ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ಕೋಲಾರ ಜಿಲ್ಲೆಯಲ್ಲಿ 13815 ಜನ 85 ವರ್ಷ ಮೇಲ್ಪಟ್ಟರಿದ್ದು, ಇದರಲ್ಲಿ 1433 ಜನರು ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನು ಆಯ್ಕೆ ಮಾಡಿಕೊಂಡಿದ್ದು, 1316 ಜನರು ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಇಚ್ಛಿಸಿರುತ್ತಾರೆ.
ಒಟ್ಟಾರೆ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟವರಲ್ಲಿ ಶೇ. 91.84 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 20413 ವಿಶೇಷಚೇತನರಿದ್ದು, 759 ಜನರು ಮನೆಯಲ್ಲೇ ಮತದಾನವನ್ನು ಆಯ್ಕೆ ಮಾಡಿಕೊಂಡಿದ್ದು, ಇನ್ನುಳಿದ 704 ಜನರು ಮತದಾನ ದಿನದಂದು ಮತದಾನ ಮಾಡುವ ಅಭಿಪ್ರಾಯ ಹೊಂದಿದ್ದಾರೆ ಹಾಗೂ ಶೇ. 92.75 ರಷ್ಟು ವಿಶೇಷಚೇತನರು ಮತದಾನ ಮಾಡಿದ್ದಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನವಣಾಧಿಕಾರಿಯೂ ಆದ ಅಕ್ರಂ ಪಾಷಾ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಅನುಕೂಲವಾಗುವಂತೆ ಏಪ್ರಿಲ್ 13 ಹಾಗೂ 14ರ ವರೆಗೆ ನಿಗದಿಪಡಿಸಿ, ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಂಬAಧಿಸಿದವರು ಇದರ ಸದುಪಯೋಗ ಮಾಡಿಕೊಂಡಿರುತ್ತಾರೆAದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.