ಶಿವಮೊಗ್ಗ (www.vknews.in) : ಶಿವಮೊಗ್ಗ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅನುಪಸ್ಥಿತಿಯಲ್ಲಿ ಬಿಜೆಪಿ ಶಾಸಕ ಎಸ್ಎನ್ ಚನ್ನಬಸಪ್ಪ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಬಿಜೆಪಿಯ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಚನ್ನಬಸಪ್ಪ, ”ರಾಜ್ಯ ಸರ್ಕಾರ ವಿಶೇಷವಾದ ಸೌಲಭ್ಯ ಹೆಣ್ಣುಮಕ್ಕಳಿಗೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರೋದಕ್ಕೆ ನಾನು ಹಾರ್ದಿಕ ಅಭಿನಂದನೆ ಸಲ್ಲಿಸುತ್ತೇನೆ. ಸುರಕ್ಷಿತ ಪ್ರಯಾಣ ಮಾಡಬೇಕು, ಸರ್ಕಾರಕ್ಕೆ ಸವಾಲುಗಳಿವೆ, ಸಮಸ್ಯೆಗಳೂ ಇವೆ. ಇವನ್ನೆಲ್ಲಾ ಸರಿ ಮಾಡಿಕೊಂಡು ಹೋಗಬೇಕು” ಎಂದರು.
ಸರ್ಕಾರದ ಯೋಜನೆಯಾದ ಶಕ್ತಿ ಯೋಜನೆಗೆ ಒಬ್ಬ ಜನಪ್ರತಿನಿಧಿಯಾಗಿ ಚಾಲನೆ ನೀಡಿದ್ದೇನೆ. ನಾನು ಗೆದ್ದಿರುವ ಪಕ್ಷ ಬೇರೆ ಇರಬಹುದು. ನಾವೆಲ್ಲ ಸರ್ಕಾರದ ಪ್ರತಿನಿಧಿಗಳು, ಹಾಗಾಗಿ ಶಿಷ್ಟಾಚಾರವನ್ನು ಕಾಪಾಡುವುದು ನನ್ನ ಜವಾಬ್ದಾರಿ, ಹಾಗಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.