ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಹಾಗೂ ಜಿಲ್ಲಾಳಿತದ ಅಧಿಕೃತಜಾಲತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅವರು ತಿಳಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ರ ಕರಡು ಮತದಾರರ ಪಟ್ಟಿ ಪ್ರಚುರ ಪಡಿಸುವ ಸಂಬಂಧ ನೋಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತದ ಅಧಿಕೃತ ಜಾಲತಾಣ ಹಾಗೂ ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಪ್ರಕಟಿಸಿದೆ.
ಅಲ್ಲದೇ ಮತದಾರರ ಪಟ್ಟಿಯನ್ನು (http://ceokarnataka.kar.nic.in) ನಲ್ಲಿಯೂ ಸಹ ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕರಡು ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಒಂದು ವೇಳೆ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ಯುವಕರು/ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ ಮೃತ ಹೊಂದಿದ್ದಲ್ಲಿ ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ- 8ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟ ಅಧಿಕಾರಿ (ಬಿ.ಎಲ್.ಓ)ರವರಿಗೆ ದಿನಾಂಕ: 27.10.2023 ರಿಂದ 09.12.2023 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಸದರಿ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ದಿನಾಂಕ:- 26.12.2023 ರಂದು ಕಾಲೋಚಿತಗೊಳಿಸಲಾಗು ವುದು. ನಂತರ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ 05.01.2024ರಂದು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಅರ್ಹತಾ ದಿನಾಂಕ 01, ಜುಲೈ 2023, ಅಕ್ಟೋಬರ್ 27, 2023 ರಂತೆ 6 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯ ಸಂಖ್ಯಾ ವಿವಿರ; ಶ್ರೀನಿವಾಸಪುರ ಪುರುಷ ಮತದಾರರು 107662, ಮಹಿಳಾ 109438ಹಾಗೂ ಇತರರು 8 ಒಟ್ಟು 217108 ಇರುತ್ತದೆ. ಮುಳಬಾಗಿಲು ಪುರುಷ ಮತದಾರರು 107823, ಮಹಿಳಾ 109677ಹಾಗೂ ಇತರರು 11 ಒಟ್ಟು 217511 ಇರುತ್ತದೆ ಕೆ ಜಿ ಎಫ್ ಪುರುಷ ಮತದಾರರು 97834, ಮಹಿಳಾ 99363 ಹಾಗೂ ಇತರರು 42 ಒಟ್ಟು 197239 ಇರುತ್ತದೆ ಬಂಗಾರಪೇಟೆ ಪುರುಷ ಮತದಾರರು 103117, ಮಹಿಳಾ 103984 ಹಾಗೂ ಇತರರು 39 ಒಟ್ಟು 207140 ಇರುತ್ತದೆ ಕೋಲಾರ ಪುರುಷ ಮತದಾರರು 117446, ಮಹಿಳಾ 119981 ಹಾಗೂ ಇತರರು 57 ಒಟ್ಟು 237484 ಇರುತ್ತದೆ ಮಾಲೂರು ಪುರುಷ ಮತದಾರರು 95809, ಮಹಿಳಾ 97131 ಹಾಗೂ ಇತರರು 7 ಒಟ್ಟು 192947 ಇರುತ್ತದೆ ಒಟ್ಟು ಜಿಲ್ಲೆಯಲ್ಲಿ ಪುರುಷ 629691, ಮಹಿಳಾ 639574 ಇತರೆ 164 ಒಟ್ಟು 1269429 ಮತದಾರರು ಇರುತ್ತದೆ.
ವಿಶೇಷ ನೋಂದಣಿ ಕಾರ್ಯಕ್ರಮ: ದಿನಾಂಕ 18.11.2023 (ಶನಿವಾರ), 19.11.2023 (ರವಿವಾರ), 02.12.2023) (ಶನಿವಾರ) & 03.12.2023) (ರವಿವಾರ) ಗಳಂದು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹ ನಾಗರೀಕರು ಹಾಗೂ 18-19 ವಯೋಮಾನದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ- 6 ರಲ್ಲಿ ಸಂಬಂಧ ಪಟ್ಟ ಬಿ.ಎಲ್.ಓ ರವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸದರಿ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.
ಮತದಾರರ ಸಹಾಯವಾಣಿ ಆ್ಯಪ್ Voter helpline App” (VHA): ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರೀಷ್ಕರಣೆ ಕಾರ್ಯಕ್ರಮ- 2023-24 ರ ಸಂಬಂಧವಾಗಿ ಮತದಾರರು/ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಹಾಗೂ ನೊಂದಾಯಿಸಲು ತೆಗೆದು ಹಾಕಲು/ತಿದ್ದುಪಡಿ ಮಾಡಿಕೊಳ್ಳಲು ಮತದಾರರ ಸಹಾಯವಾಣಿ ಆಪ್” “Voter helpline App” (VHA) ನ್ನು ಬಳಸಿಕೊಳ್ಳಬಹುದಾಗಿದೆ.
ಅಲ್ಲದೇ Voter helpline App” (VHA) ನ್ನು ಮತದಾರರ ನೋಂದಣಾಧಿಕಾರಿಗಳು/ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ ಅಥವಾ ಬಿ.ಎಲ್.ಓ ಮೇಲ್ವಿಚಾರಕರು ಮತ್ತು ಮತದಾರರ ಪಟ್ಟಿ ನೋಂದಣಿಯಲ್ಲಿ ಭಾಗಿದಾರರಾಗುವ ಎಲ್ಲಾ ಅಧಿಕಾರಿಗಳು, & ಮತದಾರರು/ನಾಗರಿಕರು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು, ಸದರಿ ಡೌನ್ಲೋಡ್ ಮಾಡಿಕೊಂಡ ಆ್ಯಪ್ ಮೂಲಕ ತಮ್ಮ ಮೋಬೈಲ್ ನಮೂದಿಸಿ ಹೆಸರನ್ನು ನೋಂದಾಯಿಸಬಹುದು/ಸ್ಥಳಾಂತರಿಸಬಹುದು/ತೆಗೆದು ಹಾಕಬಹುದು/ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಸಹ ಸದರಿ “Voter helpline App” (VIIA) ಉಪಯೋಗಿಸಿಕೊಳ್ಳಲು ತಿಳಿಸಿದೆ.
ಮತದಾನ ಕೇಂದ್ರಗಳ ವಿವಿರ: ಶ್ರೀನಿವಾಸಪುರ 284, ಮುಳಬಾಗಿಲು 264, ಕೆ.ಜಿ.ಎಫ್. 221, ಬಂಗಾರಪೇಟೆ 253, ಕೋಲಾರ 275, ಮಾಲೂರು 241 ಒಟ್ಟು 1538 ಮತದಾನ ಕೇಂದ್ರಗಳಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಬಾರಿ ವಿಶೇಷವಾಗಿ ಮನೆ ಮನೆ ಸಮೀಕ್ಷೆಯನ್ನು ಕೈಗೊಂಡಿದ್ದು, ಸಮೀಕ್ಷೆ ಸಮಯದಲ್ಲಿ ಬಿ.ಎಲ್.ಒ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರ ಸಹಯೋಗದೊಂದಿಗೆ ಸಮೀಕ್ಷೆ ನಡೆಸಲಾಗಿದೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಸಮಯದಲ್ಲಿ ಸುಮಾರು 19000 ಮರಣಹೊಂದಿರುವ ಮತದಾರರನ್ನು ಗುರುತಿಸಲಾಗಿದ್ದು, ಸಂಬಂಧಿತರಿಂದ ಮತದಾರರ ಪಟ್ಟಿಯಿಂದ ಕೈಬಿಡಲು ಅರ್ಜಿಗಳನ್ನು ಸಹ ಪಡೆಯಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳ ರ್ಯಾಷನ ಜೇಷನ್ ಸಂಬಂಧ 1500ಕ್ಕೂ ಹೆಚ್ಚಿನ ಮತದಾರರಿರುವ ಮತಗಟ್ಟೆಯನ್ನು ವಿಭಜಿಸಿ ಹತ್ತಿರದ ಮತಗಟ್ಟೆಗೆ ಸೇರಿಸಲಾಗುವುದು ಮತ್ತು ಕಡಿಮೆ ಮತದಾರರಿರುವ ಮತಗಟ್ಟೆಗಳನ್ನು ಒಗ್ಗೂಡಿಸುವ ಈಗಾಗಲೇ ಪೂರ್ಣಗೊಂಡಿದೆ.
ಒಟ್ಟಾರೆ ಜಿಲ್ಲೆಯಲ್ಲಿ 1590 ಮತಗಟ್ಟೆಗಳಲ್ಲಿ 1500 ಕ್ಕಿಂತ ಕಡಿಮೆ ಮತದಾರರಿರುವ 8 ಮತಗಟ್ಟೆಗಳನ್ನು ಹಾಗೂ ಶೀಥಿಲಾವಸ್ಥೆಯಲ್ಲಿರುವ 11 ಮತಗಟ್ಟೆಗಳು ಸೇರಿದಂತೆ 60 ಮತಗಟ್ಟೆಗಳನ್ನು ವಿಭಜಿಸಲಾಗಿದೆ. ಪ್ರಸ್ತುತ ಒಟ್ಟಾರೆ 1538 ಮತಗಟ್ಟೆಗಳನ್ನು ಮುಂಬರುವ ಚುನಾವಣೆಗಾಗಿ ಸಜ್ಜಿಗೊಳಿಸಲಾಗಿದೆ.
ಕರ್ನಾಟಕ ಆಗ್ನೆಯ ಶೀಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ: ಕರ್ನಾಟಕ ದಕ್ಷೀಣ ಶೀಕ್ಷಕರ ಕ್ಷೇತ್ರದ ಅವಧಿಯೂ 21ನೇ ಜೂನ್ 2024ಕ್ಕೆ ಮುಕ್ತಾಯಗೊಳ್ಳಲಿದ್ದು, ಮತದಾರರ ಪಟ್ಟಿಗೆ ನೊಂದಾಯಿಸಲು 1ನೇ ನವೆಂಬರ್ 2023 ಅರ್ಹತ ದಿನಾಂಕವಾಗಿರುತ್ತದೆ. ನಮೂನೆ-19 ರಲ್ಲಿ 30ನೇ ಸೆಪ್ಟೆಂಬರ್ 2023 ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, 6ನೇ ನವೆಂಬರ್ 2023 ರಂದು ಕೊನೆ ದಿನಾಂಕವಾಗಿರುತ್ತದೆ. 23ನೇ ನವೆಂಬರ್ 2023 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. 9ನೇ ಡಿಸೆಂಬರ್2023 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, 30ನೇ ಡಿಸೆಂಬರ್ 2023 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ್, ಸಭೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.