ಶಿವಮೊಗ್ಗ (www.vknews. in) : ಡಾ.ಝೈನಿ ಕಾಮಿಲ್ ಉಸ್ತಾದ್ ಸಾರಥ್ಯದ ಮಸ್ನವೀ ಗ್ಲೋಬಲ್ ಅಕಾಡೆಮಿ ಮಂಗಳೂರು ಇದರ ಅಧೀನದಲ್ಲಿ ಏಳನೇ ಮದ್ರಸ ಶಿವಮೊಗ್ಗದಲ್ಲಿ ಜನವರಿ 28ರಂದು ಭಾನುವಾರ ಪೂರ್ವಾಹ್ನ 10ಕ್ಕೆ ಉದ್ಘಾಟನೆಗೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕ ಖ್ಯಾತ ಭಾಷಣಕಾರ ಎಮ್ಮೆಸ್ಸೆಂ ಝೈನಿ ಕಾಮಿಲ್ ಮದ್ರಸ ಉದ್ಘಾಟನೆಗೈಯ್ಯಲಿದ್ದಾರೆ.
ಆಯ್ದ ಗಣ್ಯರು ಉದ್ಯಮಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಕೆ.ಸಿ ರೋಡ್, ಅಂಕೋಲಾ ಮುಂತಾದ ಕಡೆಗಳಲ್ಲಿ 6 ಮದ್ರಸಗಳು ಕಾರ್ಯಾಚರಿಸುತ್ತಿದ್ದು, ಶಾಫಿ, ಹನಫಿ, ಮಝ್ಹಬಿನ ಸುಮಾರು 300ರಷ್ಟು ವಿದ್ಯಾರ್ಥಿಗಳು ಜ್ಞಾನಾರ್ಜನೆ ಗೈಯ್ಯುತ್ತಿದ್ದಾರೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಎನ್ ಎ ನೌಫಲ್ ಮದನಿ ನೇಜಾರ್ ಪತ್ರಿಕೆ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.