(www.vknews.in) ; ಕರ್ನಾಟಕ ಸಾಂಸ್ಕೃತಿಕ ಪರಿಷತ್ ಹಾಗೂ ಸೃಷ್ಟಿ ಶಕ್ತಿ ಸಂಸ್ಥೆ (ರಿ.) ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ವಿವಿಧ ಕಲೆ, ಸಾಹಿತ್ಯ,ನಾಡು ನುಡಿ ಸಂಸ್ಕೃತಿಗೆ ವರ್ಣಿಸಲದಳವಾದ ಅನುಪಮ ಸೇವೆ ಸಲ್ಲಸಿರುವ ಹಾಗೂ ಸ್ತುತ್ಯಾರ್ಹವಾದ ಸಾಧನೆ ಮಾಡಿದ ಅರ್ಹಗಣ್ಯ ಮಹನೀಯರನ್ನು ಗುರುತಿಸುವ ಮೂಲಕ ಭವ್ಯ ಕರ್ನಾಟಕದ ಅಭಿವೃದ್ಧಿಗೆ ನೆರವಾದವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಸಮಾಜ ಸೇವಕ ಡಾ ! ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರನ್ನು ಬೆಂಗಳೂರು ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಬೆಂಗಳೂರು ಬಸವನಗುಡಿ ಶ್ರೀ ಮಹಾ ಸಂಸ್ಥಾನಂ ಇದರ ಶ್ರೀ ಶ್ರೀ ಶ್ರೀ ಸಾತ್ವಿ ಯೋಗಿನಿ ಮಾತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅಖಿಲ ಕರ್ನಾಟಕ ನಾಮ ಫಲಕ ಕಲಾವಿದರ ಸಂಘ ರಿ. ಬೆಂಗಳೂರು ಡಾ.ಎಸ್.ಎಂ ನೇತ್ರಾನಂದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಕನ್ನಡದ ಏಸುದಾಸ್ ಖ್ಯಾತಿಯ ಗಾಯಕ ಶಶಿದರ್ ಕೋಟೆ, ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಸಂಸ್ಥೆಯ ಅಧ್ಯಕ್ಷರಾದ ಡಾ.ಇಸಾಕ್ ದೊಡ್ಡೇರಿ, ಬೆಂಗಳೂರು ಸ್ಟೇಟ್ ಬ್ಯಾಂಕ್ ಇಂಡಿಯಾದ ಸಹಾಯ ಕ ಪ್ರಧಾನ ವ್ಯವಸ್ಥಾಪಕರಾದ ಪ್ರಕಾಶ್, ದ.ಕ ಜಿಲ್ಲೆ ಸಮಾಜ ಸೇವಕ, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷರು, ಹಾಗೂ ಸೃಷ್ಠಿ ಶಕ್ತಿ ಸಂಸ್ಥೆಯ ದ.ಕ ಜಿಲ್ಲೆಯ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಡಾ ! ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಬೆಂಗಳೂರು ಎಲ್.ಆರ್ ಶಿರಡಿ ಸಾಯಿ ಆಸ್ಪತ್ರೆಯ ಸಂಸ್ಥಾಪಕ ಡಾ.ತುಕಾರಾಮ್ ಪಿ.ಎಸ್, ಬೆಂಗಳೂರು ಭಾರದ್ವಾಜ ಕುಟೀರ ನಿಶ್ವಾರ್ಥ ಸೇವಾಶ್ರಮದ ಸಂಸ್ಥಾಪಕ ಲಕ್ಮೀಶ ರಾಜು . ಸಮಾಜ ಸೇವಕ ಡಾ ! ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮಾತನಾಡಿ ಸಮಾಜ ಸೇವೆಯನ್ನು ಗುರುತಿಸಿ ನೀಡಿದ ಪ್ರಶಸ್ತಿಯಿಂದ ಇನ್ನೂ ಹೆಚ್ಚು ಸಮಾಜ ಸೇವೆ ಸೇವೆ ಮಾಡಲು ಕಟಿಬದ್ದರಾಗಬೇಕು ಎಂದರು. ಎಸ್.ಶೇಕ್ ಮೊಹಮ್ಮದ್ ಆಲಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.