(www.vknews. in) ಸಾಲೆತ್ತೂರು ಗಣೇಶ್ ಚತುರ್ಥಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಡಿವೈನ್ ಸ್ಟಾರ್ ಕ್ರೀಡಾ ಮತ್ತು ಕಲಾ ಸಂಘ ಪಾಣಾಜೆ ಕೋಡಿ ಸಾಲೆತ್ತೂರು ಇದರ ವತಿಯಿಂದ ಸಾರ್ವಜನಿಕ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸರ್ವರ ಭಾಗೀದಾರಿಕೆಯಲ್ಲಿ ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಉದ್ಘಾಟನೆಯನ್ನು ಸ್ಥಳೀಯ ನಾಟಿ ವೈದ್ಯರಾದ ವೆಂಕಪ್ಪ ಪಂಡಿತ್ ಅವರು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಿದರು. ಬಳಿಕ ನಡೆದ ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವ ಸ್ಪರ್ಧೆ, ಬಾಂಬೆ ಟೂ ಗೋವಾ, ಸಹಿತ ವಿವಿಧ ಕ್ರೀಡೆಗಳಲ್ಲಿ ಮಕ್ಕಳು, ಹಿರಿಯರು ಕಿರಿಯರು ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಸಂಜೆ ನೆಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಆ ನಂತರ ಸ್ಥಳೀಯ ಮೆಸ್ಕಾಂ ವಿಭಾಗದಲ್ಲಿ ಸಿಬ್ಬಂದಿಯಾಗಿ ನಿವೃತ್ತ ಹೊಂದಿದ ಅಬ್ದುಲ್ ಖಾದರ್ ಮಂಚಿ, ಈಗ ಕಾರ್ಯನಿರ್ವಹಣೆ ಮಾಡುತ್ತಿರುವ ಇಬ್ಬರು ಸಿಬ್ಬಂದಿಗಳೊಂದಿಗೆ ಸ್ಥಳೀಯ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ ಫಲಕ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಹಿರಿಯರಾದ ವೆಂಕಪ್ಪ ಪಂಡಿತ್, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಸಂಘದ ಅಧ್ಯಕ್ಷರಾದ ಅಝೀಝ್ ಕಟ್ಟೆ, ಗೌರವಾಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಪಕ್ಕು ಡಿ ಸೋಜಾ, ರವಿ ಡಿ ಸೋಜಾ, ಬಶೀರ್ ಆಲಾಬೆ ನೂಜಿ,ಟಿಂ ಸಾಮರಸ್ಯ ಮಂಗಳೂರು ತಂಡದ ಸಂಚಾಲಕರಾದ ಉಮ್ಮರ್ ಕುಂಞಿ ಸಾಲೆತ್ತೂರು, ಶಶಿಧರ್ ಕುಂಟೂರು, ಹರೀಶ್ ಕುಂಟೂರು, ಅಬ್ದುಲ್ ರಹಿಮಾನ್ ನೂಜಿಬೈಲು , ಅಶೋಕ್ ಡಿ ಸೋಜಾ, ಪ್ರಸಾದ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಿವಾಸಿ ಸಿಲ್ವನ್ ಡಿ ಸೋಜಾ,ಮನು ಪಾಣಾಜೆ ಕೋಡಿ ಸ್ವಾಗತಿಸಿದರು.ಪ್ರಸಾದ್ ಪಾಣಾಜೆ ಕೋಡಿ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.