(www.vknews.in) : ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆ ಇದರ ವತಿಯಿಂದ ಸಮಸ್ತ ಸ್ಥಾಪಕ ದಿನಾಚಾರಣೆ ಕಾರ್ಯಕ್ರಮವು ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷರಾದ ಫೈಝಲ್ ಡಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಖತೀಬ್ ಬಹು ಇಸ್ಹಾಖ್ ಫೈಝಿ ದುಆ ನೆರೆವೇರಿಸಿ ಸಮಸ್ತ ಶಂದೇಶ ಪ್ರಭಾಷಣ ನಡೆಸಿದರು.
ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನಾಟೆಕ್ಕಲ್ ಧ್ವಜಾರೋಹಣ ಗೈದರು, ಕಾರ್ಯಕ್ರಮದಲ್ಲಿ ದೇರಳಕಟ್ಟೆ ಸಮಸ್ತದ ಹಿರಿಯ ಉಮರಾ ನೆತರಾರಾದ ಹಾಜಿ ಅಬ್ದುರ್ರಹ್ಮಾನ್ ಪನೀರ್ ಹಾಗೂ ಮುಹಮ್ಮದ್ ನಡುಪದವು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇರಳಕಟ್ಟೆ ರೇಂಜ್ ಜಂ- ಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ ಬದ್ಯಾರ್. ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಅಧ್ಯಕ್ಷರಾದ ಅಬ್ದುಲ್ ಆರ್ ಅಹ್ಮದ್ ಶೇಟ್, ಕಾರ್ಯದರ್ಶಿ ಅಬ್ದುಲ್ ರಶೀದ್ ಡಿ.ಎಂ, ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರಾದ ಹಾಜಿ ಇಸ್ಮಾಯಿಲ್ ರಹ್ಮತ್ತುಲ್ಲಾ, ಮೊಹಮ್ಮದ್ ಡಿ.ಎಂ, ಎಸ್.ವೈ.ಎಸ್ ದೇರಳಕಟ್ಟೆ ಉಪಾಧ್ಯಕ್ಷರಾದ ಮೊಹಮ್ಮದ್ ಪನೀರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಹನೀಫ್. ಜೆ, ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಅಹ್ಮದ್ ಸಿರಾಜ್ ತಾಜ್, ಎಸ್.ಕೆ.ಎಸ್.ಎಸ್.ಎಫ್ ಉಪಾಧ್ಯಕ್ಷರಾದ ಮೊಹಮ್ಮದ್ ಯಾಕೂಬ್. ಎಸ್.ಕೆ.ಎಸ್.ಎಸ್.ಎಫ್ ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಹರ್ಷಾದ್, ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆಯ ಮಾಜಿ ವಿಖಾಯ ಚೆಯರ್ಮ್ಯಾನ್ ನಿಯಾಝ್ ಡಿ. ಎಂ. ಕನ್ವೀನರ್ ತಮೀಮ್ ಅಹ್ಮದ್, ಟ್ರೆಂಡ್ ದೇರಳಕಟ್ಟೆ ವಲಯ ಕನ್ವೀನರ್ ಅಹ್ಮದ್ ಶಹೀರ್, ಎಸ್ಕೆ. ಎಸ್.ಎಸ್.ಎಫ್ ದೇರಳಕಟ್ಟೆ ಗಲ್ಫ್ ಸಮಿತಿ ಅಧ್ಯಕ್ಷರಾದ ನಾಸಿರ್ ನಾಟೆಕ್ಕಲ್, ಅಬೂಬಕ್ಕರ್ ಪಾಲ್ದಡಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿ ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುನ್ಸೀದ್ ಧನ್ಯವಾದ ಸಮರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.