(www.vknews. in) ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಕರ್ನಾಟಕ ವತಿಯಿಂದ ಹುಬ್ಬುನ್ನಬಿ (ಸ.)
ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಕರ್ನಾಟಕ ರಾಜ್ಯ ಇದರ ವತಿಯಿಂದ ದಿನಾಂಕ 21/09/2024 ಶನಿವಾರ ಬೆಳಿಗ್ಗೆ 11.30ಕ್ಕೆ ನಂದರಬೆಟ್ಟು ಆರಿಫ್ ವಿಲ್ಲಾದಲ್ಲಿ ಸಮಿತಿಯ ಗೌರವಧ್ಯಕ್ಷರಾದ ಅಲ್ ಹಾಜ್ ಕೆ. ಎಂ. ಉಸ್ಮಾನುಲ್ ಫೈಝಿ ( ಸಮಸ್ತ ಮುಶಾವರ) ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಮಿಲಾದುನ್ನಬಿ ಕಾರ್ಯಕ್ರಮ ಜರಗಿತು. ಆರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ಹಾಜಿ ಬಿ. ಎಂ. ಬಾವ ಮದನಿಯವರ ಅಧ್ಯಕ್ಷತೆಯಲ್ಲಿ ಚರ್ಚಾಕೂಟ ನಡೆಯಿತು. ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷರುಗಳಾದ ಅಲ್ ಹಾಜ್ ಮಾಹಿನ್ ದಾರಿಮಿ, ಅಲ್ ಹಾಜ್ ಕೆ. ಬಿ. ಅಬ್ದುಲ್ ಖಾದಿರ್ ದಾರಿಮಿ ಹಾಗೂ ಕೋಶಾಧಿಕಾರಿ ಅಬೂಸಿರಾಜ್ ಅಬೂಬಕರ್ ಮುಸ್ಲಿಯಾರ್ ಮಾತನಾಡಿ ದಿನಾಂಕ 23/10/2024ರಂದು SUCC ವತಿಯಿಂದ ಅಲಡ್ಕ ಎಸ್. ಎಸ್. ಆಡಿಟೋರಿಯಂನಲ್ಲಿ ಜರಗಲಿರುವ ಶೇಖುನಾ ಶಂಸುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು. . ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ ನಂದಾವರ, ಅಲ್ ಹಾಜ್ ಪಿ. ಕೆ. ಅಬ್ದುಲ್ ಮಜೀದ್ ಮದನಿ, ಅಲ್ ಹಾಜ್ ಇಕ್ಬಾಲ್ ಹನೀಫಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಪರ್ಲಿಯಾ, ಅಬ್ದುಲ್ ಕರೀಂ ಮುರ್ಶಿದಿ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು. ಆರಂಭದಲ್ಲಿ ಸ್ವಾಗತಿಸಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಟಿ. ಎಂ. ಹನೀಫ್ ಮುಸ್ಲಿಯಾರ್ ಕೊನೆಯಲ್ಲಿ ಧನ್ಯವಾದ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.