(www.vknews.in) ಜುಬೈಲ್ : ಎನ್.ಆರ್.ಐ ಸಹೋದರರು ಮುಕ್ಕ ವತಿಯಿಂದ ಯಶಸ್ವಿ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ.
ಎನ್.ಆರ್.ಐ ಸಹೋದರರು ಮುಕ್ಕ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ದಿನಾಂಕ 26/09/2024 ರಂದು ಸೌದಿ ಅರೇಬಿಯಾದ ಜುಬೈಲ್ “ಮಸ್ಕ್ 7” ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಸೌದಿ ಅರೇಬಿಯಾದ ನಾನಾ ಭಾಗಗಳಿಂದ ಹಾಗೂ ದುಬೈ ಮತ್ತು ಕತಾರ್ ನಿಂದ ಬಂದ ಸುಮಾರು ನೂರಕ್ಕೂ ಮೇಲು ಮಂದಿ ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ NRI ಮುಕ್ಕ ಸಮಿತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕಾಮಗಾರಿ ಹಾಗೂ ಯಶಸ್ವಿ ಕಾರ್ಯ ಸಾಧನೆ ಮತ್ತು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚೆ ನಡೆಯಿತು. ಮುಖ್ಯವಾಗಿ ಎನ್.ಆರ್.ಐ ಸಮಿತಿ ಇದರ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ “ಫ್ಯಾಮಿಲಿ ರಿಲೀಫ್ ಫಂಡ್”(FRF)ಯೋಜನೆಯ ಸದುಪಯೋಗ ಹಾಗೂ ಕಾರ್ಯಗತಗೊಳಿಸುವ ಬಗ್ಗೆ ಅಧ್ಯಕ್ಷರಾದ K M ಹಸನ್ , ಮುಝಫರ್ ಹಾಗೂ ಶಮೀಮ್ ಮೊಯಿದಿನ್ ರವರು ಸಭೆಯಲ್ಲಿ ವಿವರಣೆ ನೀಡಿದರು
ಮುಹಮ್ಮದ್ ಝೈನುದ್ದೀನ್ ರವರು ಎನ್.ಆರ್.ಐ ಮುಕ್ಕ ಇದರ ಸ್ಥಾಪನೆ ಹಾಗೂ ಸಾಧನೆಯ ಸಂಕ್ಷಿಪ್ತ ಹಾಗೂ ಪರಿಪೂರ್ಣ ವಿವರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಶಮೀಮ್ ಮೊಯಿದಿನ್ ರವರು ಬರೆದಿರುವ “ಹಜ್ಜ್ ಅನುಭವದ 2024” ಎಂಬ ಸ್ಥಳೀಯ ಹಜ್ಜ್ ನ ಸಂಪೂರ್ಣ ಮಾರ್ಗದರ್ಶನವಿರುವ ಪುಸ್ತಕ ವನ್ನು ಬಿಡುಗಡೆ ಗೊಳಿಸಲಾಯಿತು, ಜೊತೆಗೆ ಊರಿನಿಂದ ಉಮ್ರಾ ನೆರವೇರಿಸಲು ಬಂದ ಹಿರಿಯರಾದ K M ಇದ್ದಿನಬ್ಬ ,ಇಕ್ಬಾಲ್ ಹಸನ್ ಹಾಗೂ ಸಮಿತಿಯ ಬೆನ್ನೆಲುಬು ಅಬ್ದುಲ್ ಗಫೂರ್ ರವರಿಗೆ ಸನ್ಮಾನ ಮಾಡಲಾಯಿತು.ಶಮೀಮ್ ಮೊಯಿದಿನ್ ಅವರ ನೇತೃತ್ವದಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮವು ಬಹಳ ರೋಮಾಂಚನೀಯ ಹಾಗೂ ಮನರಂಜನೆಯ ಕಾರ್ಯಕ್ರಮದಲ್ಲೊಂದಾಗಿತ್ತು.
ನೂತನ ಸಮಿತಿ ಅಧ್ಯಕ್ಷರಾಗಿ ಸಾಧಿಕ್ ಮೊಯ್ದಿನ್, ಉಪಾಧ್ಯಕ್ಷರುಗಳಾಗಿ ಮುಸ್ತಾಕ್ ಅಹ್ಮದ್ ಹಾಗೂ ಮುಹಮ್ಮದ್ ಶಾಹಿಕ್ , ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಫ್ವಾನ್ ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಝೈನುದ್ದೀನ್ ಹಾಗೂ ರಿಝ್ವಾನ್ ಶಾಫಿ ಕೋಶಾಧಿಕಾರಿ ಯಾಗಿ ಕೆ.ಎಮ್.ಹಸನ್ ಹಾಗೂ ಎಕ್ಸಿಕ್ಯುಟಿವ್ ಸದಸ್ಯರುಗಳನ್ನೊಳಗೊಂಡ ನೂತನ ಸಮಿತಿ ರಚಿಸಲಾಯಿತು.
ಕಾರ್ಯಕ್ರಮವು ಮುಹಮ್ಮದ್ ಅಶ್ರಫ್ ಗದ್ದೆಮನೆ ಯವರ ಕಿರಾಅತ್ ಪಟನೆಯಲ್ಲಿ ಪ್ರಾರಂಭಗೊಂಡು ಮುಹಮ್ಮದ್ ಸಫ್ವಾನ್ ರವರು ಸ್ವಾಗತಿಸಿ , ಸಮಿತಿ ಅಧ್ಯಕ್ಷರಾದ K M ಹಸನ್ ರವರು ಉಧ್ಘಾಟಿಸುವ ಮೂಲಕ ಜರುಗಿದ ಯಶಸ್ವಿ ಸಭೆ ಸಫ್ವಾನ್ ಮತ್ತು ಝೈನುದ್ದೀನ್ ಕಾರ್ಯಕ್ರಮ ನಿರೂಪಣೆಯೊಂದಿಗೆ ಹಾಗು ಮೂರು ಸ್ವಲಾತ್ ಹೇಳಿ ಸಭೆಯನ್ನು ವಿರಮಿಸಲಾಯಿತು.
“ಎನ್.ಆರ್.ಐ ಸಹೋದರರು ಮುಕ್ಕ ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.