ಉಳ್ಳಾಲ (www.vknews.in) : ಕೋಟೆಕಾರ್ SYS ತಲಪಾಡಿ ಹಾಗೂ ಕೋಟೆಕಾರ್ ಸೆಕ್ಟರ್ ಗಳ ವತಿಯಿಂದ ಸ್ವಸ್ಥ ಸಮಾಜಕ್ಕಾಗಿ ಸುಸಂಸ್ಕೃತ ಮಕ್ಕಳು ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ಅಭಿಯಾನದ ಭಾಗವಾಗಿ ಲೀಡರ್ಸ್ ಮೀಟ್ ಕಾರ್ಯಕ್ರಮ ಕರ್ನಾಟಕ ಮುಸ್ಲಿಂ ಜಮಾಅತ್ ತಲಪಾಡಿ ಇದರ ಅಧ್ಯಕ್ಷ ರಾದ ಬಾವ ಹಾಜಿ ಪಿಲಿಕೂರು ಅವರ ಅಧ್ಯಕ್ಷತೆಯಲ್ಲಿ ಜೂನ್ 24 ಆದಿತ್ಯವಾರ ರಾತ್ರಿ ಹಿದಾಯತ್ ನಗರ ಮದ್ರಸಾ ಹಾಲ್ ನಲ್ಲಿ ಜರಗಿತು.
ಕಾರ್ಯಕ್ರಮದ ಉಧ್ಘಾಟನೆಯನ್ನು ಹಿದಾಯತ್ ನಗರ ಮುದರ್ರಿಸ್ ಅಬ್ದುಲ್ ಅಝೀಝ್ ಸಅದಿ ನೆರವೇರಿಸಿ, ಬಶೀರ್ ಅಹ್ಸನಿ ತೋಡಾರು ಅವರು ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಅದರಿಂದ ಯುವ ಸಮೂಹವನ್ನು ಹೇಗೆ ರಕ್ಷಿಸಬೇಕೆಂಬುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಮುಸ್ತಫಾ ಝುಹಿರಿ ಕೆ.ಸಿ ರೋಡು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ತಲಪಾಡಿ, ಕೋಟೆಕಾರ್ ವಲಯದ ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್.ವೈ. ಎಸ್ , ಎಸ್.ಎಸ್. ಎಫ್ ಸಂಘಟನೆಗಳ ನಾಯಕರು ಭಾಗವಹಿಸಿದ್ದರು, ಎಸ್. ವೈ . ಎಸ್ ಕೋಟೆಕಾರ್ ಸರ್ಕಲ್ ಅಧ್ಯಕ್ಷ ರಾದ ಶಬೀರ್ ಅಷ್ಹರಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.