(www.vknews.in) ; ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ (IEB) ಅಧೀನದಲ್ಲಿ ಮಾರ್ಚ್ ತಿಂಗಳ ಪ್ರಥಮ ವಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಬಡಕಬೈಲ್ ಹಯಾತುಲ್ ಇಸ್ಲಾಂ ಮದ್ರಸದ 7 ಮತ್ತು 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇಕಡಾ 100 ಫಲಿತಾಂಶ ಲಭಿಸಿದೆ. (5 ನೇ ತರಗತಿಗೆ ಶೇಕಡಾ 87 ಫಲಿತಾಂಶ)
ಹತ್ತನೇ ತರಗತಿಯ ಆಯಿಷಾ ಸುಹೈಲ (D\O ಉಸ್ಮಾನ್ ಮುಸ್ಲಿಯಾರ್ ಬಡಕಬೈಲ್) ಬಂಟ್ವಾಳ ರೇಂಜ್ ಮಟ್ಟದಲ್ಲಿ ಉನ್ನತ ಅಂಕದೊಂದಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುವುದರೊಂದಿಗೆ ಬಡಕಬೈಲ್ ಹಯಾತುಲ್ ಇಸ್ಲಾಂ ಮದ್ರಸ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸತತವಾಗಿ ಬಂಟ್ವಾಳ ರೇಂಜ್ ಮಟ್ಟದಲ್ಲಿ ಈ ಸಾಧನೆ ಕಾಯ್ದುಕೊಂಡಿದೆ ಎಂದು ಸದರ್ ಮುಅಲ್ಲಿಂ ಹನೀಫ್ ಸಖಾಫಿ, ಪೇರಮೊಗರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.