ಮುಳಬಾಗಿಲು ( ವಿಶ್ವ ಕನ್ನಡಿಗ ನ್ಯೂಸ್ ):ತಾಲೂಕಿನ ಕೆ.ಬೈಯ್ಯಪಲ್ಲಿ ಸಮೀಪವಿರುವ ಶಿನಿಗೇನಹಳ್ಳಿ ಗ್ರಾಮದ ಬಳಿ ಹಮ್ಮಿಕೊಂಡಿದ್ದ ಜೆಡಿಎಸ್ ಬೃಹತ್ ಸೇರ್ಪಡೆ ಕಾರ್ಯಕ್ರಮ ಹಾಗೂ ಜೆಡಿಎಸ್ ನ ಬೃಹತ್ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರವರು ಈ ಭಾಗದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಆನಂದ್ ರೆಡ್ಡಿ, ಟೊಮೊಟೊ ಮಂಡಿ ಮಾಲೀಕರ ಸಂಘದ ಮುಖಂಡರಾದ ಎನ್ ಆರ್ ಸತ್ಯಣ್ಣ.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎ .ವಿ. ಶ್ರೀನಿವಾಸ್, ತಿಮ್ಮರಾವುತನಹಳ್ಳಿ ಜಯರಾಮ್ ರೆಡ್ಡಿ ,ಐದ್ಲಾಪುರ ಜೈರಾಮ್ ರೆಡ್ಡಿ, ರೋಷನ್ ಅಲ್ಲು, ರಾಜೇಂದ್ರ ಪ್ರಸಾದ್ ನಗರಸಭೆಯ ಸದಸ್ಯ ರಾಜಶೇಖರ್, ಇನ್ನು ಹಲವಾರು ಮುಖಂಡರು ಬೇರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ನಿಮ್ಮೆಲ್ಲರ ಸಹಕಾರ, ಸಂಘಟನೆ, ತಾಲೂಕಿನ ಎಲ್ಲಾ ಜೆಡಿಎಸ್ ಕಾರ್ಯಕರ್ತರ ಸಹಕಾರ ಸಂಘಟನೆ ವತಿಯಿಂದ ಮುಂದಿನ ಮೇ ತಿಂಗಳು 10ನೇ ತಾರೀಕು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಮೃದ್ಧಿ ಮಂಜುನಾಥ್ ಅವರನ್ನು ಅತ್ಯಧಿಕ ಮತಗಳನ್ನು ನೀಡಿ ಜಯಗಳಿಸಬೇಕೆಂದು ಎಲ್ಲಾ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ತಾಲೂಕಿನಲ್ಲಿ ಆಲಂಗೂರು ಶ್ರೀನಿವಾಸ್ ರವರು ನಮ್ಮನ್ನು ಅಗಲಿದ ನಂತರ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರಿದ್ದರು ಸಹ ಗೆಲುವನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದರೆ ಈಗ ಸಮೃದ್ಧಿ ಮಂಜುನಾಥ್ ರವರು ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ ಆದುದರಿಂದ ತಾಲೂಕಿನ ಎಲ್ಲಾ ಜನತೆ ಈ ಬಾರಿ ಜೆಡಿಎಸ್ ಪಕ್ಷದ ಸಮೃದ್ಧಿ ಮಂಜುನಾಥ್ ಅವರನ್ನು ಬೆಂಬಲಿಸಿ ಮತ ನೀಡಿ ಆಶೀರ್ವಾದ ಮಾಡಿದರೆ ಆಲಂಗೂ ಶ್ರೀನಿವಾಸ್ ರವರ ಹೆಸರು ಮರುಸ್ಥಾಪನೆ ಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು.
ನಮ್ಮ ಜೆಡಿಎಸ್ ಪಕ್ಷದ ಅಧಿಕಾರದಲ್ಲಿದ್ದಾಗ 2006ರಲ್ಲಿ ಆಲಂಗೂರು ಶ್ರೀನಿವಾಸ್ ರವರು ಮಂತ್ರಿಯಾಗಿದ್ದರು ಆ ಸಂದರ್ಭದಲ್ಲಿ ಯರ್ ಗೊಳ್ ಡ್ಯಾಮ್ ಪ್ರಾಜೆಕ್ಟ್ ಸ್ಥಾಪನೆ ಆಗಲು ಇವತ್ತು ಅಲ್ಲಿ ದೊಡ್ಡ ಮಟ್ಟದಲ್ಲಿ ನೀರು ತುಂಬಿ ಜನರಿಗೆ ಅನುಕೂಲವಾಗಲು ಬೆಂಬಲ ಕೊಟ್ಟಿದ್ದು ಸ್ಥಾಪನೆ ಮಾಡಿದ್ದು ಆಲಂಗೂರ್ ಶ್ರೀನಿವಾಸ್ ರವರು, ಅವರು ನಮ್ಮ ಜೊತೆ ಇಲ್ಲ ಆದರೂನು ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ತಾಲೂಕಿನ ಅತ್ಯಂತ ಇವೆ ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತದ ಅಧಿಕಾರ ಕೊಟ್ಟರೆ ಕೋಲಾರ ಜಿಲ್ಲೆಗೆ ಶಾಶ್ವತವಾದ ಶುದ್ಧ ನೀರು ಕೊಡುವುದೇ ನನ್ನ ಮೊದಲನೆಯ ಗುರಿ ಎಂದು ತಿಳಿಸಿದರು. ನಮ್ಮ ಪಕ್ಷದ ಪಂಚರತ್ನ ಯೋಜನೆಗಳ ಮೂಲಕ ಅನೇಕ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ತಾಲೂಕಿನಲ್ಲಿ ನಿರಂತರವಾಗಿ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಾಮಾಣಿಕವಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿರುತ್ತಿರುವ ಒಳ್ಳೆಯ ವ್ಯಕ್ತಿತ್ವವುಳ್ಳ ಸಮೃದ್ಧಿ ಮಂಜುನಾಥ್ ಅವರನ್ನು ನೀವೆಲ್ಲರೂ ಹೆಚ್ಚಿನ ಮತಗಳಿಂದ ಆಶೀರ್ವಾದ ಮಾಡಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ ನಿಮ್ಮ ತಾಲೂಕಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತಂದು ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.
ಈ ರಾಜ್ಯದಲ್ಲಿ ಬೇರೆ ಪಕ್ಷದವರು ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದರು ಯಾವುದೇ ಜಿಲ್ಲೆಗೆ ಶಾಶ್ವತವಾದ ಯೋಜನೆಗಳು ಕೊಡುವಲ್ಲಿ ವಿಫಲರಾಗಿದ್ದಾರೆ ಆದುದರಿಂದ ಈ ಒಂದು ಬಾರಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಎಲ್ಲಾ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಮುಸ್ಲಿಂ ಬಾಂಧವರು ನಮ್ಮನ್ನು ನಂಬಿ ನಿಮ್ಮ ಅಭಿವೃದ್ದಿಗೆ ಸದಾ ನಾವು ಸಿದ್ಧ ಎಂದು ತಿಳಿಸಿದರು,ಸ್ತ್ರೀಯರ ಅಭಿವೃದ್ಧಿಗಾಗಿ ಶ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ಈ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಅನ್ಯ ಪಕ್ಷಗಳನ್ನು ತೆರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸೇರ್ಪಡೆಯಾದರು. ತಾಲೂಕಿನ ಕುರುಬ ಸಮಾಜದವರು ಎಚ್ ಡಿ ಕುಮಾರಸ್ವಾಮಿ ಅವರಿಗೆ ಟಗರನ್ನು ನೀಡುವ ಮೂಲಕ ಸನ್ಮಾನಿಸಿ ಗೌರವಿಸಿ ನಮ್ಮ ಸಮುದಾಯ ಜೆಡಿಎಸ್ ಪಕ್ಷಕ್ಕೆ ಬೆಂಬಲವಿದೆ ಎಂದು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀನಿವಾಸಪುರ ಜಿ.ಕೆ ವೆಂಕಟಶಿವಾರೆಡ್ಡಿ, ಎಂಎಲ್ಸಿ ಇಂಚರ ಗೋವಿಂದರಾಜು, ಜೆಡಿಎಸ್ ನ ಜಿಲ್ಲಾಧ್ಯಕ್ಷ ಬಣಕ್ನಳ್ಳಿ ನಟರಾಜ್, ಜೆಡಿಎಸ್ ರಾಜ್ಯಕೋರ್ ಕಂಪನಿ ಸದಸ್ಯರು ಹಾಗೂ ಮುಳಬಾಗಿಲು ತಾಲೂಕಿನ ಅಭ್ಯರ್ಥಿ ಸಮೃದ್ಧಿ ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಡಾಕ್ಟರ್ ಪ್ರಕಾಶ್, ಆಲಂಗೂರು ಶಿವಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಆನಂದ್ ರೆಡ್ಡಿ, ಹಿರಿಯ ವಕೀಲರಾದ ಕೆವಿ ಶಂಕರಪ್ಪ, ಮಾಜಿ ಎಂ.ಎಲ್.ಸಿ.ಗಳಾದ ತೂಪಲ್ಲಿ ಚೌಡರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಚೌಡೇಶ್ವರಿ, ಮಂಗಮ್ಮ ಮುನಿಸ್ವಾಮಿ, ವಕ್ಕಲೇರಿ ರಾಮು, ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ. ರಾಮೇಗೌಡ, ಕೂಚಿಮುಲ್ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರಾದ ವಡುಗೂರು ಹರೀಶ್ ಕುಮಾರ್, ಟೊಮೊಟೊ ಮಂಡಿ ಮಾಲೀಕರ ಮುಖಂಡ ಎನ್.ಆರ್. ಸತ್ಯಣ್ಣ, ಡಾಕ್ಟರ್ ವಜಾಹುತುಲ್ಲ ಖಾನ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶಾಮೇಗೌಡ, ರಾಜ್ ಗೋಪಾಲ್, ಶ್ರೀನಿವಾಸ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎ.ವಿ. ಶ್ರೀನಿವಾಸ್, ಜೆಡಿಎಸ್ ಉಪಾಧ್ಯಕ್ಷರಾದ ಜಮೀರ್ ಅಹಮದ್, ಬಿ ಎಂ ಸಿ ವೆಂಕಟರಾಮೇಗೌಡ, ಯುವ ಮುಖಂಡ ರೋಶನ್ ಅಲ್ಲೂ, ಡಾಕ್ಟರ್ ಭವಾನಿ, ಕೆಜಿಎಫ್ ರಾಜೇಂದ್ರ, ವೈ.ಯಮ್. ರೆಡ್ಡಿ, ಮಾಜಿ ನಗರಸಭೆ ಅಧ್ಯಕ್ಷರಾದ ಎಮ್ ಆರ್ ಮುರಳಿ, ಗ್ಯಾಸ್ ಶ್ರೀಧರ್, ಮುನಿಸ್ವಾಮಿ ಗೌಡ ,ಎಂಎಸ್ ಶ್ರೀನಿವಾಸ ರೆಡ್ಡಿ ,ರಘುಪತಿ ರೆಡ್ಡಿ ,ವೈ ಕೆ ಸೋಮಶೇಖರ್, ತೇಜು ರಮಣ, ನಗರಸಭೆ ಸದಸ್ಯರಾದ ಸೈಯದ್ ವಜೀರ್, ಮುಸ್ತಫ ಪಾಷಾ, ನೌಶಾದ್ ಪಾಷಾ, ಮುಖಂಡರಾದ ಸೈಯದ್ ಅಕ್ಸರ್, ವಾಹಿದ್ ಪಾಷಾ, ಮನೋವರ್ ಪಾಷಾ, ಏಜಾಜ್ ಪಾಷಾ, ರಾಜ ಶೇಖರ್, ನಾಗೇಶ್, ಮುನಿರಾಜು, ಮುನಾವರ್, ಗೊಲ್ಲಹಳ್ಳಿ ಜಗದೀಶ್, ಗೊಲ್ಲಳ್ಳಿ ಪ್ರಭಾಕರ್, ಶ್ರೀನಾಥ್, ಹೆಬ್ಬಣಿ ರವಿ, ಅನೇಕ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.