(www.vknews.in) ; ತಮಗೆಲ್ಲರಿಗೂ ತಿಳಿದಿರುವಂತೆ ಶುದ್ದ ಮನಸ್ಸಿನ, ಮಾತ್ರ್ ಹೃದಯದ, ಬಡವರ ಬಗ್ಗೆ ಸದಾಕಾಲ ಚಿಂತಿಸುವ,ಯಾವ ರೂಪದಲ್ಲಿ ಏನಾದರೂ ಮಾಡಿ ಬಡವರ ಜೀವನ ಮಟ್ಟ ಸುಧಾರಿಸಲು ಸಹಾಯ ಮಾಡಬೇಕು ಎಂದು ಚಿಂತಿಸುತ್ತಿರುವ ಕೆಜಿಎಫ್ ರವರಿಗೆ ರಾಜಕೀಯ ಅಧಿಕಾರ ಕೊಟ್ಟರೆ ಖಂಡಿತ ಬಡವರಿಗೆ, ದುರ್ಬಲ ವರ್ಗದ ಜನರಿಗೆ ದೀರ್ಘ ಕಾಲ ಪ್ರಯೋಜನ ಆಗಬಹುದಾದ ಯೋಜನೆಗಳನ್ನು ಜಾರಿಗೆ ತರಲು ಹೆಚ್ಚು ಶಕ್ತಿ ದೊರೆಯುತ್ತದೆ. ಖಂಡಿತ ಇಂತಹ ನಾಯಕರಿಗೆ ರಾಜಕೀಯ ಶಕ್ತಿ ದೊರೆತರೆ ಈ ನಾಡಿನ ಬಡವರು-ದುರ್ಬಲರು ನಿರುದ್ಯೋಗಿಗಳು, ಅಶಕ್ತರು ಒಂದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವಂತಹ ಯೋಜನೆಗಳನ್ನು ಇವರು ಜಾರಿ ಮಾಡುತ್ತಾರೆ.
ತನಗೆ ಅಧಿಕಾರ ಇಲ್ಲದಿದ್ದರೂ ತನ್ನ ಊರಿನ ಬಡ ಮಹಿಳೆಯರ ಕಷ್ಟಗಳನ್ನು ನೋಡಿ ತನ್ನ ಹೃದಯವು ಮಿಡಿದು ಬಡ ಮಹಿಳೆಯರ ಬಗ್ಗೆ ಚಿಂತಾಮಘ್ನರಾಗಿ ಅನಿಲ ಯೋಜನೆ ಜಾರಿ ಮಾಡಿದಂತ ಧೀಮಂತ ನಾಯಕರಾಗಿದ್ದಾರೆ ಇವರು.ತಾನು ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣವನ್ನು ಕೂಡಿಸಿ ಸೌದ ಕಟ್ಟದೆ ಬಡಬಗ್ಗರಿಗೆ ದಾನ ಮಾಡುತ್ತಾ ಅದರಲ್ಲೇ ಸಂತೋಷವನ್ನು ಕಾಣುತ್ತಿರುವ ಬಂಗಾರದ ಮನುಷ್ಯರಾದ ಬಾಬುರಾವರ ಜೀವನವೇ ಈ ಸಮಾಜಕ್ಕೆ ಮಾದರಿ.
ಇವರಿಂದ ಸಮಾಜ ಅನೇಕ ಪ್ರಯೋಜನೆಗಳನ್ನು ಪಡೆದಿದೆ.ಹಾಗೆಯೇ ಸಾವಿರಕ್ಕೂ ಅಧಿಕ ಬಡವರಿಗೆ ಮನೆ ನಿರ್ಮಿಸಲು ಯೋಜನೆ ಹಾಕಿಕೊಂಡ ಮಹಾ ವಾಸ್ತಲ್ಯ ಹೃದಯಿ ಆಗಿದ್ದಾರೆ ಈ ಬಾಬುರವರು.ಇನ್ನೂ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಂತ ಧೀಮಂತ ನಾಯಕರಾಗಿದ್ದಾರೆ ಈ ಕೆಜಿಎಫ್ ಸರ್.ಇವರಿಗೆ ಕಾಂಗ್ರೆಸ್ ಪಕ್ಷವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಖಂಡಿತವಾಗಿಯೂ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ವಿಜಯಪತಾಕೆ ಆರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.ಹಾಗೆಯೇ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಇವರ ಸಹಾಯವು ಪಕ್ಷಕ್ಕೆ ಖಂಡಿತ ದೊರೆಯುತ್ತದೆ.
ಇಂತಹ ಮಹಾನ್ ನಾಯಕನಿಗೆ ಬಡವರ ಬಗ್ಗೆ ಕಳಕಳಿಯಿರುವ ಈ ಧೀಮಂತ ನಾಯಕನಿಗೆ ಕಾಂಗ್ರೆಸ್ ಪಕ್ಷ ಅವಕಾಶ ಕೊಟ್ಟು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿ ಬಡವರ ಕಷ್ಟಗಳನ್ನು ನೀಗಿಸಲು ಅವಕಾಶ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಸರ್ವಧರ್ಮೀಯರನ್ನು ಪ್ರೀತಿಸುತ್ತಿರುವಂತಹ ಇಂತಹ ನಾಯಕರಿಗೆ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದರೆ ಖಂಡಿತ ಬಡವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ರಾಜ್ಯದಲ್ಲಿ ಎಲ್ಲಾ ಕೋನಗಳಿಂದ ಬೆಂಬಲ ದೊರಕುತ್ತದೆ.
ಆದ್ದರಿಂದ ಕೆಜಿಎಫ್ ಬಾಬುರಂತಹ ಮಹಾನ್ ಚೇತನವನ್ನು ವಿಧಾನಸಭೆಗೆ ಆರಿಸಿ ಕಳುಹಿಸಬೇಕಾದದ್ದು ಕಾಂಗ್ರೆಸ್ಸಿನ ಕರ್ತವ್ಯವೂ ಆಗಿದೆ ಹಾಗೂ ಬಡವರಿಗೆ ಅನಿವಾರ್ಯವೂ ಆಗಿದೆ.ಆದ್ದರಿಂದ ಈ ಚೇತನವನ್ನು ವಿಧಾನಸಭೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಯಾಗಿ ಘೋಷಿಸಲು ಪಕ್ಷ ಚಿಂತನೆ ಮಾಡಬೇಕು ಅಂತ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.
✍️ ಉಬೈದ್ ವಿಟ್ಲ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.