ಅಡೂರು (ವಿಶ್ವ ಕನ್ನಡಿಗ ನ್ಯೂಸ್) : ನದಿಯಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಡೂರಿನ ದೇವರಡುಕ ಶಾಫಿ ಎಂಬವರ ಪುತ್ರ ಮೊಹಮ್ಮದ್ ಆಶಿಕ್(7) ಹಾಗೂ ಯೂಸುಫ್ ಅಲಿಯಾಸ್ ಹಸೈನಾರ್ ಎಂಬವರ ಪುತ್ರ ಫಾಝಿಲ್(9) ಮೃತರು.
ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಕ್ಕಳು ಸ್ನಾನಕ್ಕೆ ಇಳಿದಿದ್ದರು. ನದಿ ದಡದಲ್ಲಿದ್ದ ಇತರೆ ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರನ್ನು ದಡಕ್ಕೆ ಕರೆದೊಯ್ದು ಮುಳ್ಳೇರಿಯಾ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.