ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಆದೇಶದಂತ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಇ-ಖಾತಾ ಅಂದೋಲನವನ್ನು ಏರ್ಪಡಿಸಲು ಆದೇಶಿಸಿದ್ದು. ಅದರಂತೆ ಫೆಬ್ರವರಿ 12 ರಿಂದ ಮಾರ್ಚ್ 12 ವರೆಗೆ ಪಟ್ಟಣದಲ್ಲಿ ಇ-ಆಸ್ತಿ ಅಂದೋಲನವನ್ನು ಹಮ್ಮಿಕೊಂಡಿದ್ದು, ಪುರಸಭೆಯ ಅಧಿಕಾರಿಗಳ ತಂಡ ನಿಮ್ಮ ಮನೆಬಾಗಿಲಿಗೆ ಬಂದು ಇ-ಆಸ್ತಿ ಮಾಡಿಕೊಳ್ಳಲು ಖಾತೆದಾರರು ತಮ್ಮ ಪೋಟೋ, ಮನೆ/ನಿವೇಶನದ ಪೋಟೋ, ಚುನಾವಣಾ ಗುರ್ತಿನ ಚೀಟಿ/ ಪಾನ್ ಕಾರ್ಡ್, ಸ್ವತ್ತಿನ ಕ್ರಯಪತ್ರ, ಇಸಿ 23-24 ಪ್ರಸ್ತುತ ಸಾಲಿನ ಆಸ್ತಿಯ ತೆರಿಗೆ ಪಾವತಿಸರಬೇಕು. ಬಡಾವಣೆ ಅನುಮೋದನಾ ನಕ್ಷೆ , ಭೂ ಪರಿವರ್ತನಾ ಪತ್ರಗಳನ್ನು ಸಲ್ಲಿಸಬೇಕು. ಇ-ಆಸ್ತಿ ಖಾತೆ ಮಾಡಿಸುವವರು ಈ ಅಂದೋಲನ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀನಿವಾಸಪುರ ಪುರಸಭೆ ಕಾರ್ಯಾಲಯ ವತಿಯಿಂದ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ನಿಮ್ಮ ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಆಂದೋಲನವು ದಿನಾಂಕ 12-02-2024 ರಿಂದ 12-03-2024 ವರೆಗೆ ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಪಟ್ಟಣದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.