ಬಂಟ್ವಾಳ (www.vknews. in) : ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ಶನಿವಾರ ಬೆಳಿಗ್ಗೆ ಭಾರಿ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿ ತೀವ್ರತೆಯಿಂದ ಕೂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. ಗಾಳಿಯ ರಭಸಕ್ಕೆ ಸ್ಥಳೀಯವಾಗಿ ಹಲವು ಮನೆ-ಅಂಗಡಿಗಳ ಮೇಲ್ಛಾವಣಿ, ತಗಟು, ಸಿಮೆಂಟ್ ಶೀಟುಗಳು ಹಾರಿ ನೆಲಕ್ಕುರಳಿದೆ. ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಾತ್ರಿಯೇ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರಿಂದಾಗಿ ಶಾಲಾ ಮಕ್ಕಳು ಬಿರುಗಾಳಿಯ ಹೊಡೆತಕ್ಕೆ ಸಿಲುಕುವುದು ತಪ್ಪಿ ಹೋಗಿದೆ. ಮಕ್ಕಳು ಶಾಲೆಗೆ ಹೊರಡುವ ಅದೇ ಸಮಯದಲ್ಲಿ ಈ ಬಿರುಗಾಳಿ ಬೀಸಿದ್ದು, ಭಾರೀ ಮಳೆಯಾಗಿದೆ.
ಇಲ್ಲಿನ ನಿವಾಸಿ ಅಬ್ದುಲ್ ಖಾದರ್ ಅವರ ಮನೆಗೆ ಬಿರುಗಾಳಿಯಿಂದ ಭಾಗಶಃ ಹಾನಿಯಾಗಿದೆ. ಯೂನುಸ್ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುವುದು ಬಿಟ್ಟರೆ ಹೆಚ್ಚಿನ ಅನಾಹುತ ಯಾವುದೂ ಸಂಭವಿಸಿಲ್ಲದೆ ಇರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.