(www.vknews. in)ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಕ ಪುತ್ತೂರು ಇಲ್ಲಿ ದಿನಾಂಕ 21/9/2024 ರಂದು ಪೋಷಕರು ಮತ್ತು ಎಸ್ಡಿಎಂಸಿ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ FA1 ಹಾಗೂ FA2 ಪರೀಕ್ಷಾ ಫಲದ ಬಗ್ಗೆ ಹಾಗೂ ಇನ್ನೆರೆಡು ದಿನದಲ್ಲಿ ನಡೆಯುವ SA1 ಪರೀಕ್ಷೆಯ ಬಗ್ಗೆ ಅದಕ್ಕೆ ಮಕ್ಕಳಿಗೆ ಪೂರ್ವ ತಯಾರಿ ನಡೆಸುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಾಬು ರವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯ ರಾಜ್ಯ ಸಂಚಾಲಕರಾದ ಮೊಯ್ದಿನ್ ಕುಟ್ಟಿಯವರು ಶಾಲೆಯಲ್ಲಿ ಪೋಷಕರು ಹಾಗೂ ಎಸ್ಡಿಎಂಸಿ ಯವರ ಜವಾಬ್ದಾರಿ ಹಾಗೂ ಕರ್ತವ್ಯದ ಬಗ್ಗೆ, ಶಾಲೆಯ ಬೆಳವಣಿಗೆಯಲ್ಲಿ ಸಮುದಾಯವನ್ನು ಬಳಸಿಕೊಂಡು ತರಬಹುದಾದ ಬದಲಾವಣೆಯ ಬಗ್ಗೆ ಸೇರಿದ್ದ ಪೋಷಕರಿಗೆ ಹಾಗೂ ಎಸ್ಡಿಎಂಸಿಯವರಿಗೆ ವಿವರಿಸಿದರು.
ಸ್ಥಳೀಯ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಪಂಚಾಯತ್ ಸದಸ್ಯರಾದ ಶ್ರೀಯುತ ಸಾಬಾರವರು ನಮ್ಮೂರ ಶಾಲೆಯನ್ನು ಉಳಿಸುವಲ್ಲಿ ಪಂಚಾಯತ್ ನ ಸಹಕಾರ ಇರಲಿದೆ ಎನ್ನುವುದನ್ನು ತಿಳಿಸಿದರು.
ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಸುನಿತಾ, ಉಪಾಧ್ಯಕ್ಷರಾದ ಮುಹಮ್ಮದ್ ಇಮ್ತಿಯಾಜ್ ಹಾಗೂ ಶಾಲಾ ಎಸ್ಡಿಎಂಸಿ ಸದಸ್ಯರಿಗಳು ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕಿ ಶ್ರೀಮತಿ ಗೋದಾವರಿ ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.