(www.vknews.in) ಬೋಳಂತೂರು ಗ್ರಾಮದಲ್ಲೊಂದು ಊಟಕಿಲ್ಲದ ಉಪ್ಪಿನ ಕಾಯಿಯಂತಹ ಆರೋಗ್ಯ ಮತ್ತು ಕ್ಷೇಮ ಕೇಂದ್ರ
ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಬೋಳಂತೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸರಕಾರದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಊಟಕಿಲ್ಲದ ಉಪ್ಪನ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದೆ,ಗ್ರಾಮದಲ್ಲಿ 10000 ಸವಿರಕ್ಕಿಂತಲೂ ಹೆಚ್ಚಿನ ಜನರು ವಾಸಿಸುವ ಗ್ರಾಮ,ಈ ಗ್ರಾಮದ ಹೆಚ್ಚಿನ ಜನರು ಕೂಲಿ ಕಾರ್ಮಿಕರು,ಸರಕಾರ ಎಷ್ಟೋ ವರ್ಷಗಳ ಮುಂಚೆ ವೀರಕಂಭ ಗ್ರಾಮದಲ್ಲಿ ಸೇರಿಕೊಂಡಿರುವ ಬೋಳಂತೂರು ಪ್ರದೇಶದಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಯ ಆರೋಗ್ಯ ಉಪಕೇಂದ್ರವನ್ನು ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರಾರಂಭ ಮಾಡಿತ್ತು,ಇಂದು ಆ ಒಂದು ಉಪಕೇಂದ್ರದ ಪರಿಸ್ಥಿತಿ ಹದೆಗೆಟ್ಟಿದೆ,ಅಲ್ಲಿನ ವೈದ್ಯಾಧಿಕಾರಿ ಅವರಿಗೆ ಇಷ್ಟ ಬಂದ ಸಮಯದಲ್ಲಿ ಅದನ್ನು ತೆರೆಯುತ್ತಾ ಬಂದ್ ಮಾಡುತ್ತಾ ಹೋಗುತ್ತಾರೆ,ಅಲ್ಲಿ ಜನರ ಅರೋಗ್ಯದ ಹಿತಕ್ಕಾಗಿ ಮಾಡಿದ ಸರಕಾರದ ಉಪ ಆರೋಗ್ಯ ಕೇಂದ್ರದಲ್ಲಿ ಯಾವುದೇ ಮಾತ್ರೆಗಳು,ಚಿಕಿತ್ಸೆಗಳು ದೊರೆಯುತ್ತಿಲ್ಲ,ಎಲ್ಲಿಯ ವರೆಗೆಂದರೆ ಬಾಣಂತಿಯರು ಕಬ್ಬಿನ ಅಂಶದ ಮಾತ್ರೆ ಸೇವಿಸಲೇ ಬೇಕು ಎನ್ನುವ ಸರಕಾರದ ಸೂಚನೆ ಇರುವಾಗ ಈ ಕೇಂದ್ರದಲ್ಲಿ ಕಬ್ಬಿನ ಅಂಶದ ಮಾತ್ರೆಗಳು ಲಭ್ಯವಿಲ್ಲ,ಅಲ್ಲಿನ ವೈದ್ಯಾಧಿಕಾರಿಯನ್ನು ಕೇಳಿದರೆ ನಮಗೆ ಸಪ್ಲೈ ಇಲ್ಲ ಎನ್ನುವರು,ವಿಟ್ಲದ ಮುಖ್ಯ ವೈದ್ಯರಲ್ಲಿ ಕೇಳಿದರೆ ನಮಗೆ ಸಪ್ಲೈ ಇಲ್ಲ ಎನ್ನುವ ಉಡಾಪೆ ಉತ್ತರವನ್ನು ನೀಡುವರು,ಇತರ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರೆಗಳು ದೊರೆತರೂ ಈ ಒಂದು ಉಪಕೇಂದ್ರದಲ್ಲಿ ದೊರೆಯುತಿಲ್ಲವೇಕೆ….?! ಆಗದರೆ ಸರಕಾರ ಮಾತ್ರೆಗಳನ್ನು ಸಪ್ಲೈ ಮಾಡುತಿಲ್ಲವೇ…? ಅಥವಾ ವೈದ್ಯಾಧಿಕಾರಿಗಳು ಸರಕಾರ ಕೊಟ್ಟರು ಜನರಿಗೆ ನೀಡುತಿಲ್ಲವೇ….?ಆಗದರೆ ಈ ಪ್ರದೇಶದಲ್ಲಿ ಹೆಸರಿಗಾಗಿ ಮಾತ್ರ ಈ ಉಪಕೇಂದ್ರ ಇರುವುದೇ….?ಜನರ ಲಾಭಕ್ಕಾಗಿ ಇಲ್ಲದ ಈ ಉಪಕೇಂದ್ರವನ್ನು ನಮ್ಮ ತೆರಿಗೆಯ ದುಡ್ಡಿನಿಂದ ನಡೆಸುವ ಆ ಉಪಕೇಂದ್ರ ಇಲ್ಲಿ ಅಗತ್ಯ ಇದೆಯೇ….? ಉಪಕೇಂದ್ರಕ್ಕೆ ಮಳೆಗಾಳ ಬಂದರಂತು ಒಳ ಪ್ರವೇಶ ಮಾಡಲು ಆಗದ ಪರಿಸ್ಥಿತಿ ಆಗಿದೆ ಕಾರಣ ಏನೆಂದರೆ ಉಪಕೇಂದ್ರದ ಅಂಗಳ ಕೆಸರು ಮಯವಾಗುತ್ತದೆ….ಆಗಾದರೆ ಅದಕ್ಕೆ ಸರಕಾರ ಅಥವಾ ಅಲ್ಲಿನ ಸ್ಥಳೀಯ ಪಂಚಾಯತ್ ಆ ಕೇಂದ್ರಕ್ಕೆ ಮೂಲ ಭೂತ ಸೌಕರ್ಯ ಒದಗಿಸಲ್ಲವೇ….?ಒದಗಿಸುವುದಾದರೆ ಯಾಕಾಗಿ ಇಷ್ಟು ವಿಳಂಭ ಧೋರಣೆ ಮಾಡುವಿರಿ…?ಇದಕ್ಕೆ ಸಂಭಂದಿಸಿದ ಅಧಿಕಾರಿಗಳು ಇಲ್ಲಿನ ಸಮಸ್ಯಯನ್ನು ಆಲಿಸಿ ಆದಷ್ಟು ಬೇಗ ಪರಿಹರಿಸಿ ಜನರಿಗೆ ಉಪಯುಕ್ತವಾದ ರೀತಿಯಲ್ಲಿ ಸೌಲಭ್ಯ ಸಿಗುವಂತೆ ಆ ಕೇಂದ್ರವನ್ನು ಮಾಡಬೇಕಾಗಿದೆ ಮತ್ತು ಇನ್ನೂ ಉನ್ನತ ಮಟ್ದದ ಚಿಕಿತ್ಸೆ ದೊರೆಯುವಂತೆ ಮಾಡಲು ಕೇಂದ್ರವನ್ನು ಅಭಿವೃದ್ಧಿ ಗೊಲಿಸ ಬೇಕಾಗಿದೆ…ಪರಿಹರಿಸದಿದಲ್ಲಿ ಈ ಗ್ರಾಮದ ಜನರು ಸೇರಿಕೊಂಡು ಪ್ರತಿಭಟಿಸುವ ಹೆಚ್ಚರಿಕೆಯನ್ನು ನೀಡುತಿದ್ದಾರೆ _________________
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.