ನ್ಯೂಯಾರ್ಕ್ (ವಿಶ್ವ ಕನ್ನಡಿಗ ನ್ಯೂಸ್) : ನ್ಯೂಜೆರ್ಸಿಯ ಸೌತ್ ಪ್ಯಾಟರ್ಸನ್ನಲ್ಲಿರುವ ಮಸೀದಿಯಲ್ಲಿ ಸುಬಹಿ ಪ್ರಾರ್ಥನೆ ನಡೆಸುತ್ತಿದ್ದ ಇಮಾಮ್ಗೆ ಚಾಕುವಿನಿಂದ ಇರಿದ ನಂತರ ದುಷ್ಕರ್ಮಿಯೊಬ್ಬನನ್ನು ಬಂಧಿಸಲಾಗಿದೆ.
ಸೌತ್ ಪ್ಯಾಟರ್ಸನ್ ನ ಗೆಟ್ಟಿ ಅವೆನ್ಯೂನಲ್ಲಿರುವ ಉಮರ್ ಬಿನ್ ಖತ್ತಾಬ್ ಮಸೀದಿಯಲ್ಲಿ ಈ ಘಟನೆ ನಡೆದಿದೆ. ಮಸೀದಿಯ ಇಮಾಮ್ ಸೈಯದ್ ಅಲ್ನಾಕಿಬ್ ಗಾಯಗೊಂಡಿದ್ದಾರೆ. ಪ್ರಾರ್ಥನೆ ಆರಂಭವಾದ ಬಳಿಕ ಮಸೀದಿಗೆ ಬಂದ ದುಷ್ಕರ್ಮಿ ಹಿಂಬದಿಯಿಂದ ಚಾಕುವಿನಿಂದ ಇರಿದಿದ್ದಾನೆ.
ಘಟನೆಯ ಸಮಯದಲ್ಲಿ ಸುಮಾರು 200 ಭಕ್ತರು ಮಸೀದಿ ಒಳಗೆ ಇದ್ದರು. ನಗರದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮಾಮ್ ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ ದಾಳಿಕೋರನ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.