(www.vknews.in) ; ಕಾರ್ಕಳ ಉಪ ವಿಭಾಗದಲ್ಲಿ ಎರಡು ವರ್ಷ DYSP ಯಾಗಿ ಸೇವೆ ಸಲ್ಲಿಸಿ ಜನತೆಯಿಂದಲೂ, ಪೊಲೀಸ್ ಇಲಾಖೆಯಿಂದಲೂ ವ್ಯಾಪಕ ಪ್ರಶಂಸೆ ಗಳಿಸಿದ ಡೈನಾಮಿಕ್ DYSP ವಿಜಯ ಪ್ರಸಾದ್ ಜನತೆಯ ಮನ ಮಂದಿರಗಳಲ್ಲಿ ಬೆಳಗಿ ಬಂದಿದ್ದರು. ಅಶಾಂತಿ, ಅಶಿಸ್ತಿನ ಅಗರವಾಗಿದ್ದ ಕಾರ್ಕಳ ಉಪ ವಿಭಾಗವನ್ನು ತಹಬಂದಿಗೆ ತಂದು ಕಾರ್ಕಳದಾದ್ಯಂತ ಶಾಂತಿ-ಸುವ್ಯವಸ್ಥೆ ನೆಲೆ ಗೊಳಿಸಿದ DYSP ಶ್ರೀ ವಿಜಯ ಪ್ರಸಾದ್ ತನ್ನ ಪ್ರಾಮಾಣಿಕ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ಪಡೆದಿದ್ದರು.
ಜನತೆಯ ಅಪತ್ ಬಾಂಧವರಾಗಿ, ನೊಂದವರ, ಸಂಕಷ್ಟಕ್ಕೀಡಾದವರ ಸಹಾಯ ಕ್ಕೆ ಧಾವಿಸುವ ಧೀಮಂತಿಕೆಯ ದಿಟ್ಟ ಪೊಲೀಸ್ ಅಧಿಕಾರಿ ಯಾಗಿದ್ದರು. ಯಾವುದೇ ಹೊತ್ತಿನಲ್ಲಿ ಜನ ಸಾಮಾನ್ಯರು ನೇರವಾಗಿ ಸಂಪಕಿ೯ಸಿ ತಮ್ಮ ಅಹವಾಲುಗಳನ್ನು ತೋಡಿಕೊಂಡರೆ ಜನತೆಯ ಕಷ್ಟ ಕಾರ್ಪಣ್ಯಗಳೊಂದಿಗೆ ಸ್ಪಂದಿಸುವ ವಿಶಾಲ ಹೃದಯಿಯಾಗಿರುವ DYSP ಶ್ರೀ ವಿಜಯ ಪ್ರಸಾದ್ ಪೊಲೀಸ್ ಇಲಾಖೆಗೊಂದು ವರದಾನವಾಗಿದ್ದಾರೆ. ಮಂಗಳೂರಿನ ಲೋಕಾಯುಕ್ತ ದಲ್ಲಿ ಇನ್ಸ್ ಪೆಕ್ಟರ್ ರಾಗಿಯೂ, DYSP ಯಾಗಿಯೂ ಸೇವೆ ಸಲ್ಲಿಸಿದ್ದ ಕಾಲದಲ್ಲಿ ಅಕ್ರಮ ಸಂಪತ್ತು ಕ್ರೋಡೀಕರಿಸಿದ ಹಲವು ಭ್ರಷ್ಟಾಚಾರಿ ಅಧಿಕಾರಿಗಳನ್ನು ಬಂಧಿಸಿ ಕಂಬಿಯೊಳಗೆ ತುರುಕಿಸಿದ ವಿಜಯ ಪ್ರಸಾದ್ ಸರಕಾರದಿಂದಲೂ, ಜನತೆಯಿಂದಲೂ, ಇಲಾಖೆಯಿಂದಲೂ ವ್ಯಾಪಕ ಪ್ರಶಂಸೆಗೊಳಗಾದವರು.
ಬಂಟ್ವಾಳದ ಈ ಹಿಂದಿನ ASP ಶಿವಾಂಶು ರಜಪೂತ್ IPS ಬಂಟ್ವಾಳ ಉಪ ವಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿ ಅಕ್ರಮ ದಂಧೆ ಕೋರರ, ಸಮಾಜ ಬಾಹಿರ ವ್ಯಕ್ತಿಗಳ ಸದ್ದಡಗಿಸಿದಂತೆ ಇದೀಗ ಬಂಟ್ವಾಳ ಉಪ ವಿಭಾಗಕ್ಕೆ ನೂತನವಾಗಿ ನೇಮಕಗೊಂಡಿರುವ ಶ್ರೀ ವಿಜಯ ಪ್ರಸಾದ್ ಅಕ್ರಮ ದಂಧೆಕೋರರ, ಸಮಾಜ ಬಾಹಿರ ವ್ಯಕ್ತಿಗಳ ಸದ್ದಡಗಿಸಲು ಸಿದ್ಧರಾಗಿರಬೇಕು. ಶ್ರೀಯುತ ವಿಜಯ ಪ್ರಸಾದ್ ಬಂಟ್ವಾಳ ಉಪವಿಭಾಗದ ಅತ್ಯಂತ ದಕ್ಷ-ಪ್ರಾಮಾಣಿಕ ಅಧಿಕಾರಿಯಾಗಿ ವಿಜೃಂಭಿಸಲಿ. ಅವರ ನೇಮಕಕ್ಕೆ ಕಾರಣ ಕರ್ತರಾದವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಶೇಕ್-ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.