ಬಂಟ್ವಾಳ (www.vknews.in) : ಬಂಟ್ವಾಳ ಕೃಷಿ ಇಲಾಖೆ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸೂಚನೆಯಂತೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸುಮಾರು 2.50 ಎಕರೆ ವಿಸ್ತೀರ್ಣದ ಚೆಂಡಿನ ಗದ್ದೆಯಲ್ಲಿ 5ನೇ ವರ್ಷದ ಭದ್ರತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಶಾಸಕ ರಾಜೇಶ್ ನಾಯಕ್ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ನಾಯಕ್ ಅವರು, ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿಯನ್ನು ಮಾಡಲಾಗಿದೆ. ಕಳೆದ ಬಾರಿ ಮಾಡಿದ ಕೃಷಿಯ ಮೂಲಕ 95 ಸಾವಿರದಷ್ಟು ದೇವಸ್ಥಾನಕ್ಕೆ ಉಳಿತಾಯವಾಗಿದ್ದು, ಇದರ ಹುಲ್ಲು ಸ್ಥಳೀಯ ಅನೇಕ ಕೃಷಿಕರಿಗೆ ಉಪಯೋಗವಾಗಿದೆ ಎಂದರು.
ಭತ್ತದ ಕೃಷಿಯಿಂದ ಹೆಕ್ಟೇರಿಗೆ 80 ಸಾವಿರ ರೂಪಾಯಿ ಲಾಭ ಗಳಿಸುವುದು ನಿಜಕ್ಕೂ ಉತ್ತಮ ಆದಾಯ ಎಂದು ಹೇಳಿದ ಶಾಸಕರು ಭತ್ತದ ಕೃಷಿ ಲಾಭದಾಯಕ ಕೃಷಿ ಎಂಬುದನ್ನು ಸೂಚಿಸುತ್ತದೆ. ಇದರಿಂದ ಇನ್ನಷ್ಟು ಭತ್ತದ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಇದೇ ವೇಳೆ ಮೂರು ಜನ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು. ಈ ಸಂದರ್ಭ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಉಪನಿರ್ದೇಶಕಿ ಕುಮುದ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಕೃಷಿ ಅಧಿಕಾರಿ ನಂದನ್ ಶೆಣೈ, ತಾಂತ್ರಿಕ ಅಧಿಕಾರಿ ಹನುಮಂತ ಕಾಳಗಿ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.