ಛತ್ತೀಸ್ಗಢ (www.vknews.in) : ನಾರಾಯಣಪುರದಲ್ಲಿ ಬಿಜೆಪಿ ಮುಖಂಡನನ್ನು ಮಾವೋವಾದಿಗಳು ಅಪಹರಿಸಿ ಚಾಕುವಿನಿಂದ ಇರಿದು ಕೊಂದಿದ್ದಾರೆ. ದಂಡಕ್ವಾನ್ ಗ್ರಾಮದ ಬಿಜೆಪಿ ಮುಖಂಡ ಪಂಚಮ್ ದಾಸ್ ಅವರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ. ಆತ ಪೊಲೀಸರೊಂದಿಗೆ ಕೆಲಸ ಮಾಡಿದ್ದಾನೆ ಎಂದು ಬೋರ್ಡ್ ಮೇಲೆ ಬರೆದು ಮಾವೋವಾದಿಗಳು ಸ್ಥಳದಿಂದ ತೆರಳಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ದಿನ ಮಾವೋವಾದಿಗಳ ಎನ್ಕೌಂಟರ್ ನಡೆದ ಕಾಂಗೀರ್ ಜಿಲ್ಲೆಗೆ ನಾರಾಯಣಪುರ ಜಿಲ್ಲೆ ಸಮೀಪದಲ್ಲಿದೆ. ಕಾಂಗೀರ್ ಜಿಲ್ಲೆಯ ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ 29 ಮಾವೋವಾದಿಗಳು ಹತರಾಗಿದ್ದಾರೆ. ಹತ್ಯೆಯಾದವರಲ್ಲಿ ಹಿರಿಯ ಮಾವೋವಾದಿ ನಾಯಕ ಶಂಕರ್ ರಾವ್ ಕೂಡ ಸೇರಿದ್ದಾರೆ ಎನ್ನಲಾಗಿದೆ. ಆದರೆ ಅಧಿಕೃತ ದೃಢೀಕರಣಗಳು ಇನ್ನಷ್ಟೇ ಬರಬೇಕಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.