(www.vknews.in) ; ಮುಸ್ಲಿಮರು ಕಟ್ಟುನಿಟ್ಟಾಗಿ ಅನುಸರಿಸುವ ಸುನ್ನತಿ ಆಗಾಗ ವ್ಯಂಗ್ಯ ಮತ್ತು ಅವಹೇಳನಕ್ಕೆ ತುತ್ತಾಗುತ್ತದೆ. ಮುಸ್ಲಿಮರೂ ಸೇರಿದಂತೆ ಬಹುತೇಕರಿಗೆ ಇದರ ಸುತ್ತಲಿನ ಅಗತ್ಯದ ವಿಚಾರಗಳು ತಿಳಿದಿರುವುದಿಲ್ಲ. ಸುನ್ನತಿ ಎಂದರೆ ಶಿಶ್ನದ ತುದಿಯ ಚರ್ಮ ಕತ್ತರಿಸುವ ದೇಹಾರೋಗ್ಯಕ್ಕೆ ಪೂರಕವಾದ ಒಂದು ಪ್ರಕ್ರಿಯೆ. ಮಸೀದಿಗಳಲ್ಲಿ ಧರ್ಮಗುರುಗಳೂ ಕೂಡ ಇದನ್ನು ಧಾರ್ಮಿಕ ನೆಲೆಯಲ್ಲಿ ವಿವರಿಸುತ್ತಾರೆ ಬಿಟ್ಟರೆ ವೈದ್ಯ ವಿಜ್ಞಾನದ ದೃಷ್ಟಿಕೋನದಿಂದ ಪ್ರಸ್ತುತಪಡಿಸುವುದಿಲ್ಲ.
ಸುನ್ನತಿಯನ್ನು ಯಹೂದಿಗಳು ಕ್ರೈಸ್ತರು ಮತ್ತು ಮುಸ್ಲಿಮರು ಮಾಡಿಸಿಕೊಳ್ಳುತ್ತಾರೆ. ಯಹೂದಿಗಳು ಮತ್ತು ಮುಸ್ಲಿಮರಲ್ಲಿ ಗಂಡು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಇದನ್ನು ಮಾಡಿಸುತ್ತಾರೆ. ಆದರೆ ಕ್ರೈಸ್ತರಲ್ಲಿ ಮಾತ್ರ ಮುಂಚಿದ್ದ ಈ ಪದ್ಧತಿ ಈಗ ಕಾಣಿಸುತ್ತಿಲ್ಲ. ಮುಸ್ಲಿಮರು ಮತ್ತು ಯಹೂದಿಗಳಲ್ಲಿ ಇದರ ಪರಿಪೂರ್ಣ ಪಾಲನೆ ಇಂದಿಗೂ ಇದೆ..
ಮನುಷ್ಯನಿಗೆ ಬಹುತೇಕ ರೋಗಗಳು ದೇಹದ ನವರಂಧ್ರಗಳ ಮೂಲಕ ಬರುವಂತದ್ದು. ಅದರಲ್ಲಿ ಮೂತ್ರದ್ವಾರವೂ ಒಂದು. ದೇಹದ ಉಳಿದೆಲ್ಲ ರಂಧ್ರಗಳಿಂದ ಬರುವ ರೋಗಗಳಿಗೆ ವೈದ್ಯಲೋಕ ಅನಾದಿ ಕಾಲದಿಂದಲೂ ಶಮನಕಾರಿ ಚಿಕಿತ್ಸೆಯನ್ನು ಹೊಂದಿದೆ. ಆದರೆ ಮೂತ್ರದ್ವಾರದ ಮೂಲಕ ಬರುವ ರೋಗಗಳಿಗೆ ಇನ್ನೂ ಪರಿಹಾರ ಆರೋಗ್ಯ ಸೂತ್ರಗಳಿಲ್ಲ. ಔಷಧವೇ ಇಲ್ಲದ ಈಗಿನ ಏಡ್ಸ್ ಕೂಡ ಮೂತ್ರದ್ವಾರದಿಂದ ಬರುವ ಭಯಾನಕ ಕಾಯಿಲೆ. ಮೂತ್ರದ್ವಾರದ ಕಾಯಿಲೆಗಳ ಮೂಲ, ಜನನಾಂಗದ ಮುಂಭಾಗದ ನೇಲುವ ಚರ್ಮದ ತುದಿ.
ಇದರಲ್ಲಿ ಶೇಖರಣೆಯಾಗಿ ಹೊರಹೊಮ್ಮದೇ ಇರುವ ದೇಹದೊಳಗಿನ ಕಲ್ಮಶ ಹಲವಾರು ಲೈಂಗಿಕ ರೋಗಗಳು ಸ್ವತಃ ಪುರುಷನಿಗೆ ಮಾತ್ರವಲ್ಲ ಹೆಣ್ಣಿಗೂ ಹರಡುತ್ತದೆ. ಇದು ಗರ್ಭಕೋಶದ ಕ್ಯಾನ್ಸರ್ ಮುಂತಾದ ಭಯಾನಕ ರೋಗಗಳಿಗೆ ಕಾರಣವಾಗುತ್ತದೆ. ಮೂತ್ರದ್ವಾರ ನವರಂಧ್ರಗಳಲ್ಲೇ ಆರೋಗ್ಯದ ಮಟ್ಟಿಗೆ ಅಸುರಕ್ಷಿತ ರಂಧ್ರ. ಈ ರಂಧ್ರದ ಮೂಲಕ ಹರಡುವ ಎಲ್ಲ ಕಾಯಿಲೆಗಳಿಗೆ ಶಿಶ್ನದ ಚರ್ಮದ ಮುಂದೊಗಲೇ ಕಾರಣ. ಇದನ್ನು ವೈದ್ಯಕೀಯ ಲೋಕ ಕೂಡ ದೃಢಪಡಿಸಿದೆ.
ಈ ಭಯಾನಕ ರೋಗಗಳ ಸಂಭಾವ್ಯತೆಯನ್ನು ತೊಲಗಿಸುವ ಉದ್ದೇಶದಿಂದ ಆ ಚರ್ಮದ ಭಾಗವನ್ನು ಕತ್ತರಿಸಲಾಗುತ್ತದೆ. ಈ ಪದ್ದತಿಯನ್ನು ಮೊದಲು ಸಾಮೂಹಿಕವಾಗಿ ಜಾರಿಗೆ ತಂದದ್ದು ಕ್ರಿಸ್ತಪೂರ್ವ ಕಾಲದ ಈಜಿಪ್ಶಿಯನ್ ಜನಾಂಗಗಳು. ಅದನ್ನು ದೊಡ್ಡಮಟ್ಟದಲ್ಲಿ ತನ್ನದಾಗಿಸಿಕೊಂಡದ್ದು ಬನೀ ಇಸ್ರಾಯಿಲರು, ಅಂದರೆ ಈಗಿನ ಯಹೂದಿಗಳು. ದೇಹಾರೋಗ್ಯಕ್ಕೆ ಖತ್ನಾದ ಮಹತ್ವವನ್ನು ಇಸ್ಲಾಮಿಕ್ ಹದೀತ್ ಗಳು ಪುಷ್ಟಿಕರಿಸಿದ್ದರಿಂದ ಮುಸ್ಲಿಮರಲ್ಲೂ ಈ ಪದ್ದತಿಯನ್ನು ಅನುಸರಿಸಲಾಯಿತು. ಇದು ಆರೋಗ್ಯ ವಿಜ್ಞಾನದ ಭಾಗವೇ ಹೊರತು ಬಹಳಷ್ಟು ಜನ ಅಂದುಕೊಂಡಂತೆ ಮೌಢ್ಯವಾಗಲಿ ಕ್ರೂರತೆಯಾಗಲಿ ಅಲ್ಲ.
ಇದು ಶಿಶ್ನವನ್ನು ಕೊಯ್ಯುವುದಲ್ಲ, ಶಿಶ್ನದ ಸುತ್ತಲಿರುವ ಚರ್ಮದ ಮುಂದೊಗಲನ್ನು ಕೊಯ್ಯುವುದು..ಇಂದಿಗೂ ಕೂಡ ಈ ಪದ್ದತಿಯನ್ನು ಅನುಸರಿಸಿದ ದೇಶಗಳಲ್ಲಿನ ಲೈಂಗಿಕ ಕಾಯಿಲೆಗಳ ಪ್ರಮಾಣಕ್ಕೂ ಅನುಸರಿಸದ ದೇಶಗಳ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ಭಯಾನಕ ಕಾಯಿಲೆ ಏಡ್ಸ್ ನ ಅಪಾಯ ಕೂಡ ಕಡಿಮೆ ಎಂದು ವೈದ್ಯಕೀಯ ವರದಿಗಳು ಮತ್ತು ಜಾಗತಿಕ ಅಂಕಿಅಂಶಗಳು ಪುಷ್ಟಿಕರಿಸಿವೆ. ಶಿಶ್ನದ ಕ್ಯಾನ್ಸರ್ನ ಅಪಾಯವನ್ನು ಇದು ತಗ್ಗಿಸುತ್ತದೆ…
✍🏽 ಮುಷ್ತಾಕ್ ಹೆನ್ನಾಬೈಲ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.