(www.vknews.in) : ದಾವಣಗೆರೆ ನಗರದ ಕಲ್ಯಾಣ ಮಂಟಪವೊಂದರಲ್ಲಿ ಬಂಗಾರದ ಸರ ಕಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ತಾಸಿನಲ್ಲಿ ಓರ್ವನನ್ನು ಬಂಧಿಸಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಗಾಂಧಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಎಸ್. ಪಿ.ಕಚೇರಿಯ ಮುಂಭಾಗದಲ್ಲಿರುವ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ಕುಟುಂಬ ಸಮೇತ ಬಂದಿದ್ದರು ಕೊಠಡಿಯಲ್ಲಿ ಲಗೇಜ್ ಬ್ಯಾಗ್ನಲ್ಲಿಟ್ಟಿದ್ದ 10 ಗ್ರಾಂ ತೂಕದ 40 ಸಾವಿರ ರೂ. ಬೆಲೆಯ ಬಂಗಾರದ ಒಡವೆ ಹಾಗೂ 8300 ರೂ. ನಗದು ಕಳ್ಳತನವಾಗಿರುವ ಬಗ್ಗೆ ಶ್ರೀಮತಿ ಎನ್.ಎಂ. ಶೋಭಾ ಅವರು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಾಂತಿನಗರದ ಮಸಾಲೆ ಪದಾರ್ಥ ವ್ಯಾಪಾರ ಮಾಡುವ ಕಿರಣ್ ನಾಯ್ಕ (24) ಎಂಬಾತನನ್ನು ಬಂಧಿಸಿದ್ದು, ಆತನಿಂದ 9 ಬಂಗಾರದ ಗುಂಡುಗಳು, 2 ಮಾಂಗಲ್ಯ ಸರ, 2500 ರೂ. ನಗದು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಪತ್ತೆ ಹಚ್ಚುವಲ್ಲಿ ಕಂಡಿರು ನಗರ ಠಾಣೆಯ ಪಿಎಸ್ಐ ಆಂಜನಪ್ಪ, ಪಿಎಸ್ಐ ಶಮೀಮ್ ಉನ್ನೀಸಾ ನೇತೃತ್ವದಲ್ಲಿ ಪಿಎಸ್ಐ ನಾಗೇಂದ್ರಪ್ಪ, ಸಿಬ್ಬಂದಿಗಳಾದ ಮಾರುತಿ, ಆಸ್ಕರ್ ಅಲಿ, ಖಾಜಾ ಹುಸೇನ್ ಅತ್ತಾರ್, ಶಫೀವುಲ್ಲಾ ಸಿದ್ಧಕಲಿ, ಚನ್ನಬಸವ ಗೋಡೆಕರ್, ಲಕ್ಷ್ಮಿ ದೇವಿ, ಲತಾ, ರಮೇಶ್ ಅವರುಗಳನ್ನು ಎಸ್ಪಿ ಡಾ.ಅರುಣ್ ಕೆ. ಪ್ರಶಂಸಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.