(www.vknews.in) ಸಮಯ
ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ ಹೊತ್ತು ಮತ್ತು ಮಾತು ಎರಡು ಬಿಟ್ಟ ಬಾಣದಂತೆ ಮತ್ತೆ ಮರಳಿ ಬತ್ತಳಿಕೆ ಸೇರಲಾರೋ ಎಂಬಂತಹ ಗಾದೆ ಮಾತುಗಳು ಕೇವಲ ಶಾಲೆಯಲ್ಲಿಯ ಪಂಚಾಂಗ ಓದುವ ಸಮಯದಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಹೇಗೆ ಓದಿ ಹಾಗೆ ಬಿಡುವ ಸಂಗತಿಗಳಾಗಿವೆ.ಆದರೆ ಓದಿದ ಗಾದೆಯನ್ನು ಒಮ್ಮೆ ಆಲೋಚನೆಗೆ ಒಳಪಡಿಸಿ ಆಗ ಅದರ ಬೆಲೆ ನಮ್ಮ ಬದುಕಿಗೆ ಎಷ್ಟು ಸೂಕ್ತ ಎಂದು ತಿಳಿಯಬಹುದು ಸಮಯ ಅಥವಾ ಕಾಲವು ಯಾರಿಗಾಗಿ, ಯಾವುದಕ್ಕಾಗಿ, ಯಾವತ್ತೂ ತನ್ನ ಓಟದ ಪಥವನ್ನು ಬದಲಿಸುವುದಿಲ್ಲ ತನ್ನ ಪಾಡಿಗೆ ತಾನು ಮುಂದೋಡುತ್ತಲೇ ಇರುವುದು ಆದರೆ ನಾವು ಆ ಅಮೂಲ್ಯವಾದ ಸಮಯವನ್ನು ನಮ್ಮ ಬದುಕಿನಲ್ಲಿ ಹೇಗೆ ಯಾವಾಗ ? ಎಲ್ಲಿ? ಎಷ್ಟು ? ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರದೊಂದಿಗೆ ಕಳೆದುದೆ ಆದರೆ ಜೀವನ ಪಾವನಾಮೃತ. ಅನ್ಯರ ನೋಡಿ ಅವರಿವರ ಹಾಗೆ ಇರಬೇಕು ಎಂದು ದುರಾಲೋಚನೀಯ ಕ್ರಿಮಿಗಳನ್ನು ಮಸ್ತಕದಲ್ಲಿಟ್ಟುಕೊಂಡು ಸಮಯ ವ್ಯರ್ಥ ಮಾಡುತ್ತಿದ್ದೇವೆ ಸಮಯ ಉಚಿತ ಆದರೆ ಅದು ಎಲ್ಲಾ ಮೌಲ್ಯಕ್ಕಿಂತಲೂ ದೊಡ್ಡದು ಅದನ್ನು ಸ್ವಂತ ಮಾಡಲು ಸಾಧ್ಯವಿಲ್ಲ,ಆದರೆ ಬಳಕೆ ಮಾಡಬಹುದು ಸಮಯವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ,ಆದರೆ ಖರ್ಚು ಮಾಡಬಹುದು ಹೀಗೆ ವೇಳೆಯನ್ನು ನಾವು ಸರಿಯಾಗಿ ಯಾವುದೇ ಲೋಪವಿಲ್ಲದೆ ಬಳಸಿಕೊಂಡಿದ್ದೆ ಆದರೆ ಸಾಧಾರಣ ವ್ಯಕ್ತಿಯು ಕೂಡ ಸಾಧಕ ನಾಗಬಹುದು ಜೊತೆಗೆ ಯೋಜಿತ ಗುರಿಯನ್ನು ತಲುಪಲು ಸಾಧ್ಯವಾಗಬಹುದು ಮಾನವನ ಜೀವಿತಾವಧಿಯು ಸರಾಸರಿ 78 ವರ್ಷಗಳು ಅದರಲ್ಲಿ 28.3 ವರ್ಷಗಳು ಮನುಷ್ಯ ನಿದ್ರೆಯಲ್ಲಿ ಕಳೆಯುತ್ತಾನೆ ಸುಮಾರು 9 ವರ್ಷದ ಕಾಲವನ್ನು ಕೆಲಸದಲ್ಲಿ ಕಳೆಯುತ್ತಾನೆ ಇನ್ನುಳಿದ ಸಮಯವನ್ನು ವೃಥಾ ಖರ್ಚು ಮಾಡುತ್ತಾನೆ.ನಮಗೆ ಒಂದು ವರ್ಷದ ಸಮಯದ ಮಹತ್ವ ತಿಳಿಯಬೇಕಾದರೆ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವ್ಯಕ್ತಿಯನ್ನು ಕೇಳಬೇಕು,ಒಂದು ತಿಂಗಳ ಸಮಯದ ಮಹತ್ವ ತಿಳಿಯಬೇಕಾದರೆ 9 ತಿಂಗಳು ತುಂಬಿದ ಗರ್ಭಿಣಿಯನ್ನು ಕೇಳಬೇಕು ಹಾಗೇ ಒಂದು ವಾರದ ಸಮಯದ ಮಹತ್ವ ತಿಳಿಯಬೇಕಾದರೆ ವಾರಪತ್ರಿಕೆಯ ಸಂಪಾದಕರನ್ನು ಕೇಳಿ ತಿಳಿಯಬೇಕು, ಒಂದು ಗಂಟೆಯ ಸಮಯದ ಮಹತ್ವ ತಿಳಿಯಬೇಕಾದರೆ ತಾತ್ಕಾಲಿಕ ದೂರವಿದ್ದ ಅಮರ ಪ್ರೇಮಿಗಳನ್ನು ಕೇಳಿತಿಳಿಯಬೇಕು ಒಂದು ನಿಮಿಷದ ಮಹತ್ವ ತಿಳಿಯಬೇಕಾದರೆ ಬಸ್ಸು, ಟ್ರೈನ್, ವಿಮಾನವನ್ನು ತಪ್ಪಿಸಿಕೊಂಡ ಯಾತ್ರಿಕರನ್ನು ಕೇಳಬೇಕು , ಇನ್ನು ಒಂದು ಸೆಕೆಂಡಿನ ಸಮಯದ ಬೆಲೆ ತಿಳಿಯಬೇಕಾದರೆ ಸ್ವಲ್ಪದರಲ್ಲಿ ಅಪಘಾತದಿಂದ ಪಾರಾದ ವ್ಯಕ್ತಿಯನ್ನು ಕೇಳಬೇಕು ಅವಾಗ ನಮಗೆ ಪ್ರತಿ ಕ್ಷಣದ ಸಮಯದ ಮಹತ್ವ ಅರ್ಥವಾಗುವುದು ಹಾಗಾಗಿ ನಾವು ನಮ್ಮ ಬದುಕಿನಲ್ಲಿ ಅತ್ಯಮೂಲ್ಯ ಹಾಗೂ ಮರು ಸೃಷ್ಟಿಸಲಾಗದ ಅಂಶವಾದ ಸಮಯದ ಮಹತ್ವ ಅರಿತು ಬಾಳಬೇಕು ಸಮಯದ ಸದುಪಯೋಗದೊಂದಿಗೆ ಜೀವನ ಸಾಗಬೇಕು ಸಮಯ ಹಾಗೂ ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಜೀವನ ಹೇಗಿರಬೇಕು ಹೇಗೆ ಸಾರ್ಥಕತೆ ಪಡೆಯಬೇಕು ಎಂದು ಹೇಳಿದರೆ ಜೀವನದಲ್ಲಿ ಸಮಯಕ್ಕೆ ಉಚಿತ ಪಾತ್ರ ಹಾಗೂ ಪ್ರಾಮುಖ್ಯತೆಯನ್ನು ಕೊಟ್ಟು ನೋಡಬೇಕು ಆಗ ನಮಗೆ ಅದು ತಿಳಿಸಿಕೊಡುತ್ತದೆ.ಆದ್ದರಿಂದ ನಾವು ನಮಗಿರುವ ಜೀವಿತಾವಧಿಯಲ್ಲಿಯ ಸಮಯದ ಮಹತ್ವವನ್ನು ಅರಿತು ಸರಿಯಾದ ಸಮಯಕ್ಕೆ ಉಚಿತ ಹಾಗೂ ಸಮಾಜುಪಯೋಗಿ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು ಸಾರ್ಥಕತೆಯ ಹಾದಿಯಲ್ಲಿ ಕೊಂಡೊಯ್ಯೋಣ…..
ಅಶ್ವಿನಿ ಅಂಗಡಿ… ಶಿಕ್ಷಕಿ ಹಾಗೂ ಲೇಖಕಿ ಬದಾಮಿ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.