ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ಪ್ರೇಯಸಿಯ ಬರ್ತ್ ಡೇ ಆಚರಿಸಿದ ಪ್ರಿಯಕರ ಬಳಿಕ ಆಕೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ್ದಾನೆ. ನವ್ಯ (24) ಕೊಲೆಯಾದ ಯುವತಿ, ಪ್ರಶಾಂತ್ ಹತ್ಯೆ ಮಾಡಿರುವ ಪ್ರಿಯಕರ.
ಕನಕಪುರ ಮೂಲದ ನವ್ಯ ಹಾಗೂ ಪ್ರಶಾಂತ್ ದೂರದ ಸಂಬಂಧಿಕರಾಗಿದ್ದರು. ಕಳೆದ ಆರೇಳು ವರ್ಷಗಳಿಂದಲೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದ ನವ್ಯರ ಬರ್ತ್ ಡೇ ಕಳೆದ ಮಂಗಳವಾರ ಇತ್ತು. ಅಂದು ಸ್ವಲ್ಪ ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ ಆಕೆಯ ಬರ್ತ್ ಡೇ ಸೆಲೆಬ್ರೇಷನ್ ಗೆ ಪ್ಲಾನ್ ಮಾಡಿದ್ದ.
ಅದರಂತೆ ಲಗ್ಗೆರೆಯ ಮನೆಯಲ್ಲಿ ನಿನ್ನೆ ರಾತ್ರಿ ಬರ್ತ್ ಡೇ ಆಚರಣೆ ಮಾಡಲಾಗಿತ್ತು. ರಾತ್ರಿ ಕೇಕ್ ಕತ್ತರಿಸಿ ತಿನ್ನಿಸಿದ್ದ ಪ್ರಶಾಂತ್, ಬಳಿಕ ಹರಿತವಾದ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿ ಬೇರೊಬ್ಬನ ಜೊತೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನದ ಹಿನ್ನೆಲೆಯಲ್ಲಿ ಪ್ರಶಾಂತ್ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.