(www.vknews. in) ಹನೂರು :ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶರನ್ನವರಾತ್ರಿ ಅಂಗವಾಗಿ 9 ದಿನಗಳ ಕಾಲ ಉಯ್ಯಾ ಲೋತ್ಸವವನ್ನು ನೆರವೇರಿಸುವುದರ ಮೂಲಕ ದಸರಾ ವನ್ನು ವಿಶೇಷವಾಗಿ ಆಚರಿಸ ಲಾಗುತ್ತದೆ.
ಇದಕ್ಕೆ ಗುರುವಾರ ರಾತ್ರಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮ ಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಚಾಲನೆ ನೀಡಲಾಯಿತು.
ಪವಾಡ ಪುರುಷ ಮಹದೇಶ್ವರ ಸ್ವಾಮಿಗೆ ಬೇಡಗಂಪಣ ಪರಂಪರೆಯ ಪದ್ಧತಿಯಂತೆ ಪ್ರತಿ ವರ್ಷ ಮಹಾನವಮಿ ಯಂದು ಶ್ರೀ ಸಾಲೂರು ಬೃಹನ್ಮಠದ ಶ್ರೀಗಳ ಸಾನಿಧ್ಯದಲ್ಲಿ ಉಯ್ಯಾಲೋತ್ಸವ ಹಾಗೂ ಪಡಿಸೇವೆಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಮಹಾನವಮಿ ಯಂದು ಜರುಗುವ ಪಟ್ಟದ ಉಯ್ಯಾಲೆ ಉತ್ಸವಕ್ಕೆ ಅಗತ್ಯವಿರುವ ಬಿದಿರನ್ನು ಕಾಡಿನಿಂದ ತಂದು ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಈ ಆವರಣದಲ್ಲಿ ಹಸಿರು ಚಪ್ಪರವನ್ನು ಹಾಕಲಾಗುತ್ತದೆ.
ತೂಗೂಯ್ಯಾಲೆಯ ತೊಟ್ಟಿಲು ಮಂಟಪವನ್ನು ನಿರ್ಮಿಸಿ 9 ದಿನಗಳ ಕಾಲ ಪ್ರತಿದಿನ ರಾತ್ರಿ 8.30ರ ಬಳಿಕ ದೇಗುಲದಲ್ಲಿ ಸ್ವಾಮಿಗೆ ಅಭಿಷೇಕ ಹಾಗೂ ನೈವೇದ್ಯವನ್ನು ಅರ್ಪಿಸಿ ಮಾದಪ್ಪನ ಪಟ್ಟದ ಉಯ್ಯಾಲೆಯ ಉತ್ಸವದ ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಉಯ್ಯಾಲೋತ್ಸವಕ್ಕೆ ಚಾಲನೆ ನೀಡಲಾಯಿತು.
ವಿಜಯದಶಮಿಯಂದು ದೇಗುಲದಲ್ಲಿರುವ ಪಟ್ಟಗಾರ ರಾಯಣ್ಣ ನಾಯಕನು ಯುದ್ಧಕ್ಕೆ ಬಳಸಿದ ಕತ್ತಿ, ಖಡ್ಗ, ಕಠಾರಿ, ಭರ್ಜಿಗಳು ಹಾಗೂ ಪಟ್ಟದ ಕತ್ತಿಗಳನ್ನು ಉಪವಾಸವಿದ್ದ 30ಕ್ಕೂ ಹೆಚ್ಚು ಬೇಡಗಂಪಣ ಅರ್ಚಕರು ಮಡಿವಸ್ತ್ರ ಧರಿಸಿ ಆಯುಧಗಳನ್ನು ಹೊತ್ತು ಮಂಗಳ ವಾದ್ಯಮೇಳದೊಂದಿಗೆ ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ, ನಂದಿಧ್ವಜಕಂಬ, ತಮಟೆ, ನಗಾರಿ, ಜಾಗಟೆ ಸಮೇತ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಒಡೆಯರ್ ನೀಡಿದ್ದ ವಜ್ರ, ರತ್ನಾಭರಣಗಳಿಂದ ಸಿಂಗಾರ: ಮೈಸೂರು ಅರಸು ಮನೆತನದ ಜಯಚಾಮರಾಜೇಂದ್ರ ಒಡೆಯರ್ ಅವರು ದಸರಾ ಅಂಗವಾಗಿ ಈ ಹಿಂದೆ ಮ.ಬೆಟ್ಟದ ದೇಗುಲಕ್ಕೆ ವಜ್ರ, ರತ್ನಖಚಿತ ಆಭರಣಗಳನ್ನು ನೀಡಿದ್ದರು. ಈ ಆಭರಣಗಳನ್ನು ಪ್ರತಿ ವರ್ಷ ಆಯುಧಪೂಜೆಯಂದು ಶಿವ ಪಾರ್ವತಿಯ ಉತ್ಸವ ಮೂರ್ತಿಯನ್ನು ಸಿಂಗರಿಸಿ ಉಯ್ಯಾಲೆ ಉತ್ಸವವನ್ನು ನೆರವೇರಿಸಲಾಗುತ್ತದೆ. ಈ ವೇಳೆ ಆನೆಯ ಕಂಬಿನ ದೊಡ್ಡಮುತ್ತು, ಮುತ್ತಿನಹಾರ, ಪಚ್ಚೆಯ ಪದಕ, ಬಂಗಾರದ ಮೀಸೆ, ಕಣ್ಮಣಿಗಳ ಜತೆಗೆ 37 ಬಂಗಾರದ ರುದ್ರಾಕ್ಷಿಯ ಮಾಲೆ, ವಜ್ರರತ್ನ ಖಚಿತವಾದ ಮುತ್ತುಗಳ ಕೀರಿಟ ಹಾಗೂ ಗಂಡುಬೇರುಂಡ ಮುತ್ತಿನ ಹಾರದಿಂದ ವಿಗ್ರಹಮೂರ್ತಿಯನ್ನು ಸಿಂಗರಿಸಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ತೂಗೂಯ್ಯಾಲೆಯ ತೊಟ್ಟಿಲಲ್ಲಿ
ಉತ್ಸವ ಮೂರ್ತಿಯನ್ನು ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸಂಬಂಧ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೇಡಗಂಪಣ ಅರ್ಚಕರಿಂದ ಸಕಲ ಸಿದ್ಧತೆಗಳು ನಡೆದಿದೆ.
ಜಂಬೂ ಸವಾರಿ: ಮಾದಪ್ಪನ ದೇಗುಲದಲ್ಲಿ ವಿಜಯದಶಮಿಯಂದು ರಾತ್ರಿ ಪೂಜೆಯ ಬಳಿಕ ಬಿಳಿ ಕುದುರೆ ವಾಹನೋತ್ಸವನ್ನು ನೆರವೇರಿಸುವುದರ ಮೂಲಕ ಜಂಬೂ ಸವಾರಿಯನ್ನು ನಡೆಸಲಾಗುತ್ತದೆ. ಈ ಶ್ವೇತ ವರ್ಣದ ಕುದುರೆಯ ಮೇಲೆ ಶ್ರೀ ಮಹದೇಶ್ವರ ಸ್ವಾಮಿಯ ಪಟ್ಟದ ಕತ್ತಿಯನ್ನು ಬೇಡಗಂಪಣ ಅರ್ಚಕರು ಹಿಡಿಯುತ್ತಾರೆ. ಇದು ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಪ್ರತೀಕವಾಗಿದೆ ಎಂದು ನಂಬಲಾಗಿದೆ.
ಪಟ್ಟದ ಕತ್ತಿಗೆ ಬಲಿಪೂಜೆ: ಈ ಹಿಂದೆ ಬೇಡಗಂಪಣ ರಾಜ್ಯದ ಮೇಲೆ ತಮಿಳುನಾಡಿನ ಕೊಂಗದೊರೆಯು ಪಟ್ಟಗಾರ ರಾಯಣ್ಣನಾಯ್ಕನ ಮಗಳಾದ ದೇವಕಿಯನ್ನು ಸೆರೆ ಹಿಡಿಯಲು ಬಂದಾಗ ಈಕೆಗೆ ಪಟ್ಟದ ಕಥೆಯನ್ನು ನೀಡಲಾಗಿದ್ದು ಈ ವೇಳೆ ಸೋರೆಕಾಯಿ ಮಡುವಿನಲ್ಲಿ ರಾಯಣ್ಣ ಗೆದ್ದ ಕಾರಣಕ್ಕೆ ಪಟ್ಟದ ಕತ್ತಿಗೆ ಬಲಿ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಇದು ಮಾ ಸೇವೆಯು ಬೇಡಗಂಪಣ ಬೆಟ್ಟದಲ್ಲಿ ದಸರಾ ಹಿನ್ನೆಲೆ ನಡೆಯುವ ಧಾರ್ಮಿಕ ಸಂಪ್ರದಾಯವಾಗಿದ್ದು ವಿಶೇಷ ಎನಿಸಿದೆ. ಅರ್ಚಕರಿಂದ ದೇಗುಲದ ಉಯ್ಯಾ ಉತ್ಸವಕ್ಕೆ ಗುರುವಾರ ರಾತ್ರಿ ವಿಶೇಷ ಪೂಜೆಯನ್ನು ನೆರವೇರಿಸುವುದರ ಮೂಲಕ ಒಳಾಂಗಣದಲ್ಲಿ ಜರುಗಲಿದೆ. ಚಾಲನೆ ನೀಡಲಾಗಿದ್ದು ಅಕ್ಟೋಬರ್ 11ರ ವರೆಗೆ ತಿರುಗಲಿದೆ ಅಕ್ಟೋಬರ್ 12ರಂದು ನಡೆಯುವ ಇದಕ್ಕೆ ರಾತ್ರಿ ಸಾಲೂರು ಬಿಳಿ ಕುದುರೆ ವಾಹನ ಉತ್ಸವದ ಮೂಲಕ ಶರನ್ನವರಾತ್ರಿಗೆ ತೆರೆ ಬೀಳಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.