ಉಮ್ರಾ ಪರ್ಮಿಟ್ ಇಲ್ಲದೆ ಮಕ್ಕಾ ಪ್ರವೇಶಿಸುವರಿಗೆ ಬಾರೀ ದಂಡ
ಜೆದ್ದಾ(www.vknews.in): ಮುಸಲ್ಮಾನರ ಪವಿತ್ರ ಮಾಸ ರಂಝಾನ್ ಪ್ರಾರಂಭದ ದಿನದಿಂದ ಮಕ್ಕಾ ಹಾಗೂ ಮದೀನಾ ನಗರಗಳು ವಿಶ್ವಾಸಿಗಳಿಂದ ತುಂಬಿ ತುಳುಕತೊಡಗಿದೆ. ಪೊಲೀಸರು ಹಾಗೂ ಸ್ವಯಂ ಸೇವಕರಿಗೆ ಎರಡೂ ನಗರಗಳಿಗೆ ಬರುವ ಯಾತ್ರಾರ್ಥಿಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಈ ಕಾರಣದಿಂದಾಗಿ ಮಕ್ಕಾ ನಗರ ಪ್ರವೇಶಿಸುವ ತಾಯಿಫ್ ಚೆಕ್ ಪಾಯಿಂಟ್ ಗಳಲ್ಲಿ ವಾಹನಗಳನ್ನು ಹಾಗೂ ಯಾತ್ರಾರ್ಥಿಗಳನ್ನು ಕೂಲಂಕುಶವಾಗಿ ತಪಾಸಣೆ ನಡೆಸಲಾಗುತ್ತಿದೆ. ‘ನುಸುಕ್’ ಆ್ಯಪ್ ಮೂಲಕ ಉಮ್ರಾ ಪರ್ಮಿಟ್ ಪಡೆಯದೇ ಮಕ್ಕಾ ಪ್ರವೇಶಿಸಲು ಪ್ರಯತ್ನಿಸುವವರನ್ನು ತಾಯಿಫ್ ಚೆಕ್ ಪಾಯಿಂಟ್ ನಿಂದ ಹಿಂದಿರುಗಿಸಿ ಕಳುಹಿಸಲಾಗುತ್ತಿದೆ. ಈ ತಪಾಸಣೆಯ ಕಣ್ತಪ್ಪಿಸಿ ಮಕ್ಕಾ ಪ್ರವೇಶಿಸುವರಿಗೆ 5000 ರಿಯಾಲ್ ನಿಂದ 10,000 ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.