸವ ಸ್ವತಂತ್ರ ಭಾರತದ ಸ್ಮರಣಾ ದಿನ ಗಾಂಧಿ ಜಯಂತಿ ಭಾರತ ಬಿಟ್ಟು ತೊಲಗಿ ಎನ್ನುವ ಶಾಂತಿ ಮಂತ್ರಗಳು ಕೇವಲ ಪುಸ್ತಕೀಯ ಆಚರಣೆಗಳಾದಾಗ ಅವುಗಳನ್ನು ಭವಿಷ್ಯದ ಭಾರತದ ಮಕ್ಕಳಿಗೆ ತಿಳಿಸುವ ಮಹತ್ವದ ಜವಾಬ್ದಾರಿಗಳು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ವರ್ಗ ಹಿರಿಯರು ವಿದ್ಯಾವಂತರು ಮಾಡಬೇಕಾದದ್ದು ಬಹುಮುಖ್ಯವಾದ ಕೆಲಸಗಳಲ್ಲಿ ಒಂದು ಎನ್ನುವ ಭಾವನೆ ವ್ಯಕ್ತಪಡಿಸುವ ಸಲುವಾಗಿ ಸ್ವಾತಂತ್ರ್ಯ ಭಾರತ ಹೇಗಿರಬೇಕು ಅದರ ಆಚರಣೆಯ ಬದ್ಧತೆ ಯಾವ ರೀತಿಯಲ್ಲಿ ವ್ಯಕ್ತವಾಗಬೇಕು ಎನ್ನುವ ಅತಿ ಸೂಕ್ಷ್ಮವಾದ ವಿಚಾರ ಸ್ವತಂತ್ರ ಭಾರತ ಕವಿತೆಯ ಮೂಲಕ ವ್ಯಕ್ತಪಡಿಸುವ ಪ್ರಯತ್ನಕ್ಕೆ ಸಾಪಲ್ಯ ಕಂಡಿದ್ದಾರೆ.
ಅದರಲ್ಲಿ ಕವಿತೆಯ ಸಾಲುಗಳು ಹೀಗಿವೆ, ಭಾರತ ಮಾತೆಯ ಹೆಮ್ಮೆಯ ಪುತ್ರರು ಸೆರೆವಾಸ ಕಂಡರು ಜನಜಾಗೃತಿ ಬೆಳೆಸಲು ಮುಂದಾದರು ಸಂಘಟನೆಯ ಮಾರ್ಗ ಅರಿತರು ಬ್ರಿಟಿಷರ ಮುಗ್ಗರಿಸಿದರು.
ಹೀಗೆ ವೀರರಸುತ ಮೂಲಕ ಭಾರತೀಯರು ಹೋರಾಡಿ ಬ್ರಿಟಿಷರನ್ನ ಭಾರತ ಬಿಟ್ಟು ಹೋಗುವಂತೆ,ಭಯ ಹುಟ್ಟು ಹಾಕಿದರು,ದೇಶ ಬಿಟ್ಟು ತೊಲಗಿ ಎಂದರು,ಇದು ನನ್ನ ಭಾರತ ಇಲ್ಲಿ ಜೀವಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದು ಘೋಷ ವಾಕ್ಯ ಹಾಕಿದರು ಎನ್ನುವ ಕಲ್ಪನೆಯಲ್ಲಿ ಈ ಸ್ವಾತಂತ್ರ್ಯ ದಕ್ಕಿದ್ದು ಕೇವಲ ಹೋರಾಟಗಳ ಮೂಲಕ ಅಲ್ಲ ಎಷ್ಟೋ ಮಹನೀಯರು ತಮ್ಮ ಜೀವನವನ್ನೇ ಭಾರತಾಂಬೆಗೆ ಅರ್ಪಿಸಿದ್ದಾರೆ ಈ ಅರ್ಪಿತ ಸಮರ್ಪಿತ ಭಾವನೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ ಅದನ್ನ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ತಿಳಿದವರು ಯುವ ಭಾರತ ನಿರ್ಮಾಣದಲ್ಲಿ ಸತ್ರಿಯ ಪಾತ್ರ ವಹಿಸಿಕೊಳ್ಳಬೇಕು ಎನ್ನುವ ಜವಾಬ್ದಾರಿ ಪದ್ಯದ ಮೂಲಕ ವ್ಯಕ್ತಪಡಿಸುವ ಪ್ರಯತ್ನದಲ್ಲಿ ಸಾಪಲ್ಯ ಕಂಡಿದ್ದಾರೆ.
ಒಟ್ಟಾರೆಯಾಗಿಯೇ ಹಾಲಕ್ಕಿ ನುಡಿತೈತೆ ಕವಿತೆಗಳ ಸಂಕಲನ ಭೂಮಾತ ಪ್ರಕಾಶನದಿಂದ ಪ್ರಕಟವಾಗಿದ್ದು,ಅತ್ಯುತ್ತಮವಾದ ಕವಿತೆಗಳನ್ನ ಹೊಂದಿರುವ ಸಮಾಜಕ್ಕೆ ಇಂದಿನ ಅಗತ್ಯಗಳಲ್ಲಿ ಒಂದಾಗಿರುವ ಓದುವ ಓದಿಸುವ ಸಂಸ್ಕೃತಿಗೆ ಬದ್ಧವಾಗಿರುವ ಭೂಮಾತೆ ಪ್ರಕಾಶನ ಇಂತಹ ಸಾಕಷ್ಟು ಕೃತಿಗಳನ್ನು ಕನ್ನಡ ಸರಸ್ವತ ಲೋಕಕ್ಕೆ ಬಳುವಳಿಯಾಗಿ ಕೊಟ್ಟಿರುವುದು ಸ್ಮರಿಸಬೇಕಾದ ವಿಚಾರವೇ ಸರಿ ಸಮರಸವೇ ಜೀವನ ವಿರಸವೇ ಮರಣ ರಸವೆ ಜನನಕ್ಕೆ ಮೂಲ ಕಾರಣ ಎನ್ನುವ ಬೆಂದ್ರೆಯ ನುಡಿಯಂತೆ ಸಮಾನಸದಿಂದ ಸಹೋದರತ್ವದಿಂದ ಜೀವನ ಸರಿದೂಗಿಸಿಕೊಂಡು ಹೋಗಲು ಕವಿಗಳ ಕಾವ್ಯಗಳು ಪ್ರಕಾಶಕರ ಪುತ್ತಿಗೆಗಳು ಬಹು ದೊಡ್ಡ ಬದಲಾವಣೆಯನ್ನ ಸಮಾಜದಲ್ಲಿ ಹುಟ್ಟು ಹಾಕುತ್ತವೆ ಅದೇ ಕಾರಣಕ್ಕಾಗಿ ಡಾ. ಬಿಆರ್ ಅಂಬೇಡ್ಕರ್ ಅವರು ಹರಿದ ಅಂಗಿದ್ದರೂ ಚಿಂತಿಸಬೇಡ ಕೈಯಲ್ಲಿ ಪುಸ್ತಕವನ್ನು ಯಾವತ್ತೂ ಮರೆಯಬೇಡ.ಎನ್ನುವ ಮಹತ್ವದ ವಾಣಿ ನೀಡುವ ಮೂಲಕ ಪುಸ್ತಕ ಪ್ರಕಟಿಸುವ ಮತ್ತು ಲೇಖಕರಿಗೆ ನ್ಯಾಯ ಒದಗಿಸುವ ಕೆಲಸ ಬಹುದೊಡ್ಡದು ಎಂದಿದ್ದಾರೆ.
ಅಂತ ಬಹುದೊಡ್ಡ ಕಾರ್ಯವನ್ನ ಬಹು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಪ್ರಕಾಶಕರಾದ ಎಂ.ಕೆ.ಶೇಖ ಅವರಿಗೂ ಪುಸ್ತಕ ಪ್ರಕಟಿಸಲು ಉತ್ತಮವಾದ ಕವಿತೆಗಳನ್ನ ಒದಗಿಸಿದ ಸಿಎಚ್.ನಾಗೇಂದ್ರಪ್ಪ ಅವರಿಗೂ ಮನದಾಳದಿಂದ ಅಭಿನಂದನೆಗಳನ್ನ ತಿಳಿಸುತ್ತಾ,ಈ ಕವಿತೆ ನಾಡಿನುದ್ದಕ್ಕೂ ಸಂಚರಿಸಿ ಓದುಗರಲ್ಲಿ ನೈತಿಕತೆಯನ್ನು ಉನ್ನತಿಕರೆಸಿ,ಸರ್ವರ ಹೃದಯ ಆವರಿಸಿ ಜನಮಾನಸದಲ್ಲಿ ಉಳಿದುಕೊಳ್ಳಲಿ ಶುಭಗೈಯುತ್ತೇನೆ.
– ಮೈಬೂಬಸಾಹೇಬ.ವೈ.ಜೆ
ಕನ್ನಡ ಉಪನ್ಯಾಸಕರು,ಯುವ ಬರಹಗಾರರು,ವಿಜಯಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.