ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಶಾಸಕ ಯು.ಟಿ.ಖಾದರ್ ರವರು ಮೈಕ್ ಸಿಕ್ಕಿದರೆ ಎಸ್’ಡಿಪಿಐಯನ್ನು ಬಿಜೆಪಿಗೆ ಹೋಲಿಕೆ ಮಾಡುತ್ತಾರೆ. ಸ್ವತಃ ಖಾದರ್ ಅವರು ನಳಿನ್ ಕುಮಾರ್ ಕಟೀಲ್ ಜೊತೆಗೆ ವ್ಯವಹಾರದಲ್ಲಿ ಪಾಲುದಾರಿಕೆ ಇರುವುದು ಬಿಜೆಪಿ ಕಾರ್ಯಕರ್ತರಿಂದಲೇ ಈಗ ಹೊರ ಬರುತ್ತಿದೆ. ವ್ಯವಹಾರದಲ್ಲಿ ಪಾಲು ಇರುವಾಗ ರಾಜಕೀಯದಲ್ಲೂ ಪಾಲುದಾರಿಕೆ ಇಲ್ಲದಿರುತ್ತದೆಯೇ ಎಂದು ಎಸ್’ಡಿಪಿಐ ರಾಜ್ಯಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಪ್ರಶ್ನಿಸಿದ್ದಾರೆ.
ವಾಟ್ಸಪ್ ಗ್ರೂಪ್ ಒಂದರಲ್ಲಿ ಬಿಜೆಪಿ ಕಾರ್ಯಕರ್ತರು ಈ ಕುರಿತು ಚರ್ಚಿಸಿದ ಸ್ಕ್ರೀನ್ ಶಾಟ್ ಅನ್ನು ಅಪ್ಲೋಡ್ ಮಾಡಿರುವ ಅನ್ವರ್ ಸಾದಾತ್, ಬಿಜೆಪಿ ಮತ್ತು ಖಾದರ್ ನಡುವಿನ ಒಳ ಒಪ್ಪಂದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಅಸಮಾಧಾನದಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆದರಿಕೆ ಕರೆ ಬರುತ್ತಿದೆ ಎಂಬ ವೆಬ್ ಸೈಟ್ ಒಂದರ ಸುದ್ದಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಕಾರ್ಯಕರ್ತನೊಬ್ಬ, ಭದ್ರತೆ ಯಾಕೆ, ರಾಜೀನಾಮೆ ಕೊಟ್ಟು ಖಾದರ್’ನ ತಮ್ಮನೊಟ್ಟಿಗೆ ವ್ಯವಹಾರ ಮುಂದುವರಿಸಲಿ, ನಾಲಾಯಕ್ ಪಿಟೀಲು ಎಂದು ಗ್ರೂಪ್ ನಲ್ಲಿ ಸಂದೇಶ ಹಾಕಿರುವುದು ವೈರಲ್ ಆಗಿದೆ. ಇದನ್ನು ಉಲ್ಲೇಖಿಸಿ ಎಸ್ಡಿಪಿಐ ಮೇಲಿನಂತೆ ಪ್ರಶ್ನಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.