(www.vknews. in) ಚಿಂತಾಮಣಿ:-ಮುರಗಮಲ್ಲ ಹಾಲು ಉತ್ಪಾದಕರ ಸಹಕಾರ ಸಂಘ ಸದಸ್ಯರ ಸಾಮಾನ್ಯ ಸಭೆ
ಚಿಂತಾಮಣಿ ;- ತಾಲ್ಲೂಕಿನ ಮುರಗಮಲ್ಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಸಾಮಾನ್ಯ ಸಭೆಯೂ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೆೊಳ್ಳಲಾಗಿತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯ ಸದಸ್ಯರ ಸಭೆ ನಡೆದಿದ್ದು ,ರಾಜ್ಯದ ಸರ್ಕಾರಿ ವ್ಯವಸ್ಥೆಯಲ್ಲಿ ವರ್ಷ ವಿಡೀ ಬಂದಿರುವಂತಹ ಲಾಭ ನಷ್ಟಗಳಲ್ಲಿ ವಿಲೇಮರಿ ಮಾಡುತ್ತಿರುವ ವಿಚಾರವನ್ನ ಮುಕ್ತವಾಗಿ ಮಾತನಾಡುವಂತಹ ವ್ಯವಸ್ಥೆ ಯನ್ನು ಸರ್ಕಾರ ಇಲಾಖೆ ಎಲ್ಲಾ ನಮ್ಮ ಸರಕಾರಿಗಳಿಗೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಗಳಲ್ಲಿ ಒಟ್ಟು 1900 ಹಾಲು ಉತ್ಪಾದಕರ ಸಂಘಗಳು ಕಾರ್ಯ ನಿರ್ವಹಿಸುತ್ತದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು 235 ಸರಕಾರಿ ಸಂಘಗಳು ಇದ್ದು ಕಾರ್ಯ ನಿರ್ವಹಿಸುತ್ತಿದೆ.
ಒಕ್ಕೂಟದಿಂದ ಬರುತ್ತಿರುವ ಲಾಭ ನಷ್ಟಗಳು ಹಾಗೂ ಒಕ್ಕೂಟದಿಂದ ಆಗುತ್ತಿರುವ ಅನುಕೂಲತೆಗಳು ತಿಳಿಸಬೇಕೆಂದು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.
ಇನ್ನೂ ಮುರಗಮಲ್ಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2023 ನೇ ಸಾಲಿಗೆ 7 ಲಕ್ಷ ಲಾಭ ತಂದಿದ್ದು ಇದಕ್ಕೆ ಮುರಗಮಲ್ಲ ಗ್ರಾಮದ ಹಾಲು ಉತ್ಪಾದಕರ ಸಂಘದ ಒಟ್ಟು 180 ಸದಸ್ಯರ ಬೆಂಬಲ ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚಿಂತಾಮಣಿ ತಾಲ್ಲೂಕು ನಿರ್ದೆಶಕರಾದ ವೈ.ಬಿ ಅಶ್ವಥನಾರಾಯಣ(ಊಲವಾಡಿ ಬಾಬು) ವಿಸ್ತರಣಾಧಿಕಾರಿಗಳಾದ ಶಬಿರ್ ಪಾಷ,ಹಾಗೂ ನಾರಾಯಣಸ್ವಾಮಿ, ಪಶು ವೈದ್ಯಧಿಕಾರಿಯಾದ ಶ್ರೀಮತಿ ಎನ್ ಎಲ್ ರಾಧ, ಉಪ ವ್ಯವಸ್ಥಪಕರು ಡಾಕ್ಟರ್ ಡಿ.ಎಂ ಮಹೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣರೆಡ್ಡಿ, ಎನ್ ವೆಂಕಟರಣವಪ್ಪ, ಉಪಸ್ಥಿತರಿದ್ದರು.
ವರದಿ:-ಸೀನ.ಟಿ ಚಿಂತಾಮಣಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.